ಪುಂಜಾಲಕಟ್ಟೆ : ಕನ್ಯಾಡಿಯ ಸೇವಾಭಾರತಿ ಹಾಗೂ ಸೌತಡ್ಕದ ಸೇವಾಧಾಮದ ಸಂಯುಕ್ತ ಆಶ್ರಯದಲ್ಲಿ ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಬೆನ್ನುಹುರಿ ಅಪಘಾತದ ಬಗೆಗೆ ಮಾಹಿತಿ ಕಾರ್ಯಾಗಾರ ವನ್ನು ಆಯೋಜಿಸಲಾಯಿತು.
ಸೇವಾಭಾರತಿಯ ಖಜಾಂಚಿ ಕೆ. ವಿನಾಯಕ ರಾವ್ ಬೆನ್ನುಹುರಿ ಅಪಘಾತ ಮತ್ತು ದ್ವಿತೀಯಾಂತರ ಸಮಸ್ಯೆಗಳು ಹಾಗೂ ಬೆನ್ನುಹುರಿ ಅಪಘಾತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ. ಕೆ. ಶರತ್ ಕುಮಾರ್, ಆಂತರಿಕ ಗುಣಮಟ್ಟ ಭರವಸಾ ಕೋಶ ಸಂಚಾಲಕ ಡಾ. ಲೋಕೇಶ್, ರೆಡ್ ಕ್ರಾಸ್ ಸಂಚಾಲಕ ಪ್ರೊ. ಶೇಖರ್, ರೋವರ್ ಮತ್ತು ರೆಂಜರ್ಸ್ ಸಂಚಾಲಕ ಪ್ರೊ.ಆಂಜನೇಯ ಎಂ.ಎನ್. , ಸೇವಾಭಾರತಿಯ ಹಿರಿಯ ಕ್ಷೇತ್ರ ಸಂಯೋಜಕ ಮನು ಆರ್, ಉಡುಪಿ ಕ್ಷೇತ್ರ ಸಂಯೋಜಕ ಶಶಾಂತ್ ಉಪಸ್ಥಿತರಿದ್ದರು.
ಒಟ್ಟು 71 ಮಂದಿ ವಿದ್ಯಾರ್ಥಿಗಳು ಜಾಗೃತಿ ಕಾರ್ಯಗಾರದಲ್ಲಿ ಭಾಗವಹಿಸಿದದ್ದರು.