23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಗೆಜ್ಜೆಗಿರಿ ಕ್ಷೇತ್ರ ಆಡಳಿತ ಸಮಿತಿ ಸಭೆ

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೆಜ್ಜೆಗಿರಿ ಇದರ ಮಾಸಿಕ ಸಭೆಯು ಗೆಜ್ಜೆ ಗಿರಿಯಲ್ಲಿ ಜು.20 ರಂದು ಜರಗಿತು.

ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ರವರು ಸ್ವಾಗತಿಸಿ ವರದಿ ವಾಚಿಸಿದರು. ಸಭೆಯಲ್ಲಿ ಶ್ರೀ ಕ್ಷೇತ್ರದ ಲೆಕ್ಕಪತ್ರವನ್ನು ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಮಂಡಿಸಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪೀತಾಂಬರ ಹೇರಾಜೆ ಅವರು ವಹಿಸಿ ಕ್ಷೇತ್ರದ ಅಭಿವೃದ್ಧಿಗೆ ಸರ್ವರ ಸಹಕಾರವನ್ನು ಕೋರಿದರು.

ಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಗೌರವ್ಯಾಧ್ಯಕ್ಷರುಗಳಾದ ರಾಜಶೇಖರ್ ಕೋಟ್ಯಾನ್ ಮತ್ತು ಜಯಂತ ನಡು ಬೈಲು, ಉಪಾಧ್ಯಕ್ಷರುಳಾದ ರವಿ ಪೂಜಾರಿ ಚಿಲಿಂಬಿ ಮತ್ತು ನಿತ್ಯಾನಂದ ಕೋಟ್ಯಾನ್ ಮುಂಬೈ, ಜೊತೆ ಕಾರ್ಯದರ್ಶಿ ಚಂದ್ರಶೇಖರ ಉಚ್ಚಿಲ್, ಶೈಲೇಂದ್ರ ಸುವರ್ಣ ಎಸ್.ಆರ್.ಆರ್, ಡಿ ಆರ್ ರಾಜು ಪೂಜಾರಿ, ನವೀನ್ ಸುವರ್ಣ ಸಜಿಪ, ದಿನೇಶ್ ಅಮೀನ್ ಕುಂದಾಪುರ, ಹರಿಶ್ಚಂದ್ರ ಅಮೀನ್ ಕಟಪಾಡಿ, ಡಾ. ರಾಜಾರಾಮ್, ಅನುವಂಶಿಕ ಮುಕ್ತೇಸರ ಶ್ರೀಧರ ಪೂಜಾರಿ, ಮುಂಬೈಯಿಂದ ಸೂರ್ಯಕಾಂತ್ ಸುವರ್ಣ, ದಯಾನಂದ ಕಲ್ಯಾ, ಗೋವಾದ ಚಂದ್ರಹಾಸ್ ಅಮೀನ್, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ,ಕಾನೂನು ಸಲಹೆ ಗಾರ ನವನೀತ್ ಹಿಂಗಾಣಿ, ಕ್ಷೇತ್ರದ ವಕ್ತಾರ ರಾಜೇಂದ್ರ ಚೆಲಿಂಬಿ, ಆಂತರಿಕ ಲೆಕ್ಕ ಪರಿಶೋಧಕ ಶೇಖರ ಬಂಗೇರ, ಜಯರಾಮ ಬಂಗೇರ, ಉದ್ಯಮಿ ಗೋಪಾಲ ಬಂಗೇರ ಉಡುಪಿ, ಸುರೇಶ್ ಕೋಟ್ಯಾನ್ ಮೂಡಬಿದ್ರೆ, ಕುಮಾರ್ ಇರುವೈಲ್,. ಹಿತೇಶ್ ಸಾವ್ಯ,. ಮುಂತಾದವರು ಉಪಸ್ಥಿತರಿದ್ದರು.

Related posts

ಉಜಿರೆ ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಸಂದರ್ಶನವನ್ನು ಎದುರಿಸುವುದು ಹೇಗೆ? ಎಂಬ ವಿಷಯದ ಕುರಿತು ಉಪನ್ಯಾಸ

Suddi Udaya

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

Suddi Udaya

ಬೆಳ್ತಂಗಡಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶರತ್ ಕುಮಾರ್ ರವರ ಮನೆಗೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ

Suddi Udaya

ನಡ: ಸಿಡಿಲು ಬಡಿದು 2 ವರ್ಷದ ಮಗು ಅಸ್ವಸ್ತ

Suddi Udaya

ಗುರುವಾಯನಕೆರೆ ಶಕ್ತಿನಗರ ಸರ್ಕಲ್ ನಲ್ಲಿ ಮಾಜಿ ಶಾಸಕರು ದಿ. ವಸಂತ ಬಂಗೇರರ ಪುತ್ಥಳಿ ಸ್ಥಾಪನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

Suddi Udaya

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya
error: Content is protected !!