30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ತೋಟತ್ತಾಡಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ದಿನಕರ ನಾಯಕ್ ಬೆಳ್ತಂಗಡಿ ಮಾದರಿ ಶಾಲೆಗೆ ವಗಾ೯ವಣೆ

ಬೆಳ್ತಂಗಡಿ: ಸರಕಾರಿ ಉನ್ನತ ಪ್ರಾಥಮಿಕ ಶಾಲೆ ತೋಟತ್ತಾಡಿ ಶಾಲೆಯಲ್ಲಿ 26 ವಷ೯ಗಳ ಸುಧೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿದ ಪ್ರಭಾರ ಮುಖ್ಯ ಶಿಕ್ಷಕ ದಿನಕರ ನಾಯಕ್ ಇದೀಗ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇಲ್ಲಿಗೆ ವರ್ಗಾವಣೆಗೊಂಡಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮದ ನಿವಾಸಿಯಾಗಿರುವ ಇವರು ಪ್ರಾಥಮಿಕ ಶಾಲೆ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ. ಪ್ರೌಢಶಾಲೆ ಶಿಕ್ಷಣ ಸೇಂಟ್ ಮೇರಿ ಸೀರಿಯಲ್ ಜೂನಿಯರ್ ಕಾಲೇಜು ಬ್ರಹ್ಮಾವರ, ಟಿ.ಸಿ.ಹೆಚ್.ಶಿಕ್ಷಣ ಕುಮುದಾ ಉಮಾ ಶಂಕರ ಶಿಕ್ಷಕರ ತರಬೇತಿ ಕೇಂದ್ರ ಕೊಕ್ಕರ್ಣಿ ಬ್ರಹ್ಮಾವರದಲ್ಲಿ ಪೂರೈಸಿ, 1986 ರಲ್ಲಿ ಅನಿತಾ ವಿದ್ಯಾ ಸಂಸ್ಥೆ ಕೊಕ್ಕರ್ಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡು ವರ್ಷಗಳ ಶಿಕ್ಷಕ ಸೇವೆ ಆರಂಭಿಸಿದರು.
ನಂತರ 1989 ರಿಂದ ಅನಂತ ಪದ್ಮನಾಭ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಂದಾಡಿ ಯಲ್ಲಿ ನಾಲ್ಕು ವರುಷಗಳ ಶಿಕ್ಷಕ ವೃತ್ತಿ ಸೇವೆ, 1994 ರಿಂದ 1997 ಜನವರಿ ವರೆಗೆ ಅನಿತಾ ವಿದ್ಯಾಸಂಸ್ಥೆ ಕೊಕ್ಕರ್ಣಿ ಬ್ರಹ್ಮಾವರ ತಾಲೂಕು ಆಡಳಿತ ಸಂಸ್ಥೆಯಲ್ಲಿ ನಾಲ್ಕು ವರ್ಷಗಳ ಶಿಕ್ಷಕ ಸೇವೆ, ನಂತರ 1997 ಫೆಬ್ರವರಿ ತಿಂಗಳಲ್ಲಿ ಸರಕಾರಿ ಶಾಲಾ ಶಿಕ್ಷಕನಾಗಿ ನೇಮಕಾತಿಗೊಂಡು ಬೆಳ್ತಂಗಡಿ ತಾಲೂಕಿನ ಸರಕಾರಿ ಉನ್ನತ ಪ್ರಾಥಮಿಕ ಶಾಲೆ ತೋಟತ್ತಾಡಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದರು.

ಸುಧೀರ್ಘ 2023 ಜುಲೈ ತಿಂಗಳ ವರೆಗೆ ಸೇವೆ ಸಲ್ಲಿಸಿ ಇದೀಗ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿಗೆ ವರ್ಗಾವಣೆಯಾಗಿದ್ದಾರೆ.

Related posts

ಫೆ.13: ಅರೆಮಲೆಬೆಟ್ಟ ಜಾತ್ರಾ ಮಹೋತ್ಸವ

Suddi Udaya

ಸೀರೋ ಮಲಬಾರ್ ಧರ್ಮ ಸಭೆಯಲ್ಲಿ ವಿಭೂತಿ ಆಚರಣೆಯೊಂದಿಗೆ ವ್ರತಚಾರಣೆಯಕಾಲಕ್ಕೆ ಪ್ರವೇಶ

Suddi Udaya

ರೈತರು ಆದಷ್ಟು ಬೇಗ ಫ್ರುಟ್ಸ್ ಐಡಿ ನೋಂದಣಿ ಮಾಡಬೇಕು ಹಾಗೂ: 18 ವರ್ಷವಾದವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾವಣಿ ಮಾಡಿಕೊಳ್ಳಬೇಕು: ಪೃಥ್ವಿ ಸಾನಿಕಂ ಪತ್ರಿಕಾಗೋಷ್ಠಿ

Suddi Udaya

ಖ್ಯಾತ ನೋಟರಿ ನ್ಯಾಯವಾದಿ ಸೇವಿಯರ್ ಪಾಲೇಲಿ ಕಾಂಗ್ರೆಸ್ ಸೇರ್ಪಡೆ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ

Suddi Udaya

ಕಳಿಯ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮತಯಾಚನೆ

Suddi Udaya
error: Content is protected !!