23.4 C
ಪುತ್ತೂರು, ಬೆಳ್ತಂಗಡಿ
April 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ದಿ. ಸಂಜೀವ ಪಾಣೂರುರವರ ಶ್ರದ್ಧಾಂಜಲಿ ಸಭೆ

ವೇಣೂರು: ಇತ್ತೀಚೆಗೆ ನಿಧನರಾದ ವೇಣೂರಿನಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದ ಸಂಜೀವ ಪಾಣೂರುರವರ ಶ್ರದ್ಧಾಂಜಲಿ ಸಭೆ ಜು.23 ರಂದು ವೇಣೂರು ಗಾರ್ಡನ್ ವಿವ್ಯೂ ಕಾಂಪ್ಲೆಕ್ಸ್ ನ ಹಾಲ್ ನಲ್ಲಿ ನಡೆಯಿತು.

ಸಭೆಯಲ್ಲಿ ಮೃತರ ನೆನಪಿಗೆ ದತ್ತಿ ನಿಧಿ ದೇಣಿಗೆಯನ್ನು ಮನೆಯವರು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಮತ್ತು ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಗೆ ನೀಡಿದರು.

ಮೃತರು ಪತ್ನಿ ವಿನೋದ ಎಸ್.ಪಾಣೂರು, ಪುತ್ರಿ ಆಕೃತಿ ಪಾಣೂರು ಇವರು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಡ್ಕ, ನಿರ್ದೇಶಕ ರಮೇಶ ಪೂಜಾರಿ, ಪಡ್ಡಾಯಿಮಜಲು ಹಾಗೂ ಗುರು ಚಾರಿಟೇಬಲ್ ಟೇಸ್ಟ್ ಅಧ್ಯಕ್ಷ ಜಯಾನಂದ ರಿಗೆ ದತ್ತಿನಿಧಿ ಚೆಕ್ ಹಸ್ತಾಂತರಿಸಿದರು.

ಶಿಕ್ಷಕ ಶಶಿಧರ,ಹೆಚ್. ಮಹಮ್ಮದ್ ವೇಣೂರು, ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯಾನಂದ ಮೃತರ ಬಗ್ಗೆ ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಹಿತೈಷಿಗಳು ಕುಟುಂಬಸ್ಥರು ಹಾಜರಿದ್ದರು

Related posts

ಜು.20 ರಿಂದ ಉಜಿರೆ ಮಹಾವೀರ ಸಿಲ್ಕ್ಸ್ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್ ನಲ್ಲಿ ಆಷಾಢ ಆಟಿದ ಪರ್ಬ; ದರಕಡಿತ ಮಾರಾಟ

Suddi Udaya

ಚುನಾವಣೆ ಮತ್ತು ಅಪರಾಧದ ತಡೆ ಬಗ್ಗೆ ಮಾಹಿತಿ

Suddi Udaya

ಕೊಯ್ಯೂರು: ಮಲೆಬೆಟ್ಟುನಲ್ಲಿ ಬೈಕ್ ಗೆ ಆಟೋ ರಿಕ್ಷಾ ಡಿಕ್ಕಿ: ಬೈಕ್ ಸವಾರನಿಗೆ ಗಾಯ

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆ ಹಸ್ತಾಂತರ

Suddi Udaya

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಸರಕಾರಿ ಸೇವೆಯಿಂದ ನಿವೃತ್ತರಾದ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದನಾ ಸಮಾರಂಭ

Suddi Udaya

ಪ್ರಧಾನಿ ಭಾಷಣ ಕನ್ನಡಕ್ಕೆ ಭಾಷಾಂತರ : ಎಂ.ಎಲ್.ಸಿ ಪ್ರತಾಪಸಿಂಹ ನಾಯಕ್ ರಿಗೆ ರಾಷ್ಟ್ರ ನಾಯಕರ ಮೆಚ್ಚುಗೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