ಮುಂಡಾಜೆ ಚಿತ್ಪಾವನ ಸಂಘಟನೆಯ ವಾರ್ಷಿಕೋತ್ಸವ: ಪದಗ್ರಹಣ ಸಮಾರಂಭ

Suddi Udaya

ಮುಂಡಾಜೆ : ಚಿತ್ಪಾವನ ಸಂಘಟನೆ ಮುಂಡಾಜೆ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾ ಭವನದಲ್ಲಿ ಜು.16 ರಂದು ಜರಗಿತು.

ವೇದಮೂರ್ತಿ ಸುರೇಶ್ ಗೋಖಲೆ ದೀಪ ಪ್ರಜ್ವಲನೆಗೊಳಿದರು. ಸಂಘಟನೆ ಅಧ್ಯಕ್ಷ ವಾಸುದೇವ ಗೋಖಲೆ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಕೊಪ್ಪದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಮಹೇಶ್ ಕಾಕತ್ಕರ್ ಉಪನ್ಯಾಸ ನೀಡಿ “ಧರ್ಮದ ಜಾಗೃತಿ ನಮ್ಮಲ್ಲಿ ಇರಬೇಕು. ಅಹಿಂಸೆ ,ಸತ್ಯ, ಮಾತು, ಶರೀರ, ಆಂತರಿಕ ಶುದ್ದಿ,ಇಂದ್ರಿಯ ನಿಗ್ರಹ, ಜ್ಞಾನ, ವಿಜ್ಞಾನ ಗಳ ಅರಿವೇ ನಿಜವಾದ ಧರ್ಮ. ನಮ್ಮ ಕರ್ತವ್ಯಗಳನ್ನು ಅರಿತು
ಪ್ರಬುದ್ಧ ಮನಸ್ಸಿನಿಂದ ಕೆಲಸ ಮಾಡಿದರೆ ಶ್ರೇಯಸ್ಸು ಸಾಧ್ಯ. ನಂಬಿಕೆ ಮೂಲಕ ಮಾಡುವ ಕಾರ್ಯಗಳಿಗೆ ಜಯವಿದೆ” ಎಂದರು.


ತಾಲೂಕು ಸಂಘಟನೆ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಮಾತನಾಡಿ “ಸಂಘಟನೆಗಳ ಬೆಳವಣಿಗೆಗೆ ಒಗ್ಗಟ್ಟು ಮುಖ್ಯ. ಜೀವನದಲ್ಲಿ ಕಾಣುವ ಕೆಲವು ಹಿನ್ನಡೆಗಳು, ಭವಿಷ್ಯದ ಬೆಳವಣಿಗೆಗೆ ಮೂಲವಾಗುತ್ತವೆ” ಎಂದರು.
ವೈದಿಕ ಕ್ಷೇತ್ರದ ಕರುಣಾಕರ ಅಭ್ಯಂಕರ್, ಸ್ವ ಉದ್ಯೋಗ ಕ್ಷೇತ್ರದ ಪ್ರಹ್ಲಾದ ಫಡಕೆ, ಜ್ಯೋತಿಷಿ ಗಿರೀಶ್ ಡೋಂಗ್ರೆ,
ಸಮಾಜ ಸೇವೆಯ ಶಕುಂತಳಾ ಮೆಹೆಂದಳೆ,ಧಾರ್ಮಿಕ ಕ್ಷೇತ್ರದ ಶಾಂತಾ ಠೋಸರ್ ಇವರನ್ನು ಸನ್ಮಾನಿಸಲಾಯಿತು.

ಈ ಬಾರಿಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯದರ್ಶಿ ಶಶಿಧರ್ ಠೋಸರ್ ವರದಿ ವಾಚಿಸಿದರು.
ನಾರಾಯಣ ಫಡಕೆ ಹಾಗೂ ಚಿತ್ರಾ ಭಿಡೆ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನ ಚಿದಂಬರ ಕಾಕತ್ಕರ್ ಹಾಗೂ ಬಳಗದವರಿಂದ ವೇಣು ವಾದನ ಕಾರ್ಯಕ್ರಮ ಜರಗಿತು.
ಪದಗ್ರಹಣ: ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಆಯ್ಕೆಯಾದ ಸುಶ್ಮಾ ಶಶಾಂಕ ಭಿಡೆ, ಕಾರ್ಯದರ್ಶಿ ರಂಗನಾಥ ಹೆಬ್ಬಾರ್ ಹಾಗೂ ನೂತನ ಸದಸ್ಯರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

Leave a Comment

error: Content is protected !!