37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದ ಸ್ಥಾಪನೆ ದಿನಾಚರಣೆ

ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಜು. 31 ರಂದು ಬೆಳ್ತಂಗಡಿ ಬಿಎಂಎಸ್ ಕಾರ್ಯಾಲಯದಲ್ಲಿ ಬಿಎಂಎಸ್ ಸ್ಥಾಪನೆ ದಿನಾಚರಣೆ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಂಎಸ್ ತಾಲೂಕು ಸಮಿತಿಯ ಅಧ್ಯಕ್ಷರಾದ ಉದಯ್ ಬಿಕೆ ಬಂದಾರು ಇವರ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಸ್ಥಾಪನಾ ದಿನಾಚರಣೆಯ ಬಗ್ಗೆ ಬಿಎಂಎಸ್ ಜಿಲ್ಲೆಯ ಅಧ್ಯಕ್ಷ ಅನಿಲ್ ಕುಮಾರ್ ಯು ಮಾತನಾಡಿ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಕಾರ್ಮಿಕ ಬಂಧುಗಳು ಕೈಜೋಡಿಸಿ ಎಂದು ಮನವಿ ಮಾಡಿದರು.

ತಾಲೂಕು ಸೇವಾ ಪ್ರಮುಖವಾದ ವಿಜಯ್ ಅರಳಿ ಸ್ಥಾಪನೆ ದಿನಾಚರಣೆಯ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ತಾಲೂಕು ಬೀಡಿ ಮಜ್ದೂರ್ ಸಂಘದ ಸಹ ಸಂಚಾಲಕರಾದ ಶಶಿಕಲಾ ಕೊಯ್ಯೂರು , ತಾಲೂಕು ರಿಕ್ಷಾ ಯೂನಿಯನ್ ನ ಪ್ರಮುಖರು, ತಾಲೂಕಿನ ಬಿಎಂಎಸ್ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಮಿಕ ಬಂಧುಗಳು ಉಪಸ್ಥಿತರಿದ್ದರು.

ತಾಲೂಕು ಸಂಯೋಜಕರಾದ ಶಾಂತಪ್ಪ ಕಾರ್ಯಕ್ರಮ ನಿರೂಪಿಸಿ , ಸ್ವಾಗತಿಸಿದರು. ಬಿಎಂಎಸ್‌ ಕಟ್ಟಡ ಕಾರ್ಮಿಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಕಲ್ಮಂಜ ಧನ್ಯವಾದವಿತ್ತರು.

Related posts

ತಾಲೂಕು ಮಟ್ಟದ ಸ್ಪರ್ಧೆ: ಉಜಿರೆ ಎಸ್ ಡಿ ಎಂ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಜೆಸಿಐ ಬೆಳ್ತಂಗಡಿಯಲ್ಲಿ ಶ್ರಾವಣ ತರಬೇತಿ ಸಪ್ತಾಹದ ಸಮಾರೋಪ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಜಮ್ಮೀಯತುಲ್‌ ಫಲಾಹ್ ಘಟಕದ ವಾರ್ಷಿಕ ಮಹಾಸಭೆ

Suddi Udaya

ಕುಕ್ಕೇಡಿ ಗ್ರಾ.ಪಂ. ನಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ

Suddi Udaya

ಬೆಳ್ತಂಗಡಿ: ತೋಟಗಾರಿಕೆ ಇಲಾಖೆಯಲ್ಲಿ ಮೆಗಾ ಡ್ರೈವ್ ಕಾರ್ಯಕ್ರಮ

Suddi Udaya

ಡಿ.ಕೆ.ಆರ್. ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ, ಕ್ಯಾನ್ಸರ್ ಜನಜಾಗೃತಿ ಅಭಿಯಾನ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya
error: Content is protected !!