ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 40 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಸರಕಾರದ ನಿಯಮಾವಳಿಯಂತೆ ನಿವೃತ್ತಿಯನ್ನು ಹೊಂದುತ್ತಿರುವ ಶ್ರೀಮತಿ ಗಿರಿಜಾ ಕುಮಾರಿ ಡಿ. ಎ ಇವರನ್ನು ಸನ್ಮಾನಿಸಿ, ಬೀಳ್ಕೊಡುವ ಕಾರ್ಯಕ್ರಮ ಜು. 31 ರಂದು ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಸ್. ಡಿ ಯಂ ಎಜುಕೇಷನ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ಹರೀಶ್ ಭಾಗವಹಿಸಿ,ನಿವೃತ್ತಿ ಹೊoದುತ್ತಿರುವ ಶಿಕ್ಷಕಿಯನ್ನು ಸನ್ಮಾನಿಸಿ “ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ, ಪ್ರತಿಯೊಬ್ಬರಿಗೂ ಜೀವನದಲ್ಲಿ ಗುರುಗಳಿಲ್ಲದೇ ಏನೂ ಸಾಧ್ಯವಿಲ್ಲ. ಇಂತಹ ಪುಣ್ಯದ ಕೆಲಸದಲ್ಲಿ ಭಾಗವಹಿಸಿರುವುದು ನನಗೆ ತುಂಬಾ ಸಂತೋಷವಾಗಿದೆ. ಈ ಸಂದರ್ಭದಲ್ಲಿ ಅವರ ಬಾಲ್ಯದ ದಿನಗಳನ್ನು, ತಮಗೆ ಕಲಿಸಿದ ಗುರುಗಳನ್ನು ನೆನಪಿಸಿಕೊoಡು ನಿವೃತ್ತಿಯಾಗುತ್ತಿರುವ ಶಿಕ್ಷಕಿಗೆ ಶುಭ ಹಾರೈಸಿದರು.
ನಿವೃತ್ತಿ ಹೊಂದುತ್ತಿರುವ ಶಿಕ್ಷಕಿಯ ಬಗ್ಗೆ ಶ್ರೀಮತಿ ಉಷಾ, ಜೋಸೆಫ್, ಹಾಗೂ ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಮನೋರಮ, ಶ್ರೀಮತಿ ಸತ್ಯವತಿಯವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಇನ್ನೋರ್ವ ಮುಖ್ಯ ಅತಿಥಿ ಹಾಗೂ ಶಾಲಾ ಸಂಚಾಲಕ ಅನಂತ ಪದ್ಮನಾಭ ಭಟ್ ಇವರು ನಿವೃತ್ತ ಶಿಕ್ಷಕಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷರೂ, ಶಾಲಾ ಮುಖ್ಯ ಗುರುಗಳಾದ ಶ್ರೀ ಸುಬ್ರಹ್ಮಣ್ಯ ರಾವ್ ರವರು ನಿವೃತ್ತಿ ಹೊಂದುತ್ತಿರುವ ಶ್ರೀಮತಿ ಗಿರಿಜಾರವರ ಒಡನಾಟ ತುಂಬಾ ಒಳ್ಳೆಯ ರೀತಿಯಿಂದ ಇತ್ತು. ಅವರು ಮಿತಭಾಷಿ. ಕರ್ತವ್ಯ ನಿಷ್ಠೆಗೆ ಹೆಸರಗಿದ್ದಾರೆ. 40 ವರ್ಷಗಳ ಸುದೀರ್ಘ ಸೇವೆಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳ ಬಾಳನ್ನು ಬೆಳಗಿದ್ದಾರೆ. ಇವರ ಮುಂದಿನ ಜೀವನ ಸುಖಕರವಾಗಿರಲಿ. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರವಿರಲಿ ಎಂದು ಶುಭ ಹಾರೈಸಿದರು.
ಸನ್ಮಾನ ಪತ್ರವನ್ನು ಶ್ರೀಮತಿ ಪೂರ್ಣಿಮಾ ವಾಚಿಸಿದರು.
ವೇದಿಕೆಯಲ್ಲಿ ಎಸ್ ಡಿ ಯಂ ಸಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ನಿವೃತ್ತ ಶಿಕ್ಷಕಿರಾದ ಶ್ರೀಮತಿ ಮನೋರಮ, ಶ್ರೀಮತಿ ಸತ್ಯವತಿಯವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಶ್ರೀಮತಿ ಸೀಮಾರವರಿಂದ ಸ್ವಾಗತಿಸಿ, ಶೇಖರ ಗೌಡ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಶ್ರೀಮತಿ ಶ್ರೀಜಾ ನಿರೂಪಿಸಿದರು.