24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಾರತೀಯ ಜೈನ್‌ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಮಾಜ ಉಜಿರೆ ಸಹಯೋಗದಲ್ಲಿ “ಆಹಾರೋತ್ಸವ ಮತ್ತು ಪ್ರತಿಭಾ ಪುರಸ್ಕಾರ”

ಭಾರತೀಯ ಜೈನ್‌ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಮಾಜ ಉಜಿರೆ ಇದರ ಸಹಯೋಗದಲ್ಲಿ “ಆಹಾರೋತ್ಸವ ಮತ್ತು ಪ್ರತಿಭಾ ಪುರಸ್ಕಾರ” ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಶ್ರೀ ರತ್ನತ್ರಯ ಸಭಾಂಗಣದಲ್ಲಿ ಜು.22 ರಂದು ನಡೆಯಿತು.

ಆಹಾರೋತ್ಸವದ ಉದ್ಘಾಟನೆಯನ್ನು ಬೆಳ್ತಂಗಡಿ ಭಾರತೀಯ ಜೈನ್ ಮಿಲನ್ ಗೌರವ ಸಲಹೆಗಾರರು ಶ್ರೀಮತಿ ಸೋನಿಯಾ ಯಶೋವರ್ಮ ನೆರವೇರಿಸಿದರು.

ಬೆಳ್ತಂಗಡಿ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಡಾ. ನವೀನ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾರತೀಯ ಜೈನ್ ಮಿಲನ್ ವಲಯ-8 ರ ನಿರ್ದೇಶಕರುಗಳಾದ ಬಿ. ಸೋಮಶೇಖರ್ ಶೆಟ್ಟಿ, ಪ್ರಮೋದ್ ಕುಮಾರ್ ಜೈನ್, ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಚೇರ್ಮೆನ್ ವೀ‌ರ್ ಸುಮಂತ್ ಕುಮಾರ್ ಜೈನ್, ಧೀಮತಿ ಮಹಿಳಾ ಸಮಾಜ ಉಜಿರೆ ಅಧ್ಯಕ್ಷರು ವೀರಾಂಗನ ಡಾ. ರಜತ ಪಿ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವೀರಾಂಗನ ಸುಧಾಮಣಿ , ವೀರ್ ಸನ್ಮತಿ ಕುಮಾರ್, ವೀರ್ ಅಜಯ್ ಕುಮಾರ್, ವೀರ್ ದೀಪಕ್ ಜೈನ್ ಸಂಯೋಜಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಜೈನ್ ಮಿಲನ್ ಕಾರ್ಯದರ್ಶಿ ಸಂಪತ್ ಕುಮಾರ್, ಕೋಶಾಧಿಕಾರಿಗಳಾದ ನಿಖಿತ್ ಜೈನ್, ಸ್ಮಿತಾ ಪ್ರಶಾಂತ್ ಜೈನ್, ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

Related posts

ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನಲೆ: ಜು.25: ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ನ.19: ಬೆಳ್ತಂಗಡಿಯಲ್ಲಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ

Suddi Udaya

ಬೆಳ್ತಂಗಡಿ: ನಿವೃತ್ತ ಶಿಕ್ಷಕ, ಯಕ್ಷಗಾನದ ಹಿರಿಯ ಅರ್ಥಧಾರಿ ಕೆ.ವಿ. ಗಣಪಯ್ಯ ನಿಧನ

Suddi Udaya

ಅಳದಂಗಡಿಯಲ್ಲಿ ತೃಷಾ ಮೆಡಿಕಲ್ ಶುಭಾರಂಭ

Suddi Udaya

ಜು.8 : ಬೆಳ್ತಂಗಡಿ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರಿಗೆ ಅಭಿನಂದನೆ

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ವಿಶೇಷ ಗ್ರಾಮ ಸಭೆ

Suddi Udaya
error: Content is protected !!