April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪುತ್ತೂರುಪ್ರಮುಖ ಸುದ್ದಿ

ರಾಷ್ಟ್ರೀಯ ಮಟ್ಟದ ಕರಕುಶಲ ಸ್ಪರ್ಧೆ: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಶ್ರೇಯಾ ಕೆ ಎಚ್ ಗೆ ಪ್ರಥಮ ಸ್ಥಾನ

ನವದೆಹಲಿಯ ನವ ಶ್ರೀ ಕಲೆ ಮತ್ತು ಸಂಸ್ಕೃತಿ ಸಂಸ್ಥೆ ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ಮಟ್ಟದ ಕರಕುಶಲ ಸ್ಪರ್ಧೆ’ ಶಿಲ್ಪ್ ಆಕಾರ್’ ನಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಥಮ ಎಂ.ಎಸ್ಸಿ ಅಧ್ಯಯನ ನಡೆಸುತ್ತಿರುವ ಶ್ರೇಯಾ ಕೆ ಎಚ್ ಗೆ ಪ್ರಥಮ ಸ್ಥಾನ ದೊರೆತಿದೆ.

ಇವರು ಮಂಗಳೂರು ಕಾಳಿಕಾಂಭ ವಿನಾಯಕ ದೇವಸ್ಥಾನದ ಕೆಯ್ಯೂರು ಕೂಡುವಳಿಕೆ ಮೊಕ್ತೇಸರರಾದ ಕೆ ಹರಿಶ್ಚಂದ್ರ ಆಚಾರ್ಯ ಕೋಡಂಬು ಹಾಗೂ ಶುಭ ದಂಪತಿಯ ಪುತ್ರಿಯಗಿದ್ದಾರೆ.

‘ ಶಿಲ್ಪ್ ಆಕಾರ್’ ಕಲೆ ಮತ್ತು ಕರಕುಶಲತೆಗೆ ಸಂಭಂದಿಸಿದ ರಾಷ್ಟ್ರ ಮಟ್ಟದ ಸ್ಪರ್ಧೆಯಾಗಿದೆ . ನವದೆಹಲಿಯ ಆರ್ಟಿಜೆನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ರಾಷ್ಟ ಮಟ್ಟದ ಡ್ರಾಯಿಂಗ್, ಪೈಂಟಿಂಗ್, ಆರ್ಟ್ ಮತ್ತು ಕ್ರಾಫ್ಟ್’ ಪ್ರದರ್ಶನದಲ್ಲಿ ಇವರ ಕರಕುಶಲತೆಯನ್ನು ಪ್ರದರ್ಶಿಸಲಾಯಿತು.,

‘ಆರ್ಟಿಜೆನ್ ಆರ್ಟ್’ ಗ್ಯಾಲರಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನು ವಿತರಿಸಲಾಯಿತು.

Related posts

ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ: ಕೊಕ್ಕಡ ವಿನು ಸ್ಕೂಲ್ ಆಫ್ ಆರ್ಟ್ಸ್ ನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಸ್ಟಾನ (ರಿ) ಪ್ರಾಯೋಜಿತ ಬಟ್ಟೆಯ ಕಸೂತಿ ಆರಿ ಕೌಶಲ್ಯ ಸ್ವ ಉದ್ಯೋಗ ತರಬೇತಿಯ ಸಮಾರೋಪ ಕಾರ್ಯಕ್ರಮ

Suddi Udaya

ದಿ‌.ಎನ್ ಪದ್ಮನಾಭ ಮಾಣಿಂಜರಿಗೆ ಶ್ರೀ ಗುರುದೇವ ಸಹಕಾರಿ ಸಂಘದಿಂದ ನುಡಿನಮನ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ತಂಡದಿಂದ ಕಮ್ಮಟ – ಬೀದಿ ನಾಟಕ ಪ್ರದರ್ಶನ

Suddi Udaya

ಬೆಳ್ತಂಗಡಿ: ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Suddi Udaya

ಕಾಪಿನಡ್ಕದಲ್ಲಿ ಬೈಕ್ ಅಪಘಾತ, ಸವಾರಿಬ್ಬರಿಗೆ ಗಾಯ: ವೇಣೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!