ಶ್ರೀ ಧ. ಮಂ. ಕಾಲೇಜಿನಲ್ಲಿ ತುಳು ಜಾನಪದ ಮಹಾಕವಿ ಮಾಚಾರ್ ಗೋಪಾಲ ನಾಯ್ಕ ಸಂಸ್ಮರಣೆ ಮತ್ತು ತುಳುವ ಮೌಖಿಕ ಪರಂಪರೆ ವಿಷಯದ ಕುರಿತು ವಿಶೇಷ ಉಪನ್ಯಾಸ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗವು ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ತಾಲೂಕು ಘಟಕದ ಸಹಯೋಗದಲ್ಲಿ ತುಳು ಜಾನಪದ ಮಹಾಕವಿ ಮಾಚಾರ್ ಗೋಪಾಲ ನಾಯ್ಕ ಸಂಸ್ಮರಣೆ ಮತ್ತು ತುಳುವ ಮೌಖಿಕ ಪರಂಪರೆ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜು.8, 2023 ರಂದು ಕಾಲೇಜಿನಲ್ಲಿ ಆಯೋಜಿಸಿತು.
ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅವರು ಭಾಗವಹಿಸಿ ಗೋಪಾಲ ನಾಯ್ಕ ಅವರು ಪ್ರತಿಭಾವಂತ ಕವಿಯಾಗಿಯಾಗಿದ್ದರು. ತುಳುವ ಮೌಖಿಕ ಪರಂಪರೆಯ ಸಮರ್ಥ ಕೊಂಡಿಯಾಗಿ ಅಪಾರ ಕೊಡುಗೆ ನೀಡಿದ್ದಾರೆ. ಅವರೊಬ್ಬ ಅಂತಾರಾಷ್ಟ್ರೀಯ ಕವಿಯಾಗಿ ಹೊರಹೊಮ್ಮಿದ್ದಾರೆ. ತುಳುನಾಡಿನ ಜಾನಪದ ಅಷ್ಟೊಂದು ಶ್ರೀಮಂತವಾದುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ವಹಿಸಿದ್ದರು. ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ, ಗೋಪಾಲ ನಾಯ್ಕ ಅವರ ಪುತ್ರ ಸಿದ್ಧವನ ಗುರುಕುಲದ ಪ್ರಧಾನ ಪಾಲಕ ಕೇಶವ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಡಿ. ಯದುಪತಿ ಗೌಡ ಅವರು ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಬೋಜಮ್ಮ ಕೆ. ಎನ್. ಅವರು ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕನ್ನಡ ಸಹ ಪ್ರಾಧ್ಯಾಪಕ ದಿವ ಕೊಕ್ಕಡ ಕಾರ್ಯಕ್ರಮ ಸಂಯೋಜಿಸಿದ್ದರು.

Leave a Comment

error: Content is protected !!