September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಹಳೇಪೇಟೆ ರಿಕ್ಷಾ ಚಾಲಕ ಮಾಲಕರ ಸಂಘದ ಮಹಾಸಭೆ: ಅಧ್ಯಕ್ಷರಾಗಿ ಸೂರಪ್ಪ ಗಾಂಧಿನಗರ ಅವಿರೋಧವಾಗಿ ಆಯ್ಕೆ

ಉಜಿರೆ: ಉಜಿರೆ ಹಳೇಪೇಟೆ (ಯು.ಹೆಚ್.) ರಿಕ್ಷಾ ಚಾಲಕ ಮಾಲಕರ ಸಂಘದ ಮಹಾಸಭೆಯು. ಜು.26 ರಂದು ಉಜಿರೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸೂರಪ್ಪ ಗಾಂಧಿನಗರ, ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಉಮೇಶ್ ಅತ್ತಾಜೆ, ಉಪಾಧ್ಯಕ್ಷರಾಗಿ ರಫೀಕ್ ಪಾಲ, ಕಾರ್ಯದರ್ಶಿಯಾಗಿ ಗುರುನಂದ, ಜೊತೆ ಕಾರ್ಯದರ್ಶಿಯಾಗಿ ಸುಧಾಕರ್, ಕೋಶಾಧಿಕಾರಿ ಹಂಝ ಎಂ.ಹೆಚ್., ಇವರನ್ನೊಳಗೊಂಡಂತೆ ಒಟ್ಟು 36 ಸದಸ್ಯರ ಸಮಿತಿಯನ್ನು ರಚಿಸಲಾಯಿತು.


ಗೌರವಾಧ್ಯಕ್ಷರಾದ ಉಮೇಶ್ ಅತ್ತಾಜೆ ಮಾತನಾಡಿ ಚಾಲಕರು ಕಾನೂನಿಗೆ ತಲೆಬಾಗಿ ಚಾಲನಾ ಪರವಾನಿಗೆ ಹಾಗೂ ಇತರ ಎಲ್ಲಾ ದಾಖಲೆಗಳು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.


ಕೋಶಾಧಿಕಾರಿ ಹಂಝ ಎಂ.ಹೆಚ್. ಮಾತನಾಡಿ ರಸ್ತೆಗಳ ಕಾಮಗಾರಿ ನಡೆಯುತ್ತಿರುವುದರಿಂದ ರಿಕ್ಷಾ ಪಾರ್ಕಿಂಗ್‌ಗೆ ಸಮಸ್ಯೆಯಾಗುತ್ತಿದೆ. ಮುಂದೆ ಸರಕಾರವು ಉಜಿರೆಯಲ್ಲಿ ಒಂದು ಉತ್ತಮವಾದ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕಾಗಿ ಮನವಿ ಮಾಡಿದರು.
ಸಭೆಯಲ್ಲಿ ಬಿ.ಎಂ.ಎಸ್. ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷರಾದ ರಮೇಶ್ ಬೊಳ್ಳಿ ಉಪಸ್ಥಿತರಿದ್ದರು.

Related posts

ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ಕಲಾನಿಕಾಯದ ಡೀನ್ ಡಾ. ಶ್ರೀಧರ ಭಟ್ಟ ರವರಿಗೆ ಪ್ರಾಧ್ಯಾಪಕರಾಗಿ ವೃತ್ತಿ ಪದೋನ್ನತಿ

Suddi Udaya

ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು ವಾರ್ಷಿಕ ಕ್ರೀಡಾಕೂಟ

Suddi Udaya

ಭಾರತೀಯ ಮಜ್ದೂರ್ ಸಂಘದ 71ನೇ ಸ್ಥಾಪನಾ ದಿನಾಚರಣೆ ಹಾಗೂ ರಿಕ್ಷಾ ಚಾಲಕ -ಮಾಲಕರ ಸಂಘ ವೇಣೂರು ವಲಯ ವಾರ್ಷಿಕ ಸಭೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಗೌರವಾರ್ಪಣೆ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ರವರಿಂದ ಮತದಾನ

Suddi Udaya

ಬೆಳ್ತಂಗಡಿ: ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya
error: Content is protected !!