23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಎ.ಆರ್.ಎಂ ಮೋಟಾರ್ಸ್ ನಲ್ಲಿ ಕಿಯಾ ಕಂಪನಿಯ ‘ನ್ಯೂ ಸೆಲ್ಟೋಸ್’ ಕಾರು ಬಿಡುಗಡೆ

ಮಂಗಳೂರು: ದೇಶದ ಪ್ರಖ್ಯಾತ ಅಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್ ಇಂಡಿಯಾ ಇವರ ನೂತನ ನ್ಯೂ ಸೆಲ್ಟೋಸ್’ ಕಾರನ್ನು ಜು.14 ರಂದು ದೇಶಾದ್ಯಂತ ಏಕಕಾಲದಲ್ಲಿ ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಯಿತು. ಆ ಪ್ರಕಾರ ಕಿಯಾ ಮೋಟಾರ್ಸ್ ನವರ ಮಂಗಳೂರಿನ ಅಧಿಕೃತ ಡೀಲರ್ ಎ.ಆರ್.ಎಂ ಮೋಟಾರ್ಸ್ ನಲ್ಲಿಯೂ ನೂತನ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ಸತೀಶ್ ಎನ್. ಕಾಮತ್, ಕಾರ್ತಿಕ್ ಸಾಲ್ಯಾನ್ ಹಾಗೂ ಸಂಸ್ಥೆಯ ನಿರ್ದೇಶಕರುಗಳಾದ ಆರೂರು ವರುಣ್ ರಾವ್ ಮತ್ತು ಆರೂರು ವಿಕ್ರಂ ರಾವ್ ರವರು ನೂತನ ವಾಹನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪೋರ್‌ವಿಂಡ್ಸ್ ಜಾಹೀರಾತು ಸಂಸ್ಥೆಯ ನಿರ್ದೇಶಕ ಇ ಫೆರ್ನಾಂಡಿಸ್, ಎ.ಆರ್.ಎಂ ಮೋಟರ್ಸ್ನ ವೈಸ್‌ ಪ್ರೆಸಿಡೆಂಟ್ ವಿವನ್ ಸೋನ್ಸ್ ಹಾಗೂ ಜನರಲ್ ಮ್ಯಾನೇಜರ್ ನಿತೀನ್ ಕೃಷ್ಣರವರು ಉಪಸ್ಥಿತರಿದ್ದರು.

ನ್ಯೂ ಸೆಲ್ಟೋಸ್ ಕಾರಿನ ವೈಶಿಷ್ಟ್ಯಗಳು: 32 ಸೇಫ್ಟಿ ವಿಶೇಷತೆಗಳೊಂದಿಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನಲ್ಲಿ ಲಭ್ಯವಿದೆ. ನೂತನ ವಾಹನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಥವಾ ಟೆಸ್ಟ್ ಡ್ರೈವ್‌ಗಾಗಿ ಎ.ಆರ್.ಎಂ ಮೋಟಾರ್ಸ್ನ ಮಂಗಳೂರು, ಉಡುಪಿ ಮತ್ತು ಕುಶಾಲನಗರ ಶಾಖೆಯನ್ನು ಸಂಪರ್ಕಿಸಬಹುದು. ಗ್ರಾಹಕರ ವಿನಂತಿಯ ಮೇರೆಗೆ ಸಂಸ್ಥೆಯು ಎಲ್ಲಾ ಆದಿತ್ಯವಾರವೂ ತೆರೆದಿರುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಕೊಕ್ರಾಡಿ: ಭೀಕರ ರಸ್ತೆ ಅಪಘಾತ

Suddi Udaya

ಬೆಳ್ತಂಗಡಿ: ಅಚ್ಚಿನಡ್ಕದಲ್ಲಿ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಡಿ.8 ರಿಂದ ಡಿ.12 ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya

ಶ್ರೀ ರಾಮ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಲಮಂಗಲ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ವಿತರಣೆ

Suddi Udaya
error: Content is protected !!