April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿವರದಿ

ಬೆನಕ ಆಸ್ಪತ್ರೆಯಲ್ಲಿ ನೂತನ ಆವಿಷ್ಕಾರದ ಕ್ಷ-ಕಿರಣ ಯಂತ್ರ ಉದ್ಘಾಟನೆ

ಉಜಿರೆ: ಎನ್.ಎ.ಬಿ.ಎಚ್. ಪುರಸ್ಕೃತ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಹೊಸ ಆವಿಷ್ಕಾರದ ಬಿಪಿಎಲ್ ಕಂಪನಿಯ D.R.-1 Prime ಮಾದರಿಯ ಕ್ಷ-ಕಿರಣ(X-Ray) ಯಂತ್ರವನ್ನು ಜು.14 ರಂದು ದ.ಕ ಜಿಲ್ಲೆಯ ಪ್ರಖ್ಯಾತ ಹೃದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ದ.ಕ ಜಿಲ್ಲೆಯ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಇಂಥ ಅತ್ಯುತ್ತಮವಾದ ನೂತನ ಆವಿಷ್ಕಾರದ ಯಂತ್ರವನ್ನು ನೋಡಬಹುದಾಗಿದೆ. ಈ ಕ್ಷ-ಕಿರಣ ಯಂತ್ರವು ಎಲುಬುಗಳ ಸೂಕ್ಷ್ಮತಿಸೂಕ್ಷ್ಮ ಬಿರುಕುಗಳನ್ನು ಕೂಡ ಗುರುತಿಸುವ ಸಾಮರ್ಥ್ಯ ಹೊಂದಿದ್ದು, ಅವಶ್ಯಕತೆ ಇರುವ ರೋಗಿಗಳ ಚಿಕಿತ್ಸೆಗೆ ತುಂಬಾ ಅನುಕೂಲವಾಗುತ್ತದೆಂದು ಡಾ.ಕಾಮತ್ ರವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಉಜಿರೆಯಂತ ಹಳ್ಳಿಯ ಈ ಆಸ್ಪತ್ರೆಯಲ್ಲಿ ಇಂತಹ ನೂತನ ಆವಿಷ್ಕಾರದ ಯಂತ್ರವನ್ನು ಅಳವಡಿಸಿದ್ದಕ್ಕಾಗಿ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ರವರನ್ನು ಅಭಿನಂದಿಸಿದರು.
ಡಾ. ಭಾರತೀಯವರು ಹೂಗುಚ್ಛ ನೀಡಿ ಡಾ.ಕಾಮತ್ ರವರನ್ನು ಸ್ವಾಗತಿಸಿದರು. ಡಾ.ಗೋಪಾಲಕೃಷ್ಣರವರು ನೆನಪಿನ ಕಾಣಿಕೆಯನ್ನು ನೀಡುವ ಮೂಲಕ ಡಾ.ಕಾಮತ್ ರವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಬೆನಕ ಆಸ್ಪತ್ರೆಯ ಎಲುಬು, ಕೀಲು ತಜ್ಞರಾದ ಡಾ.ರಜತ್ ಹೆಚ್.ಪಿ ಮತ್ತು ಸ್ತ್ತ್ರೀರೋಗ ತಜ್ಞರಾದ ಡಾ. ಅಂಕಿತ ಜಿ.ಭಟ್ ರವರು ಉಪಸ್ಥಿತರಿದ್ದರು. ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ರೋಗಿಗಳು, ಅವರ ಸಂಬಂಧಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿB.P.L ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ

Suddi Udaya

ಮಾ.22-23: ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನದ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಕಲ್ಮಂಜ: ಆಟೋ ಚಾಲಕ ಪ್ರಮೋದ್ ಗೌಡ ನೇಣು ಬಿಗಿದು ಆತ್ಮಹತ್ಯೆ

Suddi Udaya

ಭಾರೀ ಮಳೆ ಕಕ್ಕಿಂಜೆಯಲ್ಲಿ ಕುಸಿದು ಬಿದ್ದ ಮನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿ ಸ್ವಚ್ಛತಾ ಕಾರ್ಯ

Suddi Udaya

ವಿಧಾನಪರಿಷತ್ ಉಪಚುನಾವಣೆ: ಬಿಜೆಪಿಯಿಂದ ಉಸ್ತುವಾರಿಗಳ ನೇಮಕ

Suddi Udaya
error: Content is protected !!