April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಇಂದಬೆಟ್ಟು: ಭಾರಿ ಗಾಳಿ ಮಳೆಗೆ ವಾಸ್ತವ್ಯದ ಮನೆಯ ಮೇಲ್ಛಾವಣಿ ಕುಸಿತ, ಪ್ರಾಣಾಪಾಯದಿಂದ ಪಾರು

ಇಂದಬೆಟ್ಟು: ಬಾರಿ ಗಾಳಿ ಮಳೆಗೆ ಇಂದಬೆಟ್ಟು ಗ್ರಾಮದ ಸೋಮಯ್ಯದಡ್ಡು ಪ್ರದೇಶದ ಜಾಕೋಬ್ ಮೊನಿಸ್ ರವರ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿತಗೊಂಡು ಗೋಡೆ ಬಿರುಕು ಬಿಟ್ಟಿದ್ದು ಅಪಾರ ನಷ್ಟ ಉಂಟಾಗಿದೆ, ಅದೃಷ್ಟವಶಾತ್ ಮನೆಯಲ್ಲಿ ವಾಸ್ತವ್ಯವಿದ್ದ ಜಾಕೋಬ್ ಮೊನಿಸ್ ರವರು ಪ್ರಾಣಾಪಾಯದಿಂದ ಪಾರಾದ ಘಟನೆ ಜು.22ರಂದು ನಡೆದಿದೆ.

ಸ್ಥಳಕ್ಕೆ ಸ್ಥಳೀಯ ಪಂಚಾಯತ್ ಸದಸ್ಯರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಇಂದಬೆಟ್ಟು ಸುಧರ್ಮ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದು ಜಾಕೋಬ್ ಮೊನಿಸ್ ರವರಿಗೆ ಸಹಕಾರ ನೀಡಿದರು ಮತ್ತು ಆಗಿರುವ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವಂತೆ ಪಂಚಾಯತ್ ಸದಸ್ಯರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ವಿನಂತಿಸಿ ಕೊಂಡರು.

Related posts

ಪಡಂಗಡಿ: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಸಾಲಿಯತ್ ಹೃದಯಾಘಾತದಿಂದ ನಿಧನ

Suddi Udaya

ಬಳಂಜ: ಮರಿಯಾಲಡೊಂಜಿ ಐತಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ: ಆ. 20 ಆಟಿಕೂಟದ ಗಮ್ಮತ್ ಲೇಸ್, ವಾರ್ಷಿಕ ಮಹಾಸಭೆ

Suddi Udaya

ಮದ್ದಡ್ಕ : ಮನೀಶ್ ಹೋಟೆಲ್ ಮಾಲಕ ರಮೇಶ್ ಪೂಜಾರಿ ನಿಧನ

Suddi Udaya

ನಾಳದಲ್ಲಿ ಅಯ್ಯಪ್ಪ ಪೂಜೆ- ಇರುಮುಡಿ ಕಟ್ಟುವ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೆಯರ್ ವಿತರಣೆ

Suddi Udaya

ಕರುಂ ಬಿತ್ತಿಲು ಸಂಗೀತ ಶಿಬಿರ ಸಮಾರೋಪ

Suddi Udaya
error: Content is protected !!