27.9 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿ

ದೆಹಲಿಯಲ್ಲಿ ಕೇಂದ್ರ ಸರ್ಕಾರದಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ನೇಶನಲ್ ಅಕಾಡೆಮಿ ಆಫ್ ರುಡ್‌ಸೆಟಿ ಮಧ್ಯೆ ಒಪ್ಪಂದ ಪತ್ರಕ್ಕೆ ಸಹಿ

ಧಮ೯ಸ್ಥಳ : ನವದೆಹಲಿಯಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ನೇಶನಲ್ ಅಕಾಡೆಮಿ ಆಫ್ ರುಡ್‌ಸೆಟಿ ಮಧ್ಯೆ ಮೂರು ವರ್ಷಗಳ ಅವಧಿಯ ಕರಾರು ಒಪ್ಪಂದ ಪತ್ರಕ್ಕೆ ಸಹಿ ಮಾಡಲಾಯಿತು.
೨೦೨೩ರ ಅಗೋಸ್ತು ಒಂದರಿಂದ ೨೦೨೬ರ ಜುಲೈ ೩೧ರ ವರೆಗೆ ಕರಾರುಪತ್ರ ಚಾಲ್ತಿಯಲ್ಲಿರುತ್ತದೆ.

ನೇಶನಲ್ ಅಕಾಡೆಮಿ ಆಫ್ ರುಡ್‌ಸೆಟಿ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಕರ್ಮ ಝಿಂಪ ಭಾಟಿಯಾ ಕರಾರು ಪತ್ರಕ್ಕೆ ಸಹಿ ಹಾಕಿದರು.

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶೈಲೇಶ್ ಕುಮಾರ್ ಸಿಂಗ್, ನೇಶನಲ್ ಅಕಾಡೆಮಿ ಆಫ್ ರುಡ್‌ಸೆಟಿ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಕೆ.ಎನ್. ಜನಾರ್ದನ್, ಜಂಟಿ ನಿರ್ದೇಶಕರು, ಉಪಆಯುಕ್ತರು, ಶಿವಸೋನಿ, ನವೀನ್ ಕುಮಾರ್, ವಿಶಾಲ್ ಗುಪ್ತಾ ಮತ್ತು ಕಾನೂನು ಸಲಹೆಗಾರ ಲೋಕೇಶ್ ಸುಖ್‌ವಾನಿ ಉಪಸ್ಥಿತರಿದ್ದರು.

Related posts

ಚಾರ್ಮಾಡಿ ಹೊಸಮಠ ಪ್ರದೇಶದಲ್ಲಿ ಓಣಂ ಆಚರಣೆ

Suddi Udaya

ಎಮ್.ಆರ್.ಪಿ.ಎಲ್ – ಸಿಎಸ್ಆರ್ ಯೋಜನೆಯಡಿ “ಶ್ರೀ ಕೃಷ್ಣ ಯೋಗಕ್ಷೇಮ” ಅಂಬುಲೆನ್ಸ್ ಹಸ್ತಾಂತರ

Suddi Udaya

ಜೀವ ವಿಮೆ ಕಂಪನಿ ಎಸ್ ಬಿಐ ಲೈಫ್ ನ 1095ನೇ ಶಾಖೆ ಮಾರ್ಚ್ 2ನೇ ವಾರ ಶುಭಾರಂಭ

Suddi Udaya

ಬಂದಾರು : ಪ್ರಾಥಮಿಕ, ಪ್ರೌಢಶಾಲಾ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಕುವೆಟ್ಟು: ಸ. ಉ. ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯಿಂದ ಹಾವೇರಿ ರಾಣಿ ಬೆನ್ನೂರಿನಲ್ಲಿ ಕಾರ್ಯಕ್ರಮ

Suddi Udaya
error: Content is protected !!