September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ತೋಟಗಾರಿಕೆ ಇಲಾಖೆಯಲ್ಲಿ ಮೆಗಾ ಡ್ರೈವ್ ಕಾರ್ಯಕ್ರಮ

ಬೆಳ್ತಂಗಡಿ : ಜಿಲ್ಲಾ ಪಂಚಾಯತ್ ಬೆಳ್ತಂಗಡಿ ತೋಟಗಾರಿಕೆ ಇಲಾಖೆ , 3 ಎಫ್ ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಹಾಗೂ ಶ್ರೀ ಭಾರತಿ ಎಣ್ಣೆ ತಾಳೆ ಬಾಳೆಗಾರರ ಸಹಕಾರಿ ಸಂಘ ಇದರ ಸಹಭಾಗಿತ್ವದಲ್ಲಿ ಕೃಷಿ ಸಖಿಯರಿಗೆ ಹಾಗೂ ಪ್ರಗತಿಪರ ರೈತರಿಗೆ ಎಣ್ಣೆ ತಾಳೆ ಬೆಳೆ ಬೇಸಾಯ ಹಾಗೂ ಇಲಾಖಾ ಯೋಜನೆಗಳ ಮಾಹಿತಿಯ ಮೆಗಾ ಡ್ರೈವ್ ಕಾರ್ಯಕ್ರಮ ಜೂ.19 ರಂದು ಬೆಳ್ತಂಗಡಿ ತೋಟಗಾರಿಕೆ ಇಲಾಖೆಯಲ್ಲಿ ನಡೆಯಿತು.

ಅಡಿಕೆ ಹಳದಿ ರೋಗ, ದರ ಕುಸಿತ , ಹವಾಮಾನ ವೈಪರೀತ್ಯದಿಂದ ಕೃಷಿಕರು ಹೈರಾಣಾದ ಬಳಿಕ ಪರ್ಯಾಯ ಬೆಳೆಯಾಗಿ ಕಾಫಿ ಕಾಳುಮೆಣಸು ಇನ್ನಿತರ ಬೆಳೆಗಳಂತೆ ತಾಳೆ ಬೆಳೆ ಪರಿಚಯವಾಗಿದ್ದು ತಾಳೆ ಬೇಸಾಯಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಇತ್ತಿಚೀನ ದಿನಗಳಲ್ಲಿ ತಾಳೆ ಎಣ್ಣೆ ಬೆಲೆ ಏರಿಕೆಯಾಗಿ ಬೆಳೆಗಾರರಿಗೆ ಲಾಭದಾಯಕವಾಗಿದೆ. ಇದೀಗ ಹೊಸ ತಳಿ ತಾಳೆ ಬೆಳೆಯಲ್ಲಿ ಪರಿಚಯಿಸಲಾಗಿದೆ.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಎಸ್. ಚಂದ್ರಶೇಖರ್, ಎನ್.ಆರ್.ಎಲ್.ಎಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ, ಬೆಳ್ತಂಗಡಿ ತಾಳೆ ಬಾಳೆಗಾರರ ಸಂಘದ ಅಧ್ಯಕ್ಷ , ಶ್ರೀ ಭಾರತಿ ಎಣ್ಣೆ ತಾಳೆ ಬೆಳೆಗಾರರ ಸಹಕಾರಿ ಸಂಘದ ನಿರ್ದೇಶಕ ಶ್ರೀ ಕೃಷ್ಣ ಭಟ್, 3ಎಫ್ ಆಯಿಲ್ ಪಾಮ್ ಕಂಪನಿಯ ಉಭಯ ಜಿಲ್ಲೆಗಳ ವ್ಯವಸ್ಥಾಪಕ ಕೃಷ್ಣ, ಪ್ರಗತಿಪರ ತಾಳೆ ಬಾಳೆಗಾರರ ಸುಂದರ್ ಶೆಟ್ಟಿ ಸುಲ್ಕೇರಿ, ಹೋಬಳಿ ತೋಟಗಾರಿಕಾ ಅಧಿಕಾರಿಗಳಾದ ಮಹಾವೀರ ಶೇಬಣ್ಣನವರ, ಮಂಜುನಾಥ್ ಬಿರಾದಾರ, ಭೀಮರಾಯ ಸೊಡ್ಡಗಿ, ಸಂಜೀವಿನಿ ವಲಯ ಮೇಲ್ವಿಚಾರಕರಾದ ಜಯಾನಂದ ಹಾಗೂ ವೀಣಾಶ್ರೀ, 3ಎಫ್ ಆಯಿಲ್ ಪಾಮ್ ಕಂಪನಿಯ ರಾಬರ್ಟ್ ಡಿಸೋಜ, ರೈತರು ಮತ್ತು ಕೃಷಿ ಸಖಿಯರು ಭಾಗವಹಿಸಿದ್ದರು.

Related posts

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದ.ಕ ಜಿಲ್ಲಾ ಘಟಕ ಪುನರ್ ಸಂಘಟನೆ: ಸಮಾಲೋಚನಾ ಸಭೆ

Suddi Udaya

ನಾವೂರು ಗ್ರಾ.ಪಂ. ಅಧ್ಯಕ್ಷರಾಗಿ ಸುನಂದಾ, ಉಪಾಧ್ಯಕ್ಷರಾಗಿ ಪ್ರಿಯಾ ಲಕ್ಷ್ಮಣ್ ಆಯ್ಕೆ

Suddi Udaya

ಹಳೆಕೋಟೆ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಹೆಚ್. ಪದ್ಮ ಗೌಡ, ಉಪಾಧ್ಯಕ್ಷರಾಗಿ ಕುಶಾಲಪ್ಪ ಗೌಡ ಪೂವಾಜೆ

Suddi Udaya

ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ಶಿಬಾಜೆ : ಭಂಡಿಹೊಳೆ ಶ್ರೀಹರಿ ದಾಮಲೆ ನಿಧನ

Suddi Udaya

ವಿ‌ ಹರೀಶ್ ನೆರಿಯ ರವರಿಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್” ಪ್ರದಾನ

Suddi Udaya
error: Content is protected !!