September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ: ಶ್ರೀ ಧ. ಮಂ. ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಸಹಯೋಗದಲ್ಲಿ ವೃತ್ತಿ ಜೀವನದ ಪ್ರಯಾಣ ಎನ್ನುವ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.


ಕಾಲೇಜಿನ ಹಿರಿಯ ವಿದ್ಯಾರ್ಥಿನಿ , ಮಂಗಳೂರಿನ ಯೂನಿವರ್ಸಿಟಿ ಕನೆಕ್ಷನ್ ಸಂಸ್ಥೆಯ ಆಪ್ತ ಸಮಾಲೋಚಕಿ , ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟರ್ ಶ್ರದ್ಧಾ ಎಸ್ ನಾಯ್ಕ್ ಅವರು ವೃತ್ತಿ ಮಾರ್ಗದರ್ಶನ ನಡೆಸಿದರು.
ವಿವಿಧ ಕೋರ್ಸ್ ಗಳ ಮಾಹಿತಿ ಹಾಗೂ ವೃತ್ತಿಗಳ ಆಯ್ಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಗ್ರಂಥಪಾಲಕ ಮನೋಹರ್ ಶೆಟ್ಟಿ ಅವರು ಶ್ರದ್ಧಾರವನ್ನು ಸನ್ಮಾನಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಅಭಿನಂದನಾ ನುಡಿಗಳನ್ನಾಡಿದರು. ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಸ್ಮರಣಿಕೆ ನೀಡಿ ಗೌರವಿಸಿದರು. ರಾ. ಸೇ ಯೋಜನೆಯ ನಾಯಕ ಸುದರ್ಶನ ನಾಯಕ್ ಉಪಸ್ಥಿತರಿದ್ದರು.

ಸರಣ್ಯಾ ಸ್ವಾಗತಿಸಿ , ಪಲ್ಲವಿ ಪರಿಚಯಿಸಿದರು. ಪ್ರಥಮ್ ಜೈನ್ ನಿರೂಪಿಸಿ , ಚಾರಿತ್ರ್ಯ ವಂದಿಸಿದರು.

Related posts

ಉಜಿರೆಯಲ್ಲಿ ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ

Suddi Udaya

ಹೊಚ್ಚ ಹೊಸ ಸಂಗ್ರಹದೊಂದಿಗೆ ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಪ್ಲ್ಯಾಟ್ 10% ಡಿಸ್ಕೌಂಟ್ ಸೇಲ್

Suddi Udaya

ನಿವೃತ್ತ ಯೋಧ ಡಾ.ಕೆ.ಎಸ್ ಗೋಪಾಲಕೃಷ್ಣ ಕಾಂಚೋಡು ಅವರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ

Suddi Udaya

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ರೂ‌ 1.50 ಕೋಟಿ ಬೆಲೆಯ ಬಿಳಿ ಬಣ್ಣದ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಕಾರು

Suddi Udaya

ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿ ಹುದ್ದೆಯಿಂದ ಕೊಕ್ಕಡ ಕೊಲ್ಲಾಜೆ ನಿವಾಸಿ ಪವನ್ ಸಾಲ್ಯಾನ್ ಗೆ ಮುಕ್ತಿ

Suddi Udaya

ಬೆಳ್ತಂಗಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

Suddi Udaya
error: Content is protected !!