22.2 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ: ವರದಿ ಸಾಲಿನಲ್ಲಿ 4,13,15,569 ವ್ಯವಹಾರ,13,49,980 ನಿವ್ವಳ ಲಾಭ. ಸದಸ್ಯರಿಗೆ 65% ಬೋನಸ್ ಹಾಗೂ 25% ಡಿವಿಡೆಂಡ್ ಘೋಷಣೆ: ದ್ವೀತಿಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಅಳದಂಗಡಿ: ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸಭಾ ಭವನದಲ್ಲಿ ಜು.31ರಂದು ನಡೆಯಿತು.

ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಣೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರುವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕೃಷ್ಣರಾಜ ಭಟ್, ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸುಚಿತ್ರಾ, ಪಶು ವೈದ್ಯಾಧಿಕಾರಿ ಡಾ.ಗಣಪತಿ ರಾವ್,ಪೂಜಾ, ನಿರ್ದೇಶಕರಾದ ಶಿವ ಭಟ್, ಶಶಿಧರ ಶೆಟ್ಟಿ, ಪ್ರಶಾಂತ್ ವೇಗಸ್, ಆನಂದ ಮಡಿವಾಳ, ಗಣೇಶ್ ದೇವಾಡಿಗ, ಸುರೇಶ್ ಕುಲಾಲ್, ಗಿರಿಜಾ, ಪುಷ್ಪಾವತಿ, ಲಲಿತಾ, ಸುನಂದ ಉಪಸ್ಥಿತರಿದ್ದರು. ನಿರ್ದೇಶಕ ಶಿವ ಭಟ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಫ್ರೇಡ್ ಫೆರ್ನಾಂಡೀಸ್ ವರದಿ ಸಾಲಿನ ಲೆಕ್ಕಪತ್ರ ಮಂಡಿಸಿದರು. ಸಂಘದ ಸದಸ್ಯರಿಗೆ 65% ಬೋನಸ್ ಹಾಗೂ 25% ಡಿವಿಡೆಂಡ್ ಘೋಷಣೆ ಮಾಡಲಾಯಿತು‌.ದ್ವೀತಿಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ ಸದಸ್ಯ ಲಾರೆನ್ಸ್ ಪೀರೆರಾ ಅವರ ಮೂರು ದನಗಳು‌ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವೀಗಿಡಾಗಿದ್ದು ಅವರಿಗೆ 40 ಸಾವಿರ ಮೊತ್ತದ ಚೆಕ್ ವಿತರಿಸಲಾಯಿತು.

Related posts

ನಾಲ್ಕೂರು :ಇನಾಸ್ ಪಿಂಟೋ ನಿಧನ

Suddi Udaya

ನಡ ಗ್ರಾ.ಪಂ ಸದಸ್ಯೆಯಿಂದ ರಸ್ತೆ ದುರಸ್ತಿ ಕಾರ್ಯ

Suddi Udaya

ಎಸ್‌ಡಿಎಂ ಪ.ಪೂ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟ

Suddi Udaya

ರೀಜೆಂಟ್ ಮಳಿಗೆ ಅಳದಂಗಡಿಯಿಂದ- ಗರ್ಡಾಡಿ ಹೊನ್ನಕಟ್ಟೆಗೆ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಜಿಲ್ಲಾ ಮಟ್ಟದ ಖೋ-ಖೋ ಸ್ಪರ್ಧೆ: ನಡ ಸ. ಪ.ಪೂ. ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡ ಚತುರ್ಥ ಸ್ಥಾನ

Suddi Udaya

ಸಿಯೋನ್ ಆಶ್ರಮದಿಂದ ಪುಸ್ತಕ ಮತ್ತು ಬ್ಯಾಗ್ ವಿತರಣೆ

Suddi Udaya
error: Content is protected !!