April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಕ್ಷೇತ್ರದಲ್ಲಿ ದಾರಂದ ಪ್ರತಿಷ್ಠೆ: ಡಿಸೆಂಬರ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

ಬಳಂಜ:ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಜೀರ್ಣೋದ್ಧಾರ ಸಮಿತಿ, ಬೋಂಟ್ರೊಟ್ಟು ಬಳಂಜ ಇದರ ನೇತೃತ್ವದಲ್ಲಿ ಜುಲೈ 16ರಂದು ಮದ್ದ ಡ್ಕ ಶ್ರೀನಿವಾಸ ಅಸ್ರಣ್ಣರ ವೈದಿಕ ನೇತೃತ್ವದಲ್ಲಿ ಶ್ರೀಧರ್ಮರಸು ಪರಿವಾರ ಶಕ್ತಿಗಳ ದೈವಸ್ಥಾನದ ದಾರಂದ ಮಹೂರ್ತ ನೆರವೇರಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಮುಖ್ಯಸ್ಥರಾದ ಮಹಾಬಲ ಪೂಜಾರಿ, ಕೃಷ್ಣಪ್ಪ ಪೂಜಾರಿ,ಸದಾನಂದ ಪೂಜಾರಿ, ಗಣೇಶ್ ಪೂಜಾರಿ ಬೋಂಟ್ರೋಟ್ಟು ಗುತ್ತು ಹಾಗೂ ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ,ಕೋಶಾಧಿಕಾರಿಗಳಾದ ಪ್ರವೀಣ್ ಕುಮಾರ್ ಎಚ್.ಎಸ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಸದಾನಂದ ಸಾಲಿಯಾನ್ ಬಳಂಜ, ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಸತೀಶ್ ರೈ ಬಾರ್ಧಡ್ಕ, ರಮಾನಾಥ ಶೆಟ್ಟಿ ಪಂಬಾಜೆ,ಹರೀಶ್ ರೈ ಅಶೋಕ್ ಮುಡಾಯಿಬೆಟ್ಟು ಹಾಗೂ ಗುತ್ತು ಗುರಿಕಾರರು, ಅಭಿವೃದ್ಧಿ ಸಮಿತಿಯ ಸದಸ್ಯರು, ಬೋಂಟ್ರೊಟ್ಟು ಗುತ್ತು ಮನೆತನದ ಕೂಡು ಕುಟುಂಬಸ್ಥರು ಊರಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ದೈವಸ್ಥಾನಗಳ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ನೇಮೋತ್ಸವ ನಡೆಯಲಿದ್ದು ದಾನಿಗಳು ಹಾಗೂ ಊರಿನ ಭಕ್ತಾಧಿಗಳು ಪೂರ್ಣ ರೀತಿಯ ಸಹಕಾರವನ್ನು ನೀಡಬೇಕೆಂದು ಸಮಿತಿಯವರು ವಿನಂತಿಸಿದ್ದಾರೆ.

Related posts

ನಡ ಸರಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ ಉಜಿರೆ ಹಳೆಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಸೇವಾಯಜ್ಞ’

Suddi Udaya

ಬೆಳಾಲು ಮಹಾಶಕ್ತಿ ಕೇಂದ್ರದ ಯುವ ಚೌಪಾಲ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ನಿವಾಸಿ ಪದ್ಮಲತಾ ನಿಧನ

Suddi Udaya

ವೇಣೂರಿನಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕಲ್ಮಂಜ ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ

Suddi Udaya
error: Content is protected !!