27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಳದಂಗಡಿ ವಲಯದಿಂದ ಉಂಬುಜೆ ಕೊರಗಪ್ಪರವರ ಶಿಥಿಲಗೊಂಡ ಮನೆಯ ಛಾವಣಿಯ ತೆರವು ಕಾರ್ಯಾಚರಣೆ


ಅಳದಂಗಡಿ ವಲಯ ವ್ಯಾಪ್ತಿಯ ನಾವರ ಗ್ರಾಮದ ಉಂಬುಜೆ ಎಂಬಲ್ಲಿ ಕೊರಗಪ್ಪ ಮಲೆಕುಡಿಯ ದಂಪತಿಯ ಮನೆಯ ಮೇಲ್ಚಾವಣಿಯು ತೀರ ದುಸ್ಥಿತಿಯಲ್ಲಿದ್ದು. ಯಾವುದೇ ಸಮಯದಲ್ಲಿ ಬಿದ್ದು ಹೋಗುವ ಪರಿಸ್ಥಿತಿಯಲ್ಲಿತ್ತು. ದಂಪತಿಗಳಿಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು ಸ್ವತಂತ್ರವಾಗಿ ಯಾವುದೇ ಕೆಲಸಗಳನ್ನು ನೆರವೇರಿಸುವಲ್ಲಿ ಅಸಹಾಯಕರಾಗಿದ್ದರು. ದಂಪತಿಗಳಿಬ್ಬರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಪಕ್ಕದ ಮನೆಯವರು ಕಳುಹಿಸಿದ್ದು ಮನೆ ಖಾಲಿ ಆಗಿತ್ತು. ಇದೇ ಸಂದರ್ಭದಲ್ಲಿ ಮನೆಯ ದುರಸ್ತಿ ಕಾರ್ಯ ಮಾಡುವುದು ಒಳಿತೆಂದು ಮನಗಂಡು ವೃದ್ಧರ ಆರೈಕೆಯನ್ನು ಮಾಡುತ್ತಿದ್ದ ಅವರ ಸಹೋದರ ಸಂಬಂಧಿಗಳು. ಮನೆಯ ಛಾವಣಿ ತೆರವುಗೊಳಿಸುವಲ್ಲಿ ವಿಪತ್ತು ನಿರ್ವಹಣಾ ಸ್ವಯಂ ಸೇವಕರ ನೆರವನ್ನು ಕೋರಿ ಮನವಿಯನ್ನು ಸಲ್ಲಿಸಿದ್ದರು.
ವಿಷಯವನ್ನು ವಲಯ ಮೇಲ್ವಿಚಾರಕರು ಹಾಗೂ ಯೋಜನಾಧಿಕಾರಿಗಳ ಗಮನಕ್ಕೆ ತಂದು ಮೇಲ್ಚಾವಣಿಯ ತೆರವು ಕಾರ್ಯವನ್ನು ನಿರ್ವಹಿಸಿದರು.

ಈ ಸಂದರ್ಭದಲ್ಲಿ ಘಟಕ ಪ್ರತಿನಿಧಿ ರಾಜೇಶ್ ಹಾಗೂ ಶ್ರೀಮತಿ ಶಕುಂತಲಾ, ಸ್ವಯಂ ಸೇವಕರಾದ ಪ್ರಕಾಶ್ ಕೊಲ್ಲಂಗೆ, ಶಿವಾನಂದ, ಶ್ರೀಕಾಂತ್, ಸರಸ್ವತಿ, ಹೇಮಾವತಿ, ಅಮಿತಾ ಹಾಗೂ ನಳಿನಿ ಸ್ವಯಂಸೇವಕರು ಭಾಗವಹಿಸಿದರು.

ಸ್ವಯಂ ಸೇವಕರೊಂದಿಗೆ ಈ ಕಾರ್ಯದಲ್ಲಿ ಸೋದರ ಸಂಬಂಧಿಗಳು ಸಹಕರಿಸಿದರು. ಸೇವಾ ಪ್ರತಿನಿಧಿ ಕುಮಾರಿ ಸುಲೋಚನಾರವರು ಸ್ಥಳದಲ್ಲಿ ಉಪಸ್ಥಿತರಿದ್ದರು.

Related posts

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸಾಧನಾ ಪ್ರಶಸ್ತಿ

Suddi Udaya

ಧರ್ಮಸ್ಥಳ : ಮಹಿಳೆಯ ರೂ. 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಇರಿಸಿದ್ದ ಪರ್ಸ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ: ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಭೇಟಿ,

Suddi Udaya

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೈದ್ಯರ ದಿನಾಚರಣೆ

Suddi Udaya

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಕುಸಿದು ಬಿದ್ದು ವ್ಯಕ್ತಿ ಸಾವು

Suddi Udaya

ವೇಣೂರು ಶ್ರೀ ಧ. ಮಂ. ಐಟಿಐಯ ತರಬೇತಿ ಉದ್ಘಾಟನೆ

Suddi Udaya
error: Content is protected !!