ಬೆಳ್ತಂಗಡಿ: ಪ್ರತಿಯೊಂದು ಕುಟುಂಬದ ಮಕ್ಕಳು ಪ್ರತಿಭಾವಂತರಾಗಿದ್ದು ಅವರಿಗೆ ಭವಿಷ್ಯದ ಬಗ್ಗೆ ಅರಿವಿನ ಬಗ್ಗೆ ಬಾಲ್ಯದಲ್ಲೆ ಮಾಹಿತಿ ನೀಡಿದರೆ ಮುಂದೆ ದೇಶದಲ್ಲೆ ಹೆಸರು ಮಾಡಲು ಸಾದ್ಯ. ಇಂದು ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ಚಾನೆಲ್ ಮಕ್ಕಳ ಭವಿಷ್ಯ ರೂಪಿಸುವ ಪಠ್ಯ ಹಾಗೂ ಪಠ್ಯೇತರ ಮಾಹಿತಿಗಳನ್ನು ಒಳಗೊಂಡ ಪತ್ರಿಕೆಯನ್ನು ತಂದಿದ್ದು ಇದು ಮಕ್ಕಳ ಭವಿಷ್ಯ ರೂಪಿಸುವ ಚಿಂತನೆ. ನಮ್ಮ ಬದುಕು ಕಟ್ಟೋಣ ತಂಡ ನೊಂದವರ ಸೇವೆ ಮಾಡುವ ಮೂಲಕ ಪ್ರಾರಂಭವಾಗಿದ್ದು ನಂತರ ಗ್ರಾಮೀಣ ಭಾಗದ ಬಡ ಕುಟುಂಬದ ವಿದ್ಯಾರ್ಥಿಗಳ ನೋವನ್ನು ಅರ್ಥಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ವಿಜಯವಾಣಿ ಪತ್ರಿಕೆ ,ದಿಗ್ವಿಜಯ ಚಾನೆಲ್ ಹಾಗೂ ರೋಟರಿ ಸಂಸ್ಥೆಯೊಂದಿಗೆ ಸೇರಿ ಗ್ರಾಮೀಣ ಭಾಗದ ಬಡ ಕುಟುಂಬದ ವಿದ್ಯಾರ್ಥಿಗಳು ದೇಶದಲ್ಲಿ ಗುರುತಿಸುವಂತೆ ಮಾಡುತ್ತೇವೆ ಎಂದು ಬದುಕುಕಟ್ಟೋಣ ತಂಡದ ಸಂಚಾಲಕ ಕೆ ಮೋಹನ್ ಕುಮಾರ್ ಹೇಳಿದರು.
ಅವರು ಬುಧವಾರ ವಿಜಯವಾಣಿ ಪತ್ರಿಕೆ ದಿಗ್ವಿಜಯ ಚಾನೆಲ್ ನೇತ್ರತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ, ವಿವೇಕಾನಂದ ವಿದ್ಯಾವರ್ಧಕ ಅನುದಾನಿತ ಪ್ರೌಢಶಾಲೆ ಮುಂಡಾಜೆ ಇವರ ಸಹಕಾರದಲ್ಲಿ ಬದುಕು ಕಟ್ಟೋಣ ತಂಡ ಉಜಿರೆ ಇವರ ಪ್ರಾಯೋಜಕತ್ವದಲ್ಲಿ ವಿಜಯವಾಣಿ ವಿದ್ಯಾರ್ಥಿ ಮಿತ್ರ ಉಚಿತ ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೋಬ್ಬರು ಶ್ರಮ ಜೀವಿಗಳಾಗಬೇಕು ಶ್ರಮದ ಲಾಭದಿಂದ ಒಂದಂಶವನ್ನು ಸಮಾಜಕ್ಕೆ ಮೀಸಲಿಡಬೇಕು ಆಗ ಅತ್ಮ ತ್ರುಪ್ತಿಯೊಂದಿಗೆ ಸಮಾಜದ ಅಭಿವೃದ್ದಿಯನ್ನು ಕಾಣುವ ಸೌಬಾಗ್ಯ ನಮ್ಮದಾಗುತ್ತದೆ. ಬದುಕು ಕಟ್ಟೋಣ ತಂಡದಿಂದ ಗ್ರಾಮೀಣ ಭಾಗದ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಾಗ್ರಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜೊತೆಗೆ ಎರಡು ಪ್ರತಿಭಾನ್ವಿತ ಅನಾಥ ವಿದ್ಯಾರ್ಥಿಗಳಿಗೆ 8 ಲಕ್ಷ ರೂ ವೆಚ್ಚದ ಮನೆ ನಿರ್ಮಾಣ ಮಾಡುತ್ತಿದ್ದು ಇದನ್ನು ಶೀಘ್ರ ಹಸ್ತಾಂತರಿಸಲಾಗುತ್ತದೆ. ಇಲ್ಲಿನ ಶಾಲೆಯ ಬೇಡಿಕೆಯಂತೆ ದ್ವನಿ ವರ್ದಕವನ್ನು ಬದುಕು ಕಟ್ಟೋಣ ತಂಡದಿಂದ ನೀಡಲಾಗುವುದು ಎಂದರು.
