September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿವರದಿ

ದ.ಕ ಜಿಲ್ಲಾ ಕಸಾಪ ವತಿಯಿಂದ ನಾಲ್ವರು ಹಿರಿಯ ಸಾಹಿತಿಗಳ ಭೇಟಿ, ಯೋಗಕ್ಷೇಮ ವಿಚಾರಣೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ನಾಲ್ವರು ಹಿರಿಯ ಸಾಹಿತಿಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಪುರಸ್ಕರಿಸಲಾಯಿತು.

ದ.ಕ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಎಂಪಿ ಶ್ರೀನಾಥ ಅವರ ನೇತೃತ್ವದ ತಂಡ ಗುರುವಾರ ಮಂಗಳೂರು ಪರಿಸರದ ಹಿರಿಯ ಸಾಹಿತಿಗಳಾದ ಪ್ರೊ. ಕೆ. ಟಿ ಗಟ್ಟಿ, ಡಾ. ವಾಮನ ನಂದಾವರ, ಸದಾನಂದ ಸುವರ್ಣ, ಕೇಶವ ಕುಡ್ಲ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿತು. ಜಿಲ್ಲಾ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ಕಿರಣಪ್ರಸಾದ್ ರೈ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮಂಜುನಾಥ್‌ ರೇವಣ್ಕರ್,ಎಂಪಿ ಸಾಕೇತ್ ರಾವ್ ಮುಂತಾದವರು ಜಿಲ್ಲಾ ಕಸಾಪ ತಂಡದಲ್ಲಿದ್ದರು.


ಕಾದಂಬರಿಕಾರ ಕೆ.ಟಿ ಗಟ್ಟಿ ಅವರು, ಸಾಹಿತ್ಯದ ವಿಚಾರಗಳನ್ನು ಚರ್ಚಿಸಿದರು. ಸಾಹಿತ್ಯಲೋಕದ ಇತ್ತೀಚಿನ ಬೆಳವಣಿಗೆಗಳನ್ನು ಕೇಳಿ ತಿಳಿದುಕೊಂಡರು. ಹಿರಿಯ ಸಾಹಿತಿ ಕೇಶವ ಕುಡ್ಲ ಅವರ ಮನೆಗೆ ತೆರಳಿದ ಜಿಲ್ಲಾ ಕಸಾಪ ಅಧ್ಯಕ್ಷರ ತಂಡ ಯೋಗಕ್ಷೇಮ ವಿಚಾರಿಸಿದರು. ಕೆಶವ ಕುಡ್ಲ ಅವರು ತಮ್ಮ ಸಾಹಿತ್ಯದ ಅನುಭವಗಳನ್ನು ಹಂಚಿಕೊಂಡರು. ತಮ್ಮನ್ನು ಭೇಟಿ ಮಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಡಾ. ವಾಮನ ನಂದಾವರ ಮತ್ತು ಪ್ರೊ. ಚಂದ್ರಕಲಾ ನಂದಾವರ ದಂಪತಿಗಳನ್ನೂ ಭೇಟಿ ಮಾಡಿ ಕುಶಲ ವಿಚಾರಿಸಲಾಯಿತು. ಹಿರಿಯ ರಂಗಕರ್ಮಿ, ಚಿತ್ರ ನಿರ್ದೇಶಕ ಸದಾನಂದ ಸುವರ್ಣ ಅವರು ಬದುಕಿನ ಸುಂದರ ಕ್ಷಣಗಳನ್ನು ಮೆಲುಕು ಹಾಕಿ ನಾಟಕದ ಆ ದಿನಗಳನ್ನು ನೆನಪಿಸಿಕೊಂಡರು .ಡಾ.ಎಂ.ಪಿ ಶ್ರೀನಾಥ ಅವರು ಹಾರ-ಶಾಲು ತೊಡಿಸಿ ಗೌರವ ಸಲ್ಲಿಸಿದರು.

Related posts

ವಾಣಿ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ: ಹಣ್ಣಿನ ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಸಂಕಲ್ಪ

Suddi Udaya

ಉಜಿರೆ: ಮಾಚಾರು ನಿವಾಸಿ ನಿವೃತ್ತ ಮೆಸ್ಕಾಂ ಉದ್ಯೋಗಿ ಆನಂದ ಗೌಡ ನಿಧನ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ವಿದ್ಯಾರ್ಥಿವೇತನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಾ.12: ಮದ್ದಡ್ಕತಾಯಿ ಶ್ರೀ ರಕ್ತೇಶ್ವರಿ, ಪಿಲಿಚಾಮುಂಡಿ ದೈವಸ್ಥಾನದ ದೈವಗಳ ಪ್ರತಿಷ್ಠಾ ಕಾರ್ಯಕ್ರಮ-ಆಮoತ್ರಣ ಪತ್ರಿಕೆ ಬಿಡುಗಡೆ

Suddi Udaya

ಮುಂಡಾಜೆ ಕೀರ್ತನಾ ಕಲಾತಂಡದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಅವಲಕ್ಕಿ– ಬೆಲ್ಲ ವಿತರಣೆ

Suddi Udaya

ಕ್ರಿಯೇಟಿವ್ ಸಂಸ್ಥೆಯ ಉಚಿತ ಶಿಕ್ಷಣದ ‘ಹೊಂಗಿರಣ’ಯೋಜನೆಗೆ ಅರ್ಜಿ ಆಹ್ವಾನ

Suddi Udaya
error: Content is protected !!