23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಸೇವೆ ಎಂಬ ಮನೋಭಾವದ ಶ್ರೀಮಂತಿಕೆಯಿಂದ ಕೆಲಸ ಮಾಡಬೇಕು ಇದಕ್ಕೆ ಸದಸ್ಯರ ಸಹಕಾರ ಅಗತ್ಯ ಸಂಘಟನೆಯ ಕೀರ್ತಿ ಹೆಚ್ಚಲು ಹಿರಿಯರು ಹಾಕಿ ಕೊಟ್ಟ ಅಡಿಪಾಯ ಕಾರಣ ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ ಅಸೋಸಿಯೇಶನ್ ದ ಕ ಉಡುಪಿ ಜಿಲ್ಲಾ ಅಧ್ಯಕ್ಷ ಆನಂದ ಎನ್ ಬಂಟ್ವಾಳ ಹೇಳಿದರು.

ಅವರು ಗುರುವಾಯನಕೆರೆ ಛಾಯ ಭವನದಲ್ಲಿ ಜು.16 ರಂದು ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ ಅಸೋಸಿಯೇಶನ್ ದ ಕ ಉಡುಪಿ ಬೆಳ್ತಂಗಡಿ ವಲಯದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವೇದಿಕೆಯಲ್ಲಿ ಬೆಳ್ತಂಗಡಿ ವಲಯದ ಅಧ್ಯಕ್ಷ ಅಶೋಕ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ಕೆ ವಸಂತ್ ಶರ್ಮ ಉಜಿರೆ, ಎಸ್ ಕೆ ಪಿ ವಿವಿದ್ದೋದ್ದೇಶ ಸಹಕಾರ ಸಂಘದ ನಿರ್ದೇಶಕ ವಿಲ್ಸನ್ ಬೆಳ್ತಂಗಡಿ, ಜಿಲ್ಲಾ ಪತ್ರಿಕಾ ಮಾದ್ಯಮ ಪ್ರತಿನಿಧಿ ಉಮೇಶ್ ಮದ್ದಡ್ಕ, ವಲಯದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ ಬೆಳ್ತಂಗಡಿ, ಗೌರವಾಧ್ಯಕ್ಷ ಕೆ ಜಿ ಸುಬ್ರಹ್ಮಣ್ಯ ಮಡಂತ್ಯಾರು, ಉಪಾಧ್ಯಕ್ಷೆ ಸಿಲ್ವಿಯ ಬೆಳ್ತಂಗಡಿ, ಕಾರ್ಯದರ್ಶಿ ಹರ್ಷ ಬಳ್ಳಮಂಜ, ಕೋಶಾಧಿಕಾರಿ ಹರೀಶ್ ಕೊಳ್ತಿಗೆ ಉಪಸ್ಥಿತರಿದ್ದರು.

ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ಸುಬ್ರಹ್ಮಣ್ಯ, ಕೋಶಾಧಿಕಾರಿ ನವೀನ್ ರೈ ಪುತ್ತೂರು, ಜೊತೆ ಕಾರ್ಯದರ್ಶಿ ಅಜೆಯ್ ಮಂಗಳೂರು, ಸಾಂಸ್ಕ್ರತಿಕ ಕಾರ್ಯದರ್ಶಿ ನವೀನ್ ಕುಮಾರ್ ಕಟೀಲ್, ಕ್ರೀಡಾ ಕಾರ್ಯದರ್ಶಿ ರಾಜೇಶ್ ಉಳ್ಳಾಲ, ಸಂಘಟನಾ ಕಾರ್ಯದರ್ಶಿ ಜಯಕರ್ ಸಾಲಿಯನ್ ಸುರತ್ಕಲ್, ಜಿಲ್ಲಾ ಮಾಜಿ ಕಾರ್ಯದರ್ಶಿ ಹರೀಶ್ ಅಡ್ಯಾರ್, ಭಾಗವಹಿಸಿದರು.

ಬೆಳ್ತಂಗಡಿ ವಲಯದ ಮಾಜಿ ಅಧ್ಯಕ್ಷರುಗಳು ಪಧಾದಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ನೀಡಿದ ಸದಸ್ಯರನ್ನು ಜಿಲ್ಲಾಧ್ಯಕ್ಷರು ಗೌರವಿಸಿದರು. ಈ ಸಂದರ್ಭದಲ್ಲಿ ಮುಂದಿನ 2 ವರ್ಷದ ಅವಧಿಗೆ ನೂತನ ಅಧ್ಯಕ್ಷ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವಲಯದ ಸಾಂಸ್ಕ್ರತಿಕ ಕಾರ್ಯದರ್ಶಿ ಗಣೇಶ್ ನಾರಾವಿ ಪ್ರಾರ್ಥನೆ ಗೈದರು. ಕಾರ್ಯದರ್ಶಿ ಹರ್ಷ ಬಳ್ಳಮಂಜ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಹರೀಶ್ ಕೊಳ್ತಿಗೆ ಲೆಕ್ಕ ಪತ್ರ ಓದಿದರು. ಜಗದೀಶ್ ಜೈನ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು.

Related posts

ಪುದುವೆಟ್ಟು: ಅಕ್ರಮ ಮರಳು ಅಡ್ಡೆ‌ಗೆ ಧರ್ಮಸ್ಥಳ ಪೊಲೀಸ್ ದಾಳಿ

Suddi Udaya

ಕೆಪಿಎಸ್ ಪುಂಜಾಲಕಟ್ಟೆ: ಶಾಲಾ ಪ್ರಾರಂಭೋತ್ಸವ

Suddi Udaya

ಕರಾವಳಿ ಪ್ರಜಾ ಧ್ವನಿ ಯಾತ್ರೆ ಅಳದಂಗಡಿ ಬೃಹತ್ ಸಾರ್ವಜನಿಕ ಸಭೆ

Suddi Udaya

ಬೆಳ್ತಂಗಡಿ: ಡಯಾಲಿಸಿಸ್ ಕೇಂದ್ರದ ಕೊರತೆಗಳಿಗೆ ಮುಕ್ತಿ : ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮತ್ತು ರೋಟರಿ ಸಂಸ್ಥೆಯವರಿಗೆ ಬಂಗೇರರವರಿಂದ ಅಭಿನಂದನೆ

Suddi Udaya

ಕಾರೊಂದು ಧರ್ಮಸ್ಥಳದಿಂದ ಚಾರ್ಮಾಡಿಯವರೆಗೆ ಹಲವು ವಾಹನಗಳಿಗೆ ಡಿಕ್ಕಿ: ಯುವಕನನ್ನು ಬಂಧಿಸಿದ ಪೋಲಿಸರು

Suddi Udaya

ನ್ಯಾಯತರ್ಪು: ಜಾರಿಗೆಬೈಲು ಮಸೀದಿ ಬಳಿ ತಂಡಗಳ ನಡುವೆ ಹಲ್ಲೆ: ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!