ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೈ‌ ಕೊಟ್ಟ ವಿದ್ಯುತ್: ವೈದ್ಯರಿಂದ ಕತ್ತಲಲ್ಲಿ ರೋಗಿಗಳ ಆರೋಗ್ಯ ತಪಾಸಣೆ: ಇನ್ವರ್ಟರ್ ವ್ಯವಸ್ಥೆಗಳು ಇಲ್ಲದೆ ಟಾರ್ಚ್ ಬೆಳಕಿನಿಂದ ಚಿಕಿತ್ಸೆ ನೀಡಬೇಕಾದ ಸ್ಥಿತಿ

Suddi Udaya

ಮಚ್ಚಿನ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೆಂಟ್ ಇಲ್ಲದ ಸಮಯದಲ್ಲಿ ರೋಗಿಗಳಿಗೆ ಕತ್ತಲೆಯಲ್ಲಿ ಆರೋಗ್ಯ ತಪಾಸಣೆ ನಡೆಸುವಂತ ಪರಿಸ್ಥಿತಿಯಲ್ಲಿದೆ.

ಮಳೆಗಾಲದಲ್ಲಿ ಕರೆಂಟ್ ಇಲ್ಲದೆ ಇರುವುದು ಸರ್ವೇಸಾಮಾನ್ಯವಾಗಿದ್ದು ಆದರೆ ಈ ಆರೋಗ್ಯ ಕೇಂದ್ರದಲ್ಲಿ ಕರೆಂಟ್ ಇಲ್ಲದ ಸಮಯದಲ್ಲಿ ಇನ್ವರ್ಟರ್ ವ್ಯವಸ್ಥೆಗಳು ಇಲ್ಲದೆ ಟಾರ್ಚ್ ಬೆಳಕಿನಿಂದ ಚಿಕಿತ್ಸೆ ನೀಡುವಂತಾಗಿದೆ.

ಈ ಆರೋಗ್ಯ ಕೇಂದ್ರವು ಕಿರಿದಾದ ಕೊಠಡಿಯಲ್ಲಿದ್ದು ಹೊರಗಿನ ಬೆಳಕು ಬೀಳದೆ ಕತ್ತಲೆಯಲ್ಲಿದ್ದು ತಪಾಸಣೆ ನಡೆಸಲು ಅಸಾಧ್ಯಕರವಾಗಿದೆ ವಿವಿಧ ತಪಾಸಣೆಗಳಿಗೆ ಕರೆಂಟ್ ಬರುವವರೆಗೂ ಕಾದು, ರೋಗಿಗಳಿಗೆ ಚಿಕಿತ್ಸೆ ನೀಡುವಂತ ಪರಿಸ್ಥಿತಿಯಲ್ಲಿದೆ ನಿರ್ಮಾಣವಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆ. ಗ್ರಾಮ ಪಂಚಾಯತ್ ತಕ್ಷಣ ಗಮನಹರಿಸಿ ಇನ್ವರ್ಟರ್ ಅಳವಡಿಸಿ ಜನರಿಗೆ ಚಿಕಿತ್ಸೆಗೆ ಅನುಕೂಲಗೊಳಿಸಬೇಕಾಗಿದೆ.

Leave a Comment

error: Content is protected !!