April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಕುವೆಟ್ಟು, ಓಡಿಲ್ನಾಳ ಗ್ರಾಮ ಸಮಿತಿ ಆಶ್ರಯದಲ್ಲಿ ‘ಆಟಿಡೊಂಜಿ ಕೂಟ’

ಬೆಳ್ತಂಗಡಿ: ಆಟಿ ತಿಂಗಳು ಬಹಳ ಕಷ್ಟಗಳ ದಿನಗಳಾಗಿದ್ದು ಜೀವನದ ನಿರ್ವಾಣೆಯೇ ಸವಾಲಾಗಿತ್ತು ಹೀಗಾಗಿ ಜನ ಹಳ್ಳಿಯಲ್ಲೇ ಸಿಗುವ ವಸ್ತುಗಳನ್ನು ಆಹಾರವಾಗಿ ಬಳಸುತ್ತಿದ್ದು ಅದರಲ್ಲಿ ಔಷಧಿಯ ಗುಣಗಳು ಇರುತ್ತಿತ್ತು ಇಂತಹ ವಿಚಾರವನ್ನು ನಮ್ಮ ಮಕ್ಕಳಿಗೆ ಆಟಿದ ಕೂಟ ಕಾರ್ಯಕ್ರಮದಲ್ಲಿ ತಿಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು  ಮಾಜಿ ಶಾಸಕ ಕೆ ವಸಂತ ಬಂಗೇರ ತಿಳಿಸಿದರು.

ಅವರು ಜು.30 ರಂದು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಕುವೆಟ್ಟು, ಓಡಿಲ್ನಾಳ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಆದೇಲು ಚಂದಯ್ಯ ಪೂಜಾರಿಯವರ ಮನೆಯ ವಠಾರದಲ್ಲಿ ಜರಗಿದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.

ಕಾರ್ಯಕ್ರಮವನ್ನು ಹಿರಿಯರಾದ ರುಕ್ಮಯ ಪೂಜಾರಿ ಆದೇಲು ದೀಪ ಬೆಳಗಿಸಿ ಉದ್ಘಾಟಿಸಿದರು.

ಆಟೋಟ ಸ್ಪರ್ಧೆಯನ್ನು ವೆಂಕಮ್ಮ ಚಂದಯ್ಯ ಪೂಜಾರಿ ಚೆನ್ನೆದ ಮಣೆ ಆಟ ಆಡುವ ಮೂಲಕ ಚಾಲನೆ ನೀಡಿದರು.

ಆಟಿದ ಕೂಟ ಆಚರಣೆಯ ಮಹತ್ವದ ಬಗ್ಗೆ ಬೆಳ್ತಂಗಡಿ ಗುರುದೇವ ವಿವಿದ್ದೋದ್ದೇಶದ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಣಾದಿಕಾರಿ ಅಶ್ವಥ್ ಕುಮಾರ್ ಮಾತನಾಡಿ ನಮ್ಮ ಹಿರಿಯರು ಆಟಿಯ ಆಚರಣೆಗಳನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಯುವ ಜನಾಂಗ ಮುಂದುವರಿಸಿದರೆ ಸಂಪ್ರದಾಯ ಬೆಳೆಯಲಿದೆ ಎಂದರು.

ವೇದಿಕೆಯಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕೋಟ್ಟಾನ್ ಸಬರಬೈಲು ಅಧ್ಯಕ್ಷತೆ ವಹಿಸಿದ್ದರು . ಬೆಳ್ತಂಗಡಿ ತಾಲೂಕು ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಎಲ್ದಡ್ಕ, ಕುವೆಟ್ಟು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಅನೂಪ್ ಬಂಗೇರ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಜಯಂತಿ ಜಾಲಿಯರಡ್ಡ, ರವಿ ಪೂಜಾರಿ ಆದೇಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಸತೀಶ್ ಬಂಗೇರ ಕುವೆಟ್ಟು ಪ್ರಧಾನ ಕಾರ್ಯದರ್ಶಿ ಆನಂದ ಕೋಟ್ಯಾನ್ ಗುರುವಾಯನಕೆರೆ, ಧರ್ಣಪ್ಪ ಪೂಜಾರಿ, ಲಲಿತಾ ಆದೇಲು ಉಪಸ್ಥಿತರಿದ್ದರು.

ಶಾಂತಾ ಜೆ ಬಂಗೇರ, ಧನಲಕ್ಷ್ಮಿ ಚಂದ್ರಶೇಖರ್ ಸಬರಬೈಲು , ಹರೀಶ್ ಕೋಟ್ಟಾನ್ ಮದ್ದಡ್ಕ ಇವರ ನೇತೃತ್ವದಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಗೌರವಿಸಲಾಯಿತು. ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಜರಗಿತು.

ಸಂಘದ ಸಲಹೆಗಾರರು. ಮಾಜಿ ಅಧ್ಯಕ್ಷರು ಪಧಾದಿಕಾರಿಗಳು ಕಾರ್ಯಕ್ರಮದ ಯಶಶ್ವಿಗೆ ಸಹಕರಿಸಿದರು. ಆನಂದ ಕೋಟ್ಯಾನ್ ಸ್ವಾಗತಿಸಿ, ನಿತೇಶ್ ಅದೇಲು ಮತ್ತು ಉಮೇಶ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು. ಪ್ರ‌ಜ್ಙಾ ಓಡಿಲ್ನಾಳ ಧನ್ಯವಾದವಿತ್ತರು ಸುಮಾರು 50 ಬಗೆಯ ವಿವಿಧ ಖಾದ್ಯಗಳಿಂದ ಕೂಡಿದ ಭೋಜನ ಸವಿದರು.

Related posts

ಉರುವಾಲು ಹಲೇಜಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಹಪ್ಪಳ ಸಂಡಿಗೆ, ಉಪ್ಪಿನ ಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ವಿಧಾನ ಸಭಾ ಚುನಾವಣೆ : ಸಿ.ಆರ್ . ಪಿ.ಎಫ್ ಯೋಧರು ಹಾಗೂ ಪೊಲೀಸರಿಂದ ಕೊಕ್ಕಡ, ಮಡಂತ್ಯಾರು, ಪುಂಜಾಲಕಟ್ಟೆ, ಬಸವನಗುಡಿಗಳಲ್ಲಿ ಪಥಸಂಚಲನ

Suddi Udaya

ಅಳದಂಗಡಿ ಅರಮನೆಗೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಭೇಟಿ

Suddi Udaya

ಧರ್ಮಸ್ಥಳ ಗ್ರಾಮವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಘೋಷಣೆ: ರಾಜ್ಯದ 5 ನಗರದಲ್ಲಿ, ಸುಮಾರು 6078 ಗ್ರಾ.ಪಂ ಗಳಲ್ಲಿ ಮೊದಲ ಗ್ರಾಮವಾಗಿ ಧರ್ಮಸ್ಥಳ ಗ್ರಾಮ ಆಯ್ಕೆ

Suddi Udaya

ಮುಂಡಾಜೆ ಕಾಯರ್ತೋಡಿ- ಕಲ್ಲಾರ್ಯ ಸಾರ್ವಜನಿಕ ನಾಗಬನದಲ್ಲಿ ಕ್ಷೀರಾಭಿಷೇಕ, ಮಹಾಪೂಜೆ

Suddi Udaya
error: Content is protected !!