ಅಂಡಿಂಜೆ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದ ಸಭೆ: ಸಿರಿ ಧಾನ್ಯಗಳ ಬಳಕೆ ಹಾಗೂ ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮ

Suddi Udaya

ವೇಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್, ಗುರುವಾಯನಕೆರೆ, ವೇಣೂರು ವಲಯದ ಅಂಡಿಂಜೆ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದ ಸಭೆ ಶ್ರೀರಾಮ ವಿನಾಯಕ ಭಜನಾ ಮಂದಿರದಲ್ಲಿ ಸಿರಿ ಧಾನ್ಯಗಳ ಬಳಕೆ ಹಾಗೂ ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅಂಡಿಂಜೆ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶ್ವೇತಾರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಜನಜಾಗೃತಿ ಸದಸ್ಯರು ಹಾಗೂ ಮಾಜಿ ಪಂಚಾಯತ್ ಅಧ್ಯಕ್ಷರಾದ ಮೋಹನ್ ಅಂಡಿಂಜೆ ರವರು ದೀಪ ಬೆಳಗಿಸಿ ಸಿರಿ ಧಾನ್ಯ ಬಳಕೆ ಮಹತ್ವದ ಬಗ್ಗೆ, ಹಾಗೂ ಆಷಾಢ ತಿಂಗಳಲ್ಲಿ ಬಳಸುವ ಆಹಾರಗಳಲ್ಲಿ ಇರುವ ಔಷಧಿ ಗುಣಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ರವರು ಮಾತನಾಡುತ್ತ ಮಹಿಳೆಯರಿಗೆ ತಮ್ಮ ನೋವು, ಕಷ್ಟಗಳನ್ನು ಹೇಳಿಕೊಳ್ಳಲು, ವೇದಿಕೆ ಬೇಕೆಂಬ ದೃಷ್ಟಿಯಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರು ಜ್ಞಾನ ವಿಕಾಸ ಕೇಂದ್ರವನ್ನು ಪ್ರಾರಂಭಿಸಿದರು, ಮೂವತ್ತು ನಲವತ್ತು ವರ್ಷಗಳ ಹಿಂದೆ ಪ್ರತಿ ಮನೆಗಳಲ್ಲಿ ಟಿವಿ, ಮೊಬೈಲ್ ಫೋನ್ ಗಳು ಇರಲಿಲ್ಲ ಪ್ರಪಂಚದ ಹಾಗೂ ಹೋಗುಗಳನ್ನು ತಿಳಿಯಲು ಕೇಂದ್ರವೇ ಮುಖ್ಯವಾಗಿತ್ತು, ಈ ಕೇಂದ್ರ ಗಳು ಪ್ರಸ್ತುತ ಹೆಮ್ಮರವಾಗಿ ಬೆಳೆದಿದ್ದು ಸ್ವತಂತ್ರ ವಾಗಿ ತಾವೇ ನಿರ್ವಹಿಸುತ್ತಿದ್ದಾರೆ ಎನ್ನುತಾ ಹಾಗೂ ಮೊದಲು ಆಷಾಢ ತಿಂಗಳು ಬ0ತೆತಂದರೆ ತುಂಬಾ ಬಡತನದ ತಿಂಗಳು ಕಾಡಿನಲ್ಲಿ ಸಿಗುವ ಅನೇಕ ಬಗೆಯ, ಸೊಪ್ಪು, ಬೇರು, ಗೆಡ್ಡೆ ಗೆಣಸು, ಬಿದಿರಿನ ಕಲೀಲೆ, ಮುoತಾದ ವಸ್ತು ಗಳನ್ನು ವಿವಿಧ ರೀತಿಯಲ್ಲಿ ಮಾಡಿ ತಿನ್ನುತಿದ್ದರು ಇವುಗಳಲ್ಲಿರುವ ಪ್ರೊಟೀನ್ ಯುಕ್ತ ಆಹಾರಗಳಿಂದಾಗಿ ನಮ್ಮ ಹಿರಿಯರು ನೂರಾರು ಕಾಲ ವರ್ಷ ಅರೋಗ್ಯ ವಂತರಾಗಿ ಬದುಕುತಿದ್ದರು ಎಂದರು.

ಈ ಕಾರ್ಯಕ್ರಮದಲ್ಲಿ ವೇಣೂರು ವಲಯ ಮೇಲ್ವಿಚಾರಕಿ ಶ್ರೀಮತಿ ಶಾಲಿನಿ ಒಕ್ಕೂಟ ಉಪಾಧ್ಯಕ್ಷರಾದ ಮಲ್ಲಿಕಾ, ಕಾರ್ಯದರ್ಶಿ ಉದಯ್, ಜೊತೆ ಕಾರ್ಯದರ್ಶಿ ಭಾರತಿ, ಉಪಸ್ಥಿತರಿದ್ದರು. ಜ್ಞಾನ ವಿಕಾಸ ಕೇಂದ್ರ ಸದಸ್ಯರು ಉಪಸ್ಥಿತರಿದ್ದರು. ಸ್ವಾಗತವನ್ನು ಶ್ರೀಮತಿ ನಾಗವೇಣಿ, ನಿರೂಪಣೆಯನ್ನು ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರೀಮತಿ ಹರಿಣಿ, ವಂದನಾರ್ಪಣೆಯನ್ನು ಅಂಡಿಂಜೆ ಸೇವಾಪ್ರತಿನಿಧಿ ಶ್ರೀಮತಿ ಭಾಗ್ಯನವೀನ್ ಯವರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ 20 ಬಗೆಯ ಚಟ್ನಿ, ಪತ್ರೊಡೆ, ತಾಜಾ0ಕು ದೋಸೆ, ಪಲ್ಯ, ಸಿಗೆ ಸೊಪ್ಪು ಪಾಲದ್ಯ, ಬಾಳೆ ದಿಂಡು ಪಲ್ಯ, ವಿಟಮಿನ್ ಸೊಪ್ಪು ಪಲ್ಯ, ರಾಗಿ ದೋಸೆ, ಕಷಾಯ ಗಳನ್ನು ಕೇಂದ್ರ ದ ಸದಸ್ಯರು ಮಾಡಿಕೊಂಡು ತಯಾರಿಸಿದ್ದರು.

Leave a Comment

error: Content is protected !!