March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕಳೆಂಜ: ಮಳೆ ನೀರಿನಿಂದ ಹರಡುವ ರೋಗಗಳ ಬಗ್ಗೆ ಮಾಹಿತಿ

ಕಳೆಂಜ: ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ (ಡಿ.ಕೆ.ಆರ್.ಡಿ.ಎಸ್) ಮಹಿಳಾ ಸಬಲೀಕರಣ ಯೋಜನೆಯ ಅಂಗವಾಗಿ ಕಳೆಂಜದ ಸರ್ವಶ್ರೀ ಮಹಾ ಸಂಘದ ಸದಸ್ಯರಿಗೆ ಮಳೆ ನೀರಿನಿಂದ ಹರಡುವ ವಿವಿಧ ಖಾಯಿಲೆಗಳ ಬಗ್ಗೆ ಮಾಹಿತಿ ಕಾರ್ಯಗಾರವು ಜು. 18 ರಂದು ಕಾಯರ್ತಡ್ಕ ಸೈಂಟ್ ಸೆಬಾಸ್ಟಿಯನ್ ಚರ್ಚ್ ಸಭಾಭವನದಲ್ಲಿ ನಡೆಯಿತು.

ಕಾಯರ್ತಡ್ಕ ವಲಯದ ಆಶಾ ಕಾರ್ಯಕರ್ತೆಯಾದ ಶ್ರೀಮತಿ ದೇವಕಿರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಡೆಂಗ್ಯೂ ಜ್ವರ, ಮಲೇರಿಯಾ, ಇಲಿ ಜ್ವರ, ಚಿಕುನ್ ಗುನ್ಯಾ ಮುಂತಾದ ರೋಗಗಳ ಬಗ್ಗೆ ಮಾಹಿತಿ ನೀಡಿದರು. ಸರ್ವಶ್ರೀ ಮಹಾ ಸಂಘದ ಸದಸ್ಯರಾದ ಶ್ರೀಮತಿ ತ್ರೇಸಿಯಾರವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಸೌಭಾಗ್ಯ ಸಂಘದ ಸದಸ್ಯೆ ಶ್ರೀಮತಿ ಸಿಲ್ವಿ ಎ.ಟಿ ಸ್ವಾಗತಿಸಿ, ಸ್ನೇಹ ಸಂಘದ ಸದಸ್ಯೆ ಶ್ರೀಮತಿ ಶಾಲಿರವರು ಧನ್ಯವಾದವಿತ್ತರು. ಕಾರ್ಯಕರ್ತರಾದ ಮಾರ್ಕ್ ಡಿ ಸೋಜಾರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಒಟ್ಟು 25 ಮಂದಿ ಉಪಸ್ಥಿತರಿದ್ದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಅಧ್ಯಕ್ಷತೆ ಮತ್ತು ಸಂಸದೀಯ ಕಾರ್ಯವಿಧಾನಗಳ ತರಬೇತಿ ಕಾರ್ಯಾಗಾರ

Suddi Udaya

ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದಿಂದ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ

Suddi Udaya

ಉಜಿರೆಯಲ್ಲಿ ಚುನಾವಣಾ ಪ್ರಚಾರದ ಅಂಗವಾಗಿ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ್ ಬಿಸ್ವಾಸ್ ಶರ್ಮ ಬೃಹತ್ ರೋಡ್ ಶೋ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ಮತ ಪ್ರಚಾರ

Suddi Udaya

ಕಕ್ಕಿಂಜೆಯಲ್ಲಿ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಳಾಂತರಿತ ಶಾಖೆ ಉದ್ಘಾಟನೆ

Suddi Udaya

ಉಜಿರೆ: ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜಿನಲ್ಲಿ ‘ಪ್ರತಿಭಾ ಸಮ್ಮಾನ್-2025’

Suddi Udaya

ಬಂದಾರು ಗ್ರಾ.ಪಂ. ಮತ್ತು ಸಿದ್ಧಿ ವಿನಾಯಕ ಸಂಜೀವಿನಿ ಒಕ್ಕೂಟದ ಮಹಾಸಭೆ ಹಾಗೂ ಮಹಿಳಾ ಗ್ರಾಮಸಭೆ

Suddi Udaya
error: Content is protected !!