ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಚಂದ್ರಯಾನ -3 ಯಶಸ್ವಿಯಾಗಿ ಉಡಾವಣೆಯಾಗಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3 ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಚಂದ್ರಯಾನ -3 ಚಂದ್ರನ ಮೇಲ್ಮೀಯನ್ನು ಅಧ್ಯಯನ ಮಾಡುವ ಮತ್ತು ‘ನಮ್ಮ ಜ್ಞಾನವನ್ನು ಹೆಚ್ಚಿಸುವ ಹಲವಾರು ವೈಜ್ಞಾನಿಕ ಉಪಕರಣಗಳನ್ನು ಸಹ ಹೊಂದಿದೆ.
ಪ್ರಸಿದ್ಧ ಭಾರತೀಯ ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರಿಗೆ ಗೌರವಾರ್ಥವಾಗಿ, ಚಂದ್ರಯಾನ-3 ಮಿಷನ್ ಲ್ಯಾಂಡರ್‌ಗೆ “ವಿಕ್ರಮ್” ಎಂದು ಹೆಸರಿಸಲಾಗಿದೆ.
ಚಂದ್ರಯಾನ-3 ಮಿಷನ್ ಜೊತೆಯಲ್ಲಿರುವ ರೋವರ್ ಅನ್ನು ಸೂಕ್ತವಾಗಿ “ಪ್ರಜ್ಞಾನ್” ಎಂದು ಹೆಸರಿಸಲಾಗಿದೆ. ಇದನ್ನು ಸಂಸ್ಕೃತ ಪದದಿಂದ ಪಡೆಯಲಾಗಿದ್ದು, “ಬುದ್ಧಿವಂತಿಕೆ” ಎಂಬ ಅರ್ಥವನ್ನು ನೀಡುತ್ತದೆ.