ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ನಗಬೇಕು ಆಗಾಗ ಬದುಕಿನೊಳಗೆ’ ತರಬೇತಿ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ನಗಬೇಕು ಆಗಾಗ ಬದುಕಿನೊಳಗೆ ಎಂಬ ವಿಶೇಷವಾದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ, ಕಲಾರತ್ನ ವಿಶ್ವನಾಥ ಶೆಟ್ಟಿ ಇವರು ತರಬೇತಿ ಕಾರ್ಯಕ್ರಮವನ್ನು ಸಂಗೀತ ಸಾಹಿತ್ಯದ ಮೂಲಕ ಹಲವು ನಿದರ್ಶನಗಳೊಂದಿಗೆ ನಡೆಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂತೋಷ್ ಸಲ್ಡಾನ ಅವರು ಮಾತನಾಡುತ್ತಾ ನಿರಂತರ ಕಾರ್ಯ ಒತ್ತಡದಿಂದಾಗಿ ನಮ್ಮ ಬದುಕಿನಲ್ಲಿ ನಗು ಮಾಯವಾಗುತ್ತಿದೆ ಮತ್ತು ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ತರಬೇತಿಗಳು ವಿದ್ಯಾರ್ಥಿಗಳ ಬದುಕಿನಲ್ಲಿ ಪುನಶ್ಚೇತನವನ್ನು ಉಂಟುಮಾಡುತ್ತದೆ ಎಂದು ಹೇಳಿದರು.
ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಗಾಯನ ತಮ್ಮ ಅನಿಸಿಕೆಯನ್ನು ತಿಳಿಸಿ, ಪ್ರಶಿಕ್ಷಣಾರ್ಥಿ ಸಾಯಿಧೃತಿ ಹಿನ್ನಲೆ ಸಂಗೀತ ಕೀಬೋರ್ಡ್ ನುಡಿಸಿ, ಸುಬ್ರಹ್ಮಣ್ಯ ರವರು ತಾಂತ್ರಿಕ ಸಹಾಯಕರಾಗಿ ಸಹಕರಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕಿ ವೀಕ್ಷಾದೀಪ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಬಿ.ಎಡ್. ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದ ಮತ್ತು ಪ್ರಥಮ ಹಾಗೂ ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಾದ ಶ್ವೇತಾ ಸ್ವಾಗತಿಸಿ, ಸ್ವಾತಿ ವಂದಿಸಿ, ವೈಷ್ಣವಿ ಕಾಯಕ್ರಮವನ್ನು ನಿರೂಪಿಸಿದರು.

Related posts

ಗುರುವಾಯನಕೆರೆ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುವ ಬಳಂಜದ ಮೊಬೈಲ್ ಟವರ್: ಬಳಂಜ- ನಾಲ್ಕೂರಿನಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ಗ್ರಾಹಕರು

Suddi Udaya

ಜ.22: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ

Suddi Udaya

ಉಜಿರೆ : ಕುಂಜರ್ಪದಲ್ಲಿ 4ನೇ ವರ್ಷದ ದುರ್ಗಾಪೂಜೆ

Suddi Udaya

ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ವಿಶೇಷ ಕಾರ್ಯಕಾರಣಿ ಸಭೆಗೆ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಭೇಟಿ

Suddi Udaya

ಎಕ್ಸೆಲ್ ಪರ್ಬದ ‘ಅಕ್ಷರೋತ್ಸವ’ ಕವಿಗೋಷ್ಠಿಯಲ್ಲಿ ಪವಿತ್ರಾದಿನೇಶ್ ರವರ “ಗೋಮಾತೆ” ಕವನಕ್ಕೆ ಅಭಿನಂದನಾ ಗೌರವ

Suddi Udaya
error: Content is protected !!