24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದಿಂದ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ

ಕುಪ್ಪೆಟ್ಟಿ : ಶ್ರೀ ಗಣೇಶ ಭಜನಾ ಮಂದಿರ ಕುಪ್ಪೆಟ್ಟಿ ಇದರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ಶಾಲಾ ಮಕ್ಕಳಿಗೆ ಪುಸ್ತಕ,ಬ್ಯಾಗ್ ವಿತರಣೆ ಮಾಡಲಾಯಿತು.

ಸುಮಾರು 47 ವಿದ್ಯಾರ್ಥಿಗಳಿಗೆ 55,000 ಸಾವಿರ ಮೊತ್ತದ ಪುಸ್ತಕ, ಬ್ಯಾಗ್, ಪೆನ್ನು,ಪೆನ್ಸಿಲ್ ಇತ್ಯಾದಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ನಾಯ್ಕ್ ವಹಿಸಿಕೊಂಡರು.

ಮುಖ್ಯ ಅತಿಥಿಗಳಾಗಿ ಸುಬ್ರಮಣ್ಯ ಭಟ್ ಹಲೇಜಿ ಗುತ್ತಿಗೆದಾರರು ಮೆಸ್ಕಾಂ, ಸಂದೀಪ್ ಕುಪ್ಪೆಟ್ಟಿ ಅಧ್ಯಕ್ಷರು ಹಿಂದೂ ಜಾಗರಣ ವೇದಿಕೆ ಉಪ್ಪಿನಂಗಡಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ರಂಜಿತ್ ದರ್ಮಾಡಿ ಅವರು ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಸಂಪೂರ್ಣ ಖರ್ಚು- ವೆಚ್ಚವನ್ನು ಊರಿನ ಗಣ್ಯರಾದ ಅತುಲ್ ಕುಮಾರ್ ಹಲೇಜಿ ಮತ್ತು ಸುಧೀರ್ ಕುಮಾರ್ ಹಲೇಜಿ ಅವರು ನೀಡಿದರು.

ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ರೋಹಿತ್ ಶೆಟ್ಟಿ ಸ್ವಾಗತಿಸಿದರು, ಪ್ರವೀಣ್ ರೈ ವಂದಿಸಿದರು.

Related posts

ವಿಧಾನ ಪರಿಷತ್ ಚುನಾವಣೆ : ಮದುಮಗನಿಂದ ಕೊಕ್ಕಡ ಪಂಚಾಯತ್ ನಲ್ಲಿ ಮತ ಚಲಾವಣೆ

Suddi Udaya

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ರವರಿಗೆ ಅಂತಾರಾಷ್ಟ್ರೀಯ “ಏಷಿಯಾ ಪೆಸಿಫಿಕ್ ಐಕಾನ್ ಅವಾರ್ಡ್ಸ್”

Suddi Udaya

ಧರ್ಮಸ್ಥಳ: ಕು. ಸೌಜನ್ಯ ಮನೆಗೆ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಭೇಟಿ

Suddi Udaya

ಬೆಳ್ತಂಗಡಿ ಬಸದಿಯಲ್ಲಿ 12ನೇ ವಾರ್ಷಿಕೋತ್ಸವ, ಲಘುಸಿದ್ಧಚಕ್ರ ಯಂತ್ರಾರಾಧನೆ

Suddi Udaya

ಕಳೆಂಜ ಬಿಜೆಪಿ ಮುಖಂಡನ ಮೇಲಿನ ಹಲ್ಲೆ ಕುರಿತು ಬಿಜೆಪಿ ಮಂಡಲ ವತಿಯಿಂದ ಪತ್ರಿಕಾಗೋಷ್ಠಿ

Suddi Udaya

ಭೀಕರ ಮಳೆಯಿಂದಾಗಿ ಮುಂಡ್ರುಪ್ಪಾಡಿ ಪರಿಸರದ ತೋಟಕ್ಕೆ ನುಗ್ಗಿದ ನೀರು: ಕೊಚ್ಚಿ ಬಂದ ಮರದ ದಿಮ್ಮಿಗಳು

Suddi Udaya
error: Content is protected !!