ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 73ರ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ಕಿ.ಮೀ 40ರಿಂದ 75ರವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸುವ ನಿಟ್ಟಿನಲ್ಲಿ 26.57295 ಹೆಕ್ಟೇರ್ ಜಾಗವನ್ನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕ ಪ್ರಕಟಣೆ ಹೊರಬಿದ್ದಿದೆ.

ರಸ್ತೆಗೆ ಭೂ ಸ್ವಾಧೀನವಾಗಲಿರುವ ಜಾಗದ ಭೂಮಾಲಕರು ಅಥವಾ ಯಾವುದೇ ರೀತಿಯ ಹಿತಾಸಕ್ತಿ ಉಳ್ಳವರು 21 ದಿನಗಳ ಒಳಗಾಗಿ ಆಕ್ಷೇಪಣೆಗಳನ್ನು ಭೂಸ್ವಾಧೀನ ಅಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಕುಕ್ಕುಳ ಗ್ರಾಮದಲ್ಲಿ ಒಟ್ಟು 35 ಸರ್ವೆ ನಂಬ್ರಗಳು, ಪಾರೆಂಕಿ ಗ್ರಾಮದಲ್ಲಿ ಒಟ್ಟು 20 ಸರ್ವೆನಂಬ್ರಗಳು, ಮಾಲಾಡಿ ಗ್ರಾಮದಲ್ಲಿ ಒಟ್ಟು 35 ಸರ್ವೆನಂಬ್ರಗಳು, ಸೋಣಂದೂರು ಗ್ರಾಮದಲ್ಲಿ ಒಟ್ಟು 61 ಸರ್ವೆ ನಂಬ್ರಗಳು, ಕುವೆಟ್ಟು ಗ್ರಾಮದಲ್ಲಿ ಒಟ್ಟು 78 ಸರ್ವೆ ನಂಬ್ರಗಳು, ಬೆಳ್ತಂಗಡಿ ಕಸಬಾದಲ್ಲಿ ಒಟ್ಟು 144 ಸರ್ವೆನಂಬ್ರಗಳು, ಲಾಯಿಲ ಗ್ರಾಮದಲ್ಲಿ ಒಟ್ಟು 93 ಸರ್ವೆ ನಂಬ್ರಗಳು, ಉಜಿರೆ ಗ್ರಾಮದಲ್ಲಿ ಒಟ್ಟು 68 ಸರ್ವೆನಂಬ್ರಗಳು, ಕಲ್ಮಂಜ ಗ್ರಾಮದಲ್ಲಿ ಒಟ್ಟು20 ಸರ್ವೆ ನಂಬ್ರಗಳು, ಮುಂಡಾಜೆ ಗ್ರಾಮದಲ್ಲಿ ಒಟ್ಟು 61 ಸರ್ವೆ ನಂಬ್ರಗಳು, ಚಿಬಿದ್ರೆ ಗ್ರಾಮದಲ್ಲಿ ಒಟ್ಟು 41 ಸರ್ವೆ ನಂಬ್ರಗಳು, ಚಾರ್ಮಾಡಿಯಲ್ಲಿ ಒಟ್ಟು 88 ಸರ್ವೆ ನಂಬ್ರಗಳು ಈ ಸರ್ವೆ ನಂಬ್ರಗಳಲ್ಲಿ ರಸ್ತೆ ಹಾದು ಹೋಗುತ್ತಿದ್ದು, ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಭೂ ಸ್ವಾಧೀನ ನಡೆಯಲಿದೆ.

Leave a Comment

error: Content is protected !!