April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸ್ಪಂದನಾ ಸೇವಾ ಸಂಘದ 116ನೇ ಸೇವಾ ಯೋಜನೆಯ ಧನಸಹಾಯ ವಿತರಣೆ

ಸ್ಪಂದನಾ ಸೇವಾ ಸಂಘದ 116ನೇ ಸೇವಾ ಯೋಜನೆಯ ಧನಸಹಾಯವನ್ನು ಇತ್ತೀಚೆಗೆ ಅಗಲಿದ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಕಿರಿಯಾಡಿ, ಕೊಡಂಗೆ ನಿವಾಸಿ ನವೀನ ಗೌಡ ಇವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರವಾಗಿ ರೂ. 20 ಸಾವಿರದ ಚೆಕ್ಕನ್ನು ಉಜಿರೆ ಶಾರದ ಮಂಟಪದಲ್ಲಿ ನಡೆದ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಉಜಿರೆ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸುಳ್ಯದ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಇವರ ಮೂಲಕ ದಿವಂಗತ ನವೀನ್ ರವರ ಪತ್ನಿ ಶ್ರೀಮತಿ ಕವಿತಾ ರವರಿಗೆ ಹಸ್ತಾಂತರ ಮಾಡಲಾಯಿತು.


ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ಕೃಷ್ಣಪ್ಪ ಗೌಡ ದೇವಸ, ಸವಣಾಲು, ನಿಕಟ ಪೂರ್ವ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು, ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ ನಿರ್ದೇಶಕರಾದ ಗೋಪಾಲಕೃಷ್ಣ ಗುಲ್ಲೋಡಿ, ಮಾಧವ ಗೌಡ ಬೆಳ್ತಂಗಡಿ, ಗೋಪಾಲ ಕೃಷ್ಣ (ಜಿ.ಕೆ) ಉಜಿರೆ, ಸುರೇಶ್ ಕೌಡಂಗೆ, ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ (ಲಿ.)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ್ ಕುಮಾರ್, ಸೋಮಂತ್ತಡ್ಕ ಶಾಖೆಯ ವ್ಯವಸ್ಥಾಪಕರು ಉಮೇಶ್ ಮೈರ್ನೋಡಿ, ಉಜಿರೆ ಗ್ರಾಮ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಧರಣಿ, ಉಜಿರೆ, ಕಾರ್ಯದರ್ಶಿ ಶೇಖರ ಗೌಡ ಕುಂಭಪಾಲು, ಕೋಶಾಧಿಕಾರಿ ಬಾಲಕೃಷ್ಣ ಗೌಡ ಕೊರಮೇರು, ಗೌರವಾಧ್ಯಕ್ಷ ಪ್ರಕಾಶ ಗೌಡ ಅಪ್ರಮೇಯ, ಯುವ ವೇದಿಕೆ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಭರತ್, ಗ್ರಾಮ ಸಮಿತಿ ಸದಸ್ಯರು ಹಾಗೂ ಸ್ಪಂದನಾ ಸೇವಾ ಸದಸ್ಯರು ಉಪಸ್ಥಿತರಿದ್ದರು.

Related posts

ಪೆರಿಂಜೆ ಶ್ರೀ ಧ.ಮಂ.ಅ. ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಮೂಲಗೇಣಿದಾರರಿಗೆ ಸರಕಾರ ಶೀಘ್ರವೇ ನ್ಯಾಯ ಒದಗಿಸಲಿ: ಪ್ರತಾಪಸಿಂಹ ನಾಯಕ್

Suddi Udaya

ಉಜಿರೆ ರಬ್ಬರ್ ಸೊಸೈಟಿಗೆ ಅಪೋಲೋ ಗೋಲ್ಡ್ ಪಾರ್ಟ್ನರ್ ಅವಾರ್ಡ್

Suddi Udaya

ಶ್ರೀ ಕ್ಷೇತ್ರ ಸೌತಡ್ಕಕ್ಕೆ ನಟಿ ರಚಿತಾ ರಾಮ್ ಭೇಟಿ

Suddi Udaya

ಕಲ್ಮಂಜದಲ್ಲಿ ಬಿಜೆಪಿ ಕಾರ್ಯಕರ್ತರ‌ ವಿಜಯೋತ್ಸವ

Suddi Udaya

ಜ.30: ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!