24.1 C
ಪುತ್ತೂರು, ಬೆಳ್ತಂಗಡಿ
May 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಗೋಸಾಗಾಟ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ : ಭಾಜಪಾ. ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಸ್ಪಷ್ಟನೆ

ಬೆಳ್ತಂಗಡಿ: ನಿನ್ನೆ ಧರ್ಮಸ್ಥಳ ಪೊಲೀಸರು ಗೋಸಾಗಾಟವೊಂದನ್ನು ತಡೆಹಿಡಿದು, ವಾಹನಗಳನ್ನು ವಶಪಡೆಸಿಕೊಂಡ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಹಾಗೂ ಅದ್ಯಾವುದೂ ನನ್ನ ವಾಹನಗಳಾಗಿರುವುದಿಲ್ಲ ಎಂದು ಭಾಜಪಾ. ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ
ಗಣೇಶ್ ಗೌಡ ಸ್ಪಷ್ಟಪಡಿಸಿದ್ದಾರೆ.

ಸದ್ರಿ ವಿಷಯದಲ್ಲಿ ಕೆಲವೊಂದು ಜನರು ನನ್ನ ಹೆಸರನ್ನು ತಳುಕುಹಾಕಿದ್ದು ಆ ವಾಹನಗಳು ನನ್ನ ವಾಹನಗಳೆಂದು ಬಿಂಬಿಸಿ ನನ್ನ ತೇಜೋವಧೆ ಮಾಡಲು ಪ್ರಯತ್ನಿಸುತ್ತಿರುವುದು ನನಗೆ ಸಾಮಾಜಿಕ ಜಾಲತಾಣಗಳಲ್ಲಿ
ತಿಳಿದುಬಂದ ಕಾರಣ ಈ ಪತ್ರಿಕಾ ಹೇಳಿಕೆಯ ಮೂಲಕ ನನ್ನ ಸ್ಪಷ್ಟೀಕರಣ ನೀಡುತಿದ್ದೇನೆ.

ಮೇಲ್ಕಂಡ ಗೋಸಾಗಾಟ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಹಾಗೂ ಅದ್ಯಾವುದೂ ನನ್ನ ವಾಹನಗಳಾಗಿರುವುದಿಲ್ಲ.

ವಿನಾಕಾರಣ ನನ್ನ ಹಾಗೂ ನಾನು ಪ್ರತಿನಿಧಿಸುವ ಪಕ್ಷದ ಹೆಸರನ್ನು ಹಾಳು ಮಾಡಲು ಪ್ರಯತ್ನಪಡುತ್ತಿರುವವರ ವಿರುದ್ಧ ಶೀಘ್ರ ಕಾನೂನು ಮೊರೆ ಹೋಗಲಿದ್ದೇನೆ ಎಂದು ತಿಳಿಸಿದ್ದಾರೆ.

Related posts

ಬೆಳ್ತಂಗಡಿ: ಭುಡ್ಣಾರು ಶಕುಂತಲಾ ಶೆಟ್ಟಿ ನಿಧನ

Suddi Udaya

ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಉಜಿರೆಯ ರಂಜಿತ್ ನಾಯ್ಕ್ ಎನ್. ಆರ್ ನೇಮಕ

Suddi Udaya

ಧರ್ಮಸ್ಥಳ: ದೊಂಡೋಲೆ ನಿವಾಸಿ ಪುಂಡಲೀಕ ಪ್ರಭು ನೇಣು ಬಿಗಿದುಕೊಂಡು ಆತ್ಮಹತ್ಯೆ

Suddi Udaya

ಸೋಣಂದೂರು: ಜಿಲ್ಲಾಮಟ್ಟದ ಪುರುಷರ 55 ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ಪದಪ್ರಧಾನ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ರೋಗ ತಪಾಸಣಾ ಶಿಬಿರ

Suddi Udaya
error: Content is protected !!