25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿವರದಿ

ದ.ಕ ಜಿಲ್ಲಾ ಕಸಾಪ ವತಿಯಿಂದ ನಾಲ್ವರು ಹಿರಿಯ ಸಾಹಿತಿಗಳ ಭೇಟಿ, ಯೋಗಕ್ಷೇಮ ವಿಚಾರಣೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ನಾಲ್ವರು ಹಿರಿಯ ಸಾಹಿತಿಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಪುರಸ್ಕರಿಸಲಾಯಿತು.

ದ.ಕ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಎಂಪಿ ಶ್ರೀನಾಥ ಅವರ ನೇತೃತ್ವದ ತಂಡ ಗುರುವಾರ ಮಂಗಳೂರು ಪರಿಸರದ ಹಿರಿಯ ಸಾಹಿತಿಗಳಾದ ಪ್ರೊ. ಕೆ. ಟಿ ಗಟ್ಟಿ, ಡಾ. ವಾಮನ ನಂದಾವರ, ಸದಾನಂದ ಸುವರ್ಣ, ಕೇಶವ ಕುಡ್ಲ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿತು. ಜಿಲ್ಲಾ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ಕಿರಣಪ್ರಸಾದ್ ರೈ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮಂಜುನಾಥ್‌ ರೇವಣ್ಕರ್,ಎಂಪಿ ಸಾಕೇತ್ ರಾವ್ ಮುಂತಾದವರು ಜಿಲ್ಲಾ ಕಸಾಪ ತಂಡದಲ್ಲಿದ್ದರು.


ಕಾದಂಬರಿಕಾರ ಕೆ.ಟಿ ಗಟ್ಟಿ ಅವರು, ಸಾಹಿತ್ಯದ ವಿಚಾರಗಳನ್ನು ಚರ್ಚಿಸಿದರು. ಸಾಹಿತ್ಯಲೋಕದ ಇತ್ತೀಚಿನ ಬೆಳವಣಿಗೆಗಳನ್ನು ಕೇಳಿ ತಿಳಿದುಕೊಂಡರು. ಹಿರಿಯ ಸಾಹಿತಿ ಕೇಶವ ಕುಡ್ಲ ಅವರ ಮನೆಗೆ ತೆರಳಿದ ಜಿಲ್ಲಾ ಕಸಾಪ ಅಧ್ಯಕ್ಷರ ತಂಡ ಯೋಗಕ್ಷೇಮ ವಿಚಾರಿಸಿದರು. ಕೆಶವ ಕುಡ್ಲ ಅವರು ತಮ್ಮ ಸಾಹಿತ್ಯದ ಅನುಭವಗಳನ್ನು ಹಂಚಿಕೊಂಡರು. ತಮ್ಮನ್ನು ಭೇಟಿ ಮಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಡಾ. ವಾಮನ ನಂದಾವರ ಮತ್ತು ಪ್ರೊ. ಚಂದ್ರಕಲಾ ನಂದಾವರ ದಂಪತಿಗಳನ್ನೂ ಭೇಟಿ ಮಾಡಿ ಕುಶಲ ವಿಚಾರಿಸಲಾಯಿತು. ಹಿರಿಯ ರಂಗಕರ್ಮಿ, ಚಿತ್ರ ನಿರ್ದೇಶಕ ಸದಾನಂದ ಸುವರ್ಣ ಅವರು ಬದುಕಿನ ಸುಂದರ ಕ್ಷಣಗಳನ್ನು ಮೆಲುಕು ಹಾಕಿ ನಾಟಕದ ಆ ದಿನಗಳನ್ನು ನೆನಪಿಸಿಕೊಂಡರು .ಡಾ.ಎಂ.ಪಿ ಶ್ರೀನಾಥ ಅವರು ಹಾರ-ಶಾಲು ತೊಡಿಸಿ ಗೌರವ ಸಲ್ಲಿಸಿದರು.

Related posts

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ಪುತ್ತೂರು ಶಾಸಕ ಅಶೋಕ್ ರೈ ಗೆ ಆಮಂತ್ರಣ

Suddi Udaya

ಎಸ್.ಡಿ.ಎಂ. ಬಿ.ಎಡ್ , ಡಿ.ಇಎಲ್.ಇಡಿ ಹಾಗೂ ಶ್ರೀ ಧ.ಮಂ. ಮಹಿಳಾ ಐಟಿಐ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಕ್ರೀಡಾಕೂಟ

Suddi Udaya

ಪಡಂಗಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಗೆ ಹಲವು ಪ್ರಶಸ್ತಿ

Suddi Udaya

ನಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜಯಲಕ್ಷ್ಮಿಗೆ ಶ್ರದ್ಧಾಂಜಲಿ ಸಮರ್ಪಣೆ

Suddi Udaya

ಪದ್ಮುಂಜದಲ್ಲಿ ಅಕ್ರಮ ಗೋ ಸಾಗಾಟ: ವಾಹನ ಸಹಿತ ಆರೋಪಿ ಬಂಧನ

Suddi Udaya
error: Content is protected !!