ಬೆಳ್ತಂಗಡಿ ರೋಟರಿ ಕ್ಲಬ್ ಅದ್ಯಕ್ಷ ಅನಂತ ಭಟ್ ಮಚ್ಚಿಮಲೆ ಮಾತನಾಡಿ ವಿಜಯವಾಣಿ ವಿದ್ಯಾರ್ಥಿ ಮಿತ್ರ ಬರೆ ಪತ್ರಿಕೆಯಲ್ಲ ಅದೊಂದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಯಂತ್ರ ಇದ್ದ ಹಾಗೆ ಅದರಲ್ಲಿ ಪಠ್ಯ ಜೊತೆಗೆ ದೇಶ ವಿದೇಶಗಳ ಮಾಹಿತಿ ಇದ್ದು ಇದನ್ನು ನಿತ್ಯ ವಿದ್ಯಾರ್ಥಿಗಳು ಒದಬೇಕು.ಇದಕ್ಕೆ ಹೆತ್ತವರು ಪ್ರೋತ್ಸಾಹ ನೀಡಬೇಕು. ಈ ಪತ್ರಿಕೆ ಗಜೆಟ್ ಗೆ ಸೇರಬಾರದು ಎಲ್ಲ ವಿದ್ಯಾರ್ಥಿಗಳು ಓದಿ ಅದನ್ನು ಜೋಪಾನವಾಗಿಸಿ ಮುಂದಿನ ವಿದ್ಯಾರ್ಥಿಗಳಿಗೆ ನೀಡಬೇಕು.ಈ ಸಂಕಲ್ಪವನ್ನು ಇಂದಿನಿಂದಲೇ ಮಾಡಿ ಎಂದರು. ವಿಜಯವಾಣಿ ಪತ್ರಿಕೆಯ ತಾಲೂಕು ವರದಿಗಾರ ಮನೋಹರ್ ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿ ವಿ ಅರ್ ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ ವಿಜಯಸಂಕೇಶ್ವರ್ ರವರು ಕಠಿಣ ಶ್ರಮ ಹಾಗೂ ಪ್ರಾಮಾಣಿಕತೆಗೆ ಅದ್ಯತೆ ಕೊಡುವವರು.ಅದ್ದರಿಂದ ಮಾದ್ಯಮ ಹಾಗು ಸಾರಿಗೆ ವಲಯದಿಂದ ದೇಶದಲ್ಲೆ ಗುರುತಿಸಿಕೊಂಡವರು. ಪ್ರತಿಯೊಬ್ಬ ಮಕ್ಕಳು ಉನ್ನತ ಸಾದನೆ ಮಾಡಬೇಕು ಎಂಬ ಕಲ್ಪನೆಯಿಂದ ವಿಜಯವಾಣಿ ವಿದ್ಯಾರ್ಥಿ ಮಿತ್ರ ಹೊರತಂದಿದ್ದು ಇದನ್ನು ಓದಿ ಉನ್ನತ ಸಾದನೆ ಮಾಡಬೇಕು ಎಂದರು. ಮುಂಡಾಜೆ ವಿವೇಕಾನಂದ ವಿದ್ಯಾವರ್ದಕ ಅನುದಾನಿತ ಶಾಲೆಯ ಅದ್ಯಕ್ಷ ವಿನಯಚಂದ್ರ ಕೆ ಅದ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಶಾಲಾ ಮಕ್ಕಳ ಭವಿಷ್ಯ ರೂಪಿಸಲು ವಿಜಯವಾಣಿ ಪತ್ರಿಕೆ,ದಿಗ್ವಿಜಯ ಚಾನೆಲ್,ಬದುಕು ಕಟ್ಟೋಣ ತಂಡ,ರೋಟರಿ ಸಂಸ್ಥೆ ಮುಂದಾಗಿರುವುದು ನಮ್ಮ ಸೌಭಾಗ್ಯ.ಮುಂದೆಯೂ ನಮ್ಮ ಸಹಕಾರ ನಿರಂತರ ಇದೆ ಎಂದರು.ಉದ್ಯಮಿ ಉಜಿರೆ ಅನೃತ್ ಟೆಕ್ಸ್ ಟೈಲ್ಸ್ ನ ಮಾಲಕ ಪ್ರಶಾಂತ್ ಜೈನ್ ಉಪಸ್ಥಿತರಿದ್ದರು. ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯ ಶಶಿದರ ಕಲ್ಮಂಜ ಸ್ವಾಗತಿಸಿ ನಿರೂಪಿಸಿದರು.ಶಿಕ್ಷಕ ಸುರೇಶ್ ವಂದಿಸಿದರು.ಮುಖ್ಯೋಪಾಧ್ಯಾಯಿನಿ ಜಯಂತಿ ಟಿ,ವಿಜಯವಾಣಿ ಜಾಹೀರಾತು ವಿಭಾಗದ ಲತೇಶ್ ಶೆಟ್ಟಿ,ಪ್ರಸರಣ ವಿಭಾಗದ ಸುಕೇಶ್ ಅಡ್ಕೂರ್,ಗಿರೀಶ್ ಬನ್ನೂರು ಸಹಕರಿಸಿದರು.