ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಬಂಗಾಡಿ ಪರಿಸರದಲ್ಲಿ ನೆಟ್‌ವರ್ಕ್ ಸಮಸ್ಯೆ: ಬ್ಯಾಂಕ್ ವ್ಯವಹಾರಕ್ಕಾಗಿ ಗ್ರಾಹಕರ ಪರದಾಟ

ಬಂಗಾಡಿ: ಬಂಗಾಡಿ ಪರಿಸರದಲ್ಲಿ ನೆಟ್‌ವರ್ಕ್ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಇಲ್ಲಿಯ ಕೆನರಾ ಬ್ಯಾಂಕ್‌ನಲ್ಲಿ ನಿತ್ಯ ವ್ಯವಹಾರಕ್ಕೆ ಗ್ರಾಹಕರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ಬಂಗಾಡಿ ಪರಿಸರದಲ್ಲಿ ಬಹಳಷ್ಟು ನೆಟ್‌ವರ್ಕ್ ಸಮಸ್ಯೆಯಿದೆ. ಇದರಿಂದಾಗಿ ಸರ್ವರ್ ಕೈಗೊಡುತ್ತಿದ್ದು, ಬ್ಯಾಂಕ್‌ನಲ್ಲಿ ಸಮರ್ಪಕ ಕಾರ್ಯನಿರ್ವಹಣೆಗೆ ಕಷ್ಟವಾಗಿದೆ. ಇದರಿಂದಾಗಿ ಗ್ರಾಹಕರು ತಮ್ಮ ಬ್ಯಾಂಕ್‌ನ ಒಂದು ಕಾರ್ಯಕ್ಕೆ ಮೂರು-ನಾಲ್ಕು ದಿನಗಳಿಂದ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಬೆಳಿಗ್ಗೆಯೇ ಬ್ಯಾಂಕ್‌ನಲ್ಲಿ ಸರತಿ ಸಾಲು ಕಂಡು ಬರುತ್ತಿದೆ. ಸರ್ವರ್ ಕೈಗೊಡುವುದರಿಂದ ಬ್ಯಾಂಕಿನ ಅಧಿಕಾರಿಗಳು ಏನೂ ಮಾಡಲು ಸಾಧ್ಯವಾಗದೆ ಕೊನೆಗೆ ಬ್ಯಾಂಕ್‌ನ ಎದುರು ‘ನೆಟ್‌ವರ್ಕ್ ಇಲ್ಲ’ ಎಂಬ ಬೋರ್ಡ್‌ನ್ನು ನೇತಾಕಿದ್ದಾರೆ. ಆದರೆ ಸರ್ವರ್ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲದ ಗ್ರಾಮೀಣ ಪ್ರದೇಶದ ಜನರು ಬ್ಯಾಂಕ್‌ನ ಸಿಬ್ಬಂದಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಬ್ಯಾಂಕ್‌ನ ಉನ್ನತಾಧಿಕಾರಿಗಳು ಗಮನ ಹರಿಸಿ, ಈ ಸಮಸ್ಯೆಯನ್ನು ನಿವಾರಿಸುವಂತೆ ಗ್ರಾಹಕರ ಪರವಾಗಿ ಶೌಕತ್ ಆಲಿ ಅವರು ಆಗ್ರಹಿಸಿದ್ದಾರೆ.

Related posts

ಬರೆಂಗಾಯ ಶ್ರೀ ವನದುರ್ಗಾ ಮಾತೃ ಮಂಡಳಿ ವತಿಯಿಂದ ವರಮಹಾಲಕ್ಷ್ಮಿ ಪೂಜೆ

Suddi Udaya

ಮಡಂತ್ಯಾರು ಉಪ್ಪಿನಂಗಡಿ ರಸ್ತೆಯ ಮಾರಿಗುಡಿ ಸಮೀಪ ಅಪಾಯಕಾರಿ ಮರ: ಸಂಬಂಧಪಟ್ಟ ಇಲಾಖೆಯವರು ತೆರವುಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಶ್ರೀ ದೈವ ಕೊಡಮಣಿತ್ತಾಯ,ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತುಶ್ರೀ ಬ್ರಹ್ಮ ಬೈದರ್ಕಳ ಗರಡಿ ಪೊಸರಡ್ಕ- ಬ್ರಹ್ಮಕುಂಭಾಭಿಷೇಕ ಆಮಂತ್ರಣ ಪತ್ರಿಕೆ ವಿತರಣೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ: 18216 ಮತಗಳ ಅಂತರದಿಂದ ಹರೀಶ್ ಪೂಂಜ ಪ್ರಚಂಡ ಗೆಲುವು: ರಕ್ಷಿತ್ ಶಿವರಾಂಗೆ ಸೋಲು

Suddi Udaya

ನಾಳೆಯಿಂದ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಮಂಡ್ಯ ಜಿಲ್ಲೆಯ ಆರತಿಪುರದ ಪೂಜ್ಯ ಸಿದ್ಧಾಂತಕೀರ್ತಿ ಸ್ವಾಮೀಜಿ ಭಜನಾ ಕಮ್ಮಟ ಉದ್ಘಾಟನೆ

Suddi Udaya

ವಿಶೇಷ ಚೇತನ ಮಕ್ಕಳಿಗೆ ನಲ್ಮೆ, ಸಂಯಮದಿಂದ ವಿಶೇಷ ಭವಿಷ್ಯ ರೂಪಿಸೋಣ: ಡಿ. ವೀರೇಂದ್ರ ಹೆಗ್ಗಡೆ

Suddi Udaya
error: Content is protected !!