23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸುಲ್ಕೇರಿಮೊಗ್ರು ವರ್ಪಾಳೆ ಕಿಂಡಿ ಅಣೆಕಟ್ಟು ಸ್ವಚ್ಛತಾ ಕಾರ್ಯ

ಅಳದಂಗಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಅಳದಂಗಡಿ ವಲಯ ಸುಲ್ಕೇರಿಮೊಗ್ರು ವ್ಯಾಪ್ತಿಯಲ್ಲಿರುವ ವರ್ಪಾಳೆ ಎಂಬಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟಿನಲ್ಲಿ ಪ್ರವಾಹಕ್ಕೆ ತೇಲಿ ಬಂದ ಮರಗಳು ಹಾಗೂ ಇತರ ಕಸ ಕಡ್ಡಿಗಳು ಸೇರಿಕೊಂಡು ನೀರಿನ ಸರಾಗವಾಗಿ ಹರಿಯುವಿಕೆಗೆ ತೊಂದರೆಯಾಗಿದ್ದು ಪ್ರವಾಹ ಹೆಚ್ಚಾದಲ್ಲಿ ನದಿಯ ನೀರು ತೋಟಗಳಿಗೆ ನುಗ್ಗಿ ಹಾನಿಯಾಗುವ ಸಂಭವ ಇತ್ತು. ವಲಯ ಮೇಲ್ವಿಚಾರಕಿ ಶ್ರೀಮತಿ ಸುಮಂಗಲ ಅವರ ಗಮನಕ್ಕೆ ತಂದು ನದಿಯ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.


ಸ್ವಯಂಸೇವಕರಾದ ಪ್ರಕಾಶ್ ಕೊಲ್ಲಂಗೆ, ಘಟಕ ಪ್ರತಿನಿಧಿ ರಾಜೇಶ್ ಕುದುರು, ಪ್ರವೀಣ್ ನಿನಿಗಲ್, ರವಿಚಂದ್ರ ಹಾಗೂ ಶ್ರೀಕಾಂತ್ ರವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು.


ಸ್ವಯಂ ಪ್ರೇರಣೆಯಿಂದ ಸ್ಥಳೀಯರಾದ ಸುರೇಶ್ ಹಾಗೂ ವಿನೋದ್ ರವರು ಸೇವಾ ಕಾರ್ಯದಲ್ಲಿ ಕೈಜೋಡಿಸಿದರು. ಪ್ರಗತಿಪರ ಕೃಷಿಕರಾದ ಗಂಗಾಧರ ಮಿತ್ತಮಾರ್ ಸ್ಥಳಕ್ಕೆ ಆಗಮಿಸಿ ಸೂಕ್ತ ಮಾರ್ಗದರ್ಶನವನ್ನು ನೀಡಿದರು. ಸ್ವಯಂ ಸೇವಕರ ಕಾರ್ಯಕ್ಕೆ ಮೆಚ್ಚಿ ವಿನೋದ್ ರವರು ಸ್ವ ಇಚ್ಛೆಯಿಂದ ಸ್ವಯಂ ಸೇವಕರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಿದರು.

Related posts

ಅಂಡಿಂಜೆ: ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ 27 ನೇ ವರ್ಷದ ವಿಶ್ವಕರ್ಮ ಪೂಜೆ

Suddi Udaya

ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ಚಂದ್ರಯಾನ – 3 ಯಶಸ್ವಿಯ ಸಂಭ್ರಮಾಚರಣೆ

Suddi Udaya

ಮರೋಡಿ:ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಕ್ರೀಡಾಂಗಣ ಉದ್ಘಾಟನೆ

Suddi Udaya

ವಾಣಿ ಶಿಕ್ಷಣ ಸಂಸ್ಥೆಗಳ ಬಸ್ ಚಾಲಕ ಶಶಿಧರ ಗೌಡ ಪಣಿಕ್ಕಲ್ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕು ಮಟ್ಟದ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಜೂ.21: “ಪ್ರಭು ಸ್ವೀಟ್ಸ್” 2ನೇ ಫ್ಯಾಕ್ಟರಿ ಔಟ್‌ಲೆಟ್ ಗುರುವಾಯನಕೆರೆಯಲ್ಲಿ ಶುಭಾರಂಭ

Suddi Udaya
error: Content is protected !!