ಹೊಸಂಗಡಿ: ಶಾಲೆ ವಠಾರದಲ್ಲಿ ಔಷಧೀಯ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಯೇನಪೊಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಲಕ್ಷ್ಮೀಶ ಉಪಾದ್ಯಾಯ ಹೇಳಿದ್ದಾರೆ.
ಹೊಸಂಗಡಿಯಲ್ಲಿರುವ ಇಂದಿರಾ ‘ಗಾಂಧಿ ವಸತಿ ಶಾಲೆಯಲ್ಲಿ ನಡೆದ ಔಷಧೀಯ ವನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಣೇಶ ಶೆಟ್ಟಿ ಔಷಧೀಯ ವನ ಮತ್ತು ಉಚಿತ ಆರೋಗ್ಯ ತಪಾಸಣ ಶಿಬಿರ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪೆರಿಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸೀತಾರಾಮ ರೈ ಉಪಸ್ಥಿತರಿದ್ದರು.
ಶಾಲೆಯಲ್ಲಿ ನೆಟ್ಟು ಬೆಳೆಸಲು ಅಗತ್ಯವಾದ ತೆಂಗಿನ ಗಿಡ ಮತ್ತು ಬಾಳೆ ಗಿಡಗಳನ್ನು ಉಚಿತವಾಗಿ ಒದಗಿಸುವುದಾಗಿ ತಿಳಿಸಿದರು.
ಪ್ರಾಂಶುಪಾಲ ಶ್ರೀಧರ ಶೆಟ್ಟಿ ಶುಭ ಹಾರೈಸಿದರು. ಯೇನೆಪೊಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೆಡಿಕಲ್ ಕ್ಯಾಂಪ್, ಸಂಯೋಜಕ ರಜಾಕ್ ಉಪಸ್ಥಿತರಿದ್ದರು. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ| ಆಶಾ ಮಾರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಔಷಧೀಯ ಗಿಡಗಳನ್ನು ಪರಿಚಯಿಸಿ. ಅವುಗಳನ್ನು ಬೆಳಸುವ ವಿಧಾನವನ್ನು ತಿಳಿಸಿದರು.
ಶಿಕ್ಷಕಿಯರಾದ ವಿದ್ಯಲತಾ ಸ್ವಾಗತಿಸಿ, ಕುಮುಜಾಕ್ಷಿ ವಂದಿಸಿದರು. ಶಿಕ್ಷಕ ಸುಧೀರ್ ಬಾಳೆಪುಣಿ ನಿರ್ವಹಿಸಿದರು.