ಧರ್ಮಸ್ಥಳ  ಶ್ರೀ ಮಂ.ಸ್ವಾ. ಅ.ಹಿ. ಪ್ರಾ. ಶಾಲೆಯಲ್ಲಿ ‘ಆಟಿಡೊಂಜಿ ದಿನ ‘

Suddi Udaya

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತುಳುನಾಡಿನ ವಿಶೇಷ ತಿಂಗಳಾದ ಆಟಿ ತಿಂಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ‘ಆಟಿಡೊಂಜಿ ದಿನ ‘ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಲ್ಮoಜ ಗ್ರಾಮದ ಶ್ರೀಮತಿ ಜಾನಕಿ ಇವರು ಆಗಮಿಸಿದರು. ಇವರು ಆಟಿ ತಿಂಗಳಲ್ಲಿ ಪ್ರತೀ ದಿನವೂ ಮಹತ್ವದ್ದಾಗಿದೆ. ಆಟಿ ಅಮಾವಾಸ್ಯೆಯ ದಿನದಂದು ಹಾಲೆ ಮರದ ಕಷಾಯ ಕುಡಿಯುವುದು ಯಾಕೆಂದರೆ ಆ ಮರದಲ್ಲಿ ಮೂರು ದೇವತೆಗಳ ವಾಸವಿರುತ್ತದೆ. ಆ ಕಷಾಯವನ್ನು ಕುಡಿಯುವುದರಿಂದ ಆ ದೇವತೆ ಗಳ ಅನುಗ್ರಹ ನಮಗೆ ಸಿಗುತ್ತದೆ. ಈ ತಿಂಗಳಲ್ಲಿ ಸಿಗುವ ಕೆಸು, ತಜಂಕ್ ಸೊಪ್ಪು, ತಿಮರೆ ಸೊಪ್ಪು,ಕಣಿಲೆಗಳಿಂದ ತಯಾರಿಸಿದ ತಿಂಡಿಗಳನ್ನು ತಿನ್ನಬೇಕು. ಹಿಂದಿನ ಕಾಲದಲ್ಲಿ ಬಡತನ ಇತ್ತು. ನಮ್ಮ ಸುತ್ತಮುತ್ತ ಸಿಗುವ ಹಲಸಿನಕಾಯಿ ಬೀಜವನ್ನು ತಿನ್ನುವುದು, ಹಪ್ಪಳ ತಿನ್ನುವುದು, ಸೊಪ್ಪು ಗಳನ್ನು ತಿನ್ನುವುದು, ಮಾವಿನಕಾಯಿ ಕೆತ್ತೆ ಗಳನ್ನು ಒಣಗಿಸಿ ತಿನ್ನುವುದು ರೂಢಿಯಲ್ಲಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಡತನದ ಅರಿವು ಈಗಿನ ಮಕ್ಕಳಿಗೆ ಇಲ್ಲ. ಆದ್ದರಿಂದ ಇಂತಹ ಕಾರ್ಯಕ್ರಮ ಗಳನ್ನು ಮಾಡುವುದರ ಮೂಲಕ ತಿಂಗಳ ವಿಶೇಷತೆಯನ್ನು ತಿಳಿಯುವಂತೆ ಮಾಡುತ್ತಿರುವುದು ಅಭಿನಂದನೀಯ ಎನ್ನುತ್ತಾ ತುಳು ಪದ್ಯವಾದ” ತಿತ್ತೀರಿ ಮಜಲ್ ಡ್ ಪಂತಿ ನಲಿಪುಂಡು”ಎಂಬ ಹಾಡನ್ನು ಹಾಡಿಸಿ ಮಕ್ಕಳನ್ನು ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಶಾಲೆಯ ಮುಖ್ಯ ಗುರುಗಳಾದ ಸುಬ್ರಹ್ಮಣ್ಯ ರಾವ್ ಇವರು ಕಾರ್ಯಕ್ರಮದ ಉದ್ದೇಶ ನಮ್ಮ ಹಿಂದಿನ ಕಾಲದ ವಿಚಾರಗಳನ್ನು ತಿಳಿಯುವುದಾಗಿದೆ. ಅದೇ ರೀತಿ ಈ ತಿಂಗಳಲ್ಲಿ ಆಡುವ ಚೆನ್ನೆಮಣೆ ಆಟದ ಬಗ್ಗೆ ಮಾಹಿತಿಯನ್ನು ನೀಡಿದರು.
ಶಾಲೆಯ ಮಕ್ಕಳು ಮನೆಯಿಂದ ತಯಾರಿಸಿಕೊಂಡು ಬಂದ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು.

ಕಾರ್ಯಕ್ರಮವು ತುಳು ಭಾಷೆಯಲ್ಲಿಯೇ ನಡೆದದ್ದು ತುಂಬಾ ವಿಶೇಷವಾಗಿತ್ತು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಶಿಕ್ಷಕಿ ಶ್ರೀಮತಿ ಗಿರಿಜಾ ಇವರು ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಉಷಾರವರು ಧನ್ಯವಾದವಿತ್ತರು. 
 ಕಾರ್ಯಕ್ರಮವನ್ನು ಹಿರಿಯ ಶಿಕ್ಷಕಿ ಶ್ರೀಮತಿ ಶ್ರೀಜಾ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದ ದವರು ಸಹಕರಿಸಿದರು.

Leave a Comment

error: Content is protected !!