ಕುಕ್ಕೇಡಿ ಗ್ರಾ.ಪಂ. ವತಿಯಿಂದ “ಆಧಾರ್ ಸೀಡಿಂಗ್” ಕ್ಯಾಂಪ್

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ವತಿಯಿಂದ ಕುಕ್ಕೇಡಿ -ನಿಟ್ಟಡೆ ಅಂಚೆ ಕಛೇರಿ ಸಹಭಾಗಿತ್ವದಲ್ಲಿ ಸರಕಾರದಿಂದ ಪಡೆಯುವ ವೃದ್ಯಾಪವೇತನ, ಸಂಧ್ಯಾ ಸುರಕ್ಷಾ, ವಿಕಲ ಚೇತನ, ವಿಧವಾ, ಮನಸ್ವಿನಿ, ಮೈತ್ರಿ,ಕಿಶಾನ್ ಸಮ್ಮಾನ್, ಹಾಗೂ ಸರಕಾರದ ಯೋಜನೆಗಳ ನೇರ ನಗದು ವರ್ಗಾವಣೆಗಾಗಿ “ಆಧಾರ್ ಸೀಡಿಂಗ್ “ಕ್ಯಾಂಪ್ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಪೂಜಾರಿ, ಅಭಿವೃದ್ಧಿ ಅಧಿಕಾರಿ ನವೀನ್ ಎ, ಸದಸ್ಯರುಗಳಾದ ಗೋಪಾಲ ಶೆಟ್ಟಿ, ದಿನೇಶ್ ಮೂಲ್ಯ, ಧನಂಜಯ ಕುಲಾಲ್, ನಿಟ್ಟಡೆ- ಕುಕ್ಕೇಡಿ-ವೇಣೂರು ಅಂಚೆ ಶಾಖಾ ಪಾಲಕರಾದ ವಿಶ್ವನಾಥ ಪೂಜಾರಿ, ವಿಜಯ ಜೈನ್ ಕುಕ್ಕೇಡಿ, ಉಮೇಶ್ ವೇಣೂರು, ಪದ್ಮಾನಾಭ, ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯತ್ ವಾಪ್ತಿಯ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡರು.

Leave a Comment

error: Content is protected !!