ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಸ್ವಾತಿ ಫಡಕೆಯವರಿಗೆ ಡಾಕ್ಟರೇಟ್ ಪದವಿ

Suddi Udaya

ಉಜಿರೆ: ಉಜಿರೆ ಎಸ್ ಡಿ ಎಮ್ ತಾಂತ್ರಿಕ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಫಡಕೆ ಎನ್.ರವರು ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ, ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.


ಇವರು ಕೆಂಜಾರಿನ ಶ್ರೀ ದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕಿ ಡಾ.ವಿಜಯಾ ಡಿ. ಪಿ. ಆಳ್ವ ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ ’ಎ ಸ್ಟಡಿ ಒನ್ ದ ಕೊರೋಶನ್ ಇನ್ಹಿಬಿಷನ್ ಆಫ್ ಇಂಡಸ್ಟ್ರಿಯಲಿ ಇಂಪಾರ್ಟೆಂಟ್ ಸ್ಟೀಲ್ ಬೈ ಸಿಂಥೆಟಿಕ್ ಹೆಟೆರೋಸೈಕ್ಲಿಕ್ ಕೌಂಪಡ್ಸ್ ’ಎನ್ನುವ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ, ಡಾಕ್ಟರೇಟ್ ಪದವಿ ಪಡೆದಿದ್ದು, ವಿಶ್ವವಿದ್ಯಾನಿಲಯದ 23 ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ ಉಜಿರೆಯ ರಸಾಯನಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಳೆದ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಇವರು ಮುಂಡಾಜೆ ಗ್ರಾಮದ ಮಲ್ಲಿಕಟ್ಟೆಯ ವೀಣಾ ಮತ್ತು ನಾಗರಾಜ ಫಡ್ಕೆಯವರ ಪುತ್ರಿ, ಗಣೇಶ ಶೆಂಡ್ಯೆಯವರ ಪತ್ನಿ ಹಾಗೂ ಭಂಡಿಹೊಳೆಯ ಸುವರ್ಣಲತಾ ವಿಷ್ಣು ಶೆಂಡ್ಯೆಯವರ ಕಿರಿಯ ಸೊಸೆ.

Leave a Comment

error: Content is protected !!