25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿ

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕುಂಟಾಲಪಳಿಕೆ ನಿವಾಸಿ ಹರೀಶ್ ಆಚಾರ್ಯರ ಶವ ಬಾವಿಯಲ್ಲಿ ಪತ್ತೆ:

ಅರಸಿನಮಕ್ಕಿ : ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಶವ ಬಾವಿಯಲ್ಲಿ ಪತ್ತೆಯಾದ ಪ್ರಕರಣ ಅರಸಿನಮಕ್ಕಿ ಯಲ್ಲಿ ನಡೆದಿದೆ.
ಇಲ್ಲಿಯ ಕುಂಟಾಲಪಳಿಕೆ ನಿವಾಸಿ ಹರೀಶ್ ಆಚಾರ್ಯ (40ವ.)ರವರು ಎರಡು ದಿನದಿಂದ ನಾಪತ್ತೆಯಾಗಿದ್ದು, ಇಂದು (ಜು.30)ಬೆಳಗ್ಗೆ ಅವರ ತಂದೆ ಮನೆಯ ಬಾವಿಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ತಂದೆ ತಾಯಿ ಅಕ್ಕಾಪಕ್ಕದಲ್ಲಿ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದು ಹರೀಶ್ ತಾಯಿ ಮನೆಯಲ್ಲಿ ವಾಸಿಸುತ್ತಿದ್ದರು. ಹರೀಶ್ ಅವಿವಾಹಿತರು. ಹರೀಶ್ ಆಚಾರ್ಯ ಅವರು ಆಕಸ್ಮಿಕವಾಗಿ ‌ಬಾವಿಗೆ ಬಿದ್ದರೊ, ಅಥವಾ ಇನ್ನೇನಾದರೂ ಘಟನೆ ನಡೆದಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಅಕ್ರಮ ಕೋಳಿ ಅಂಕ- ಧರ್ಮಸ್ಥಳ ಪೊಲೀಸರ ದಾಳಿ: ಏಳು ಆರೋಪಿಗಳ ಬಂಧನ

Suddi Udaya

ಬೆಳ್ತಂಗಡಿ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ರೂ.4.75 ಲಕ್ಷ ಸಾಲ ಪಡೆದು ವಂಚನೆ

Suddi Udaya

ಬೆಳ್ತಂಗಡಿ ಹಿಟ್ ಅಂಡ್ ರನ್ ಪ್ರಕರಣ ದಲ್ಲಿ ಬಾಲಕಿಗೆ ಸಾವು ಬೋಲೆರೋ ಚಾಲಕ ಪ್ರಶಾಂತ್ ಗೆ ನ್ಯಾಯಾಂಗ ಬಂಧನ

Suddi Udaya

ಜೈನ ಧರ್ಮಕ್ಕೆ ಮತ್ತು ಜೈನ ಧರ್ಮೀಯರ ಭಾವನೆಗಳಿಗೆ ಅವಮಾನ ದೂರು : ಗಿರೀಶ್ ಮಟ್ಟಣ್ಣನವರ್ ಹಾಗೂ ಕುಡ್ಲ ರಾಂಪೇಜ್ ಮಾಲೀಕರು ಮೇಲೆ ಪ್ರಕರಣ ದಾಖಲು

Suddi Udaya

ಅಪಾಯಕಾರಿಯಾಗಿ ವೀಲಿಂಗ್ ಮಾಡುತ್ತಿದ್ದವನ ಹೆಡೆಮುರಿ ಕಟ್ಟಿದ ಬೆಳ್ತಂಗಡಿ ಸಂಚಾರಿ ಪೊಲೀಸರು

Suddi Udaya

ಹಣ ದ್ವಿಗುಣ ಮಾಡುವುದಾಗಿ ಮೋಸ ಮಾಡಿದ ಪ್ರಕರಣ: ನೊಂದ ಮಹಿಳೆ ವೀಟಾ ಮರೀನಾ ಡಿಸೋಜ ನದಿಗೆ ಹಾರಿ ಆತ್ಮಹತ್ಯೆ

Suddi Udaya
error: Content is protected !!