38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅ.ಪ್ರೌ. ಶಾಲೆ ಮತ್ತು ಪ. ಪೂ. ಕಾಲೇಜಿನಲ್ಲಿ ಹಣ್ಣಿನ ಗಿಡಗಳ ನಾಟಿ

ಮುಂಡಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಇದರ ವತಿಯಿಂದ, ಪದವಿಪೂರ್ವ ಶಿಕ್ಷಣ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆ, ಮುಂಡಾಜೆ ಪದವಿಪೂರ್ವ ವಿದ್ಯಾಲಯ ಮುಂಡಾಜೆ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಮುಂಡಾಜೆ ಶಿಕ್ಷಣ ಸಂಸ್ಥೆಗಳು ಮುಂಡಾಜೆ, ಗ್ರಾಮ ವಿಕಾಸ ಸಮಿತಿ, ಮುಂಡಾಜೆ ವಲಯದ ಮುಂಡಾಜೆ ಕಾರ್ಯಕ್ಷೇತ್ರದ ಒಕ್ಕೂಟದ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಣ್ಣಿನ ಗಿಡಗಳ ನಾಟಿ ಮಾಡಲಾಯಿತು.

ಈ ಸಂದರ್ಭ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ ರವರು ಪರಿಸರ ರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡಿದರು. ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ್ ಭಟ್ ಕಜೆ ಇವರು ಈ ಸಂದರ್ಭದಲ್ಲಿ ಮಾಹಿತಿಯನ್ನು ನೀಡಿ 20 ಗಿಡಗಳ ರಕ್ಷಣೆಗೆ ಬೇಲಿ ಮಾಡಲು ಹಳೆ ವಿದ್ಯಾರ್ಥಿ ಸಂಘದ ಮೂಲಕ ಸಹಕಾರ ನೀಡುವುದಾಗಿ ತಿಳಿಸಿದರು.

ಮುಂಡಾಜೆಯ ಕಾರ್ಗಿಲ್ ವನದ ಮುಖ್ಯಸ್ಥರಾದ ಸಚಿನ್ ಬಿಢೆ ಮುಂಡಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ನಾಯ್ಕ್, ಶಾಲಾ ಮುಖ್ಯೋಪಾಧ್ಯಾಯರಾದ ಜಯಂತಿ ಮತ್ತು ಚಂದ್ರಾವತಿ ,ಗ್ರಾಮ ವಿಕಾಸ ಸಮಿತಿಯ ಪ್ರಮುಖ್ ಸುಭಾಷ್ ಚಂದ್ರ ಜೈನ್, ರಾಷ್ಟ್ರೀಯ ಸೇವಾ ಸಂಘದ ನಮಿತಾ ಕೆ ಮತ್ತು ವಿದ್ಯಾರ್ಥಿಗಳು, ವಲಯದ ಮೇಲ್ವಿಚಾರಕರಾದ ಜನಾರ್ದನ್, ಸೇವಾ-ಪ್ರತಿನಿಧಿ ಶ್ರೀಮತಿ ಲೀಲಾವತಿ, ತಾಲೂಕಿನ ಕೃಷಿ ಅಧಿಕಾರಿಯದ ರಾಮ್ ಕುಮಾರ್ ,ಒಕ್ಕೂಟದ ಉಪಾಧ್ಯಕ್ಷರು ಮತ್ತು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದು ಹಣ್ಣಿನ ಗಿಡಗಳ ನಾಟಿ ಮಾಡಲಾಯಿತು.

Related posts

ಚಾತುರ್ಮಾಸ್ಯ ವೃತಾಚಾರಣೆ, ಮಹಾಮಂಡಲೇಶ್ವರ ಕನ್ಯಾಡಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿಧಾನ ಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ

Suddi Udaya

ಸುನ್ನೀ ಮ್ಯಾನೇಜ್ ಮೆಂಟ್ ಅಸೋಶಿಯೇಷನ್ ನ ಬೆಳ್ತಂಗಡಿ ರೀಜಿನಲ್ ಇದರ ವಾರ್ಷಿಕ ಕೌನ್ಸಿಲ್

Suddi Udaya

ಕೊಕ್ಕಡದಲ್ಲಿ ಸತ್ಯ ಸುದ್ದಿ ನ್ಯೂಸ್ ಕಛೇರಿ ಮತ್ತು ವೆಬ್ ಸೈಟ್ ಲೋಕಾರ್ಪಣೆ

Suddi Udaya

ಬೆಳ್ತಂಗಡಿ ಸೌತ್ ಕೆನರಾ ಪೋಟೋಗ್ರಾಫ್ ಆಸೋಸಿಯೇಷನ್ ನಿಂದ ಮುದ್ದು ಮಕ್ಕಳ ಪೋಟೋ ಸ್ಪರ್ಧೆಯ ಬಹುಮಾನ ವಿತರಣೆ

Suddi Udaya

ಕಲ್ಲೇರಿ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಪ್ರಾಯೋಜಿತ ಬಟ್ಟೆಯ ಕಸೂತಿ ತಯಾರಿಕೆ ಸ್ವ ಉದ್ಯೋಗ ತರಬೇತಿಯ ಉದ್ಘಾಟನೆ

Suddi Udaya
error: Content is protected !!