23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿಯ ಹಿರಿಯ ಹೊಟೇಲ್ ಉದ್ಯಮಿ ಅಬೂಬಕ್ಕರ್ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಇಲ್ಲಿನ ಮುಖ್ಯ ರಸ್ತೆಯ ಸೇತುವೆ ಬಳಿ, ದಾಮೋಧರ ಆಸ್ಪತ್ರೆ ಪಕ್ಕದ ನಿವಾಸಿ ನಗರದ ಹಿರಿಯ ಹೊಟೇಲ್ ಉದ್ಯಮಿಯಾಗಿದ್ದ ಅಬೂಬಕ್ಕರ್ (56) ಅವರು ಕರ್ತವ್ಯದಲ್ಲಿರುವಂತೆಯೇ ಹೃದಯಾಘಾತಕ್ಕೊಳಗಾಗಿ ನಿಧನರಾದ ಘಟನೆ ಜು.24 ರಂದು ನಡೆದಿದೆ.
ಮೂಲತಃ ಬಂಗಾಡಿ ನಿವಾಸಿ ಇಬ್ರಾಹಿಂ ಮತ್ತು ಖತೀಜಮ್ಮ ದಂಪತಿಯ ದ್ವಿತೀಯ ಪುತ್ರರಾಗಿದ್ದ ಅಬೂಬಕ್ಕರ್ ಅವರು ಬೆಳ್ತಂಗಡಿಯಲ್ಲಿ ಸುಮಾರು 30 ವರ್ಷಗಳಿಂದ ಬೆಳ್ತಂಗಡಿ ಭಾರತ್ ಬೀಡಿ ಕಚೇರಿಯ ಮುಂಭಾಗದಲ್ಲಿ ಸ್ವಪ್ನ ಎಂಬ ಹೆಸರಿನ ಹೊಟೇಲ್ ನಡೆಸುತ್ತಿದ್ದರು. ಬೆಳಿಗ್ಗೆ ಎಂದಿನಂತೆ ಕರ್ತವ್ಯದಲ್ಲಿರುವ ವೇಳೆಗೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕೆಲಸದವರಾದ ನಿಝಾರ್, ಪಕ್ಕದ ಗೇರೇಜ್‌ನ ಪ್ರವೀಣ್ ಮತ್ತಿತರರು ಲಾಯಿಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಅವರಿಗೆ ಹೃದಯಾಘಾತವಾಗಿ ಮಧ್ಯಾಹ್ನದ ವೇಳೆ ಕೊನೆಯುಸಿರೆಳೆದರು.
ಸರಳ ಸಜ್ಜನಿಕೆ ಮತ್ತು ಪ್ರಾಮಾಣಿಕತೆಯಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದ‌ ಅವರು, ಹೊಟೇಲ್‌ಗೆ ಕೈಚಾಚಿ ಬರುವ ಅನೇಕ ಮಂದಿ ಭಿಕ್ಷುಕರಿಗೆ ಉಚಿತವಾಗಿ ಊಟ ನೀಡುತ್ತಿದ್ದರು.

ಮೃತರು ತಾಯಿ ಖತೀಜಮ್ಮ, ಪತ್ನಿ ಆಝ್‌ರಾ, ಇಬ್ಬರು ಹೆಣ್ಣು ಮಕ್ಕಳಾದ ರೈಹಾನಾ ಮತ್ತು ಅಫ್ರೀನಾ, ಓರ್ವ ಪುತ್ರ ಮುಹಮ್ಮದ್ ತೌಫೀಕ್, ಸಹೋದರರಾದ ಯೂಸುಫ್, ಉಮರ್ ಮತ್ತು ಉಸ್ಮಾನ್, ಸಹೋದರಿಯರಾದ ಮೈಮುನಾ ಮತ್ತು ಝುಬೈದಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

Suddi Udaya

ಗರ್ಡಾಡಿ: ಕುಂಡದಬೆಟ್ಟು ನಿವಾಸಿ ವೆಂಕಪ್ಪ ಮೂಲ್ಯ ನಿಧನ

Suddi Udaya

ಅಳದಂಗಡಿ ಸ. ಪ್ರೌ. ಶಾಲೆಯ ಶಿಕ್ಷಕ ಜಗದೀಶ್ ಬಿ.ಎಸ್ ಹಾಗೂ ಗೌರವ ಶಿಕ್ಷಕಿ ಸಾಧನ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಬೆಳ್ತಂಗಡಿ: ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಉಜಿರೆ ಪಂಚಾಯತ್ ನ ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಗ್ರಂಥಾಲಯಕ್ಕೆ ಎನ್ನೆಸ್ಸೆಸ್ ಸ್ವಯಂ ಸೇವಕರ ಭೇಟಿ

Suddi Udaya

ರಾಜ್ಯಮಟ್ಟದ ಕರಾಟೆಯಲ್ಲಿ ಸಾನ್ವಿ ಎಸ್ ಕೋಟ್ಯಾನ್ ರವರಿಗೆ ಪ್ರಶಸ್ತಿ

Suddi Udaya
error: Content is protected !!