29.6 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗಂಡಿಬಾಗಿಲು ಸೈಂಟ್ ಥೋಮಸ್ ಚರ್ಚ್‌ ಮತ್ತು ಗ್ರೋಟ್ಟೊ ಕಾಣಿಕೆ ಡಬ್ಬಿ ಕಳ್ಳತನ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ನೆರಿಯ: ನೆರಿಯ ಗ್ರಾಮದ ಗಂಡಿಬಾಗಿಲು ಸಂತ ಥೋಮಸರ ದೇವಾಲಯ ಮತ್ತು ಸಂತ ಮರಿಯಮ್ಮ ಗ್ರೊಟ್ಟೋ ದ ಕಾಣಿಕೆ ಡಬ್ಬಿಯನ್ನು ಮಂಗಳವಾರ ರಾತ್ರಿ ಕಳ್ಳರು ಹಾನಿಎಸಗಿ ಕಳ್ಳತನಗೈದಿದ್ದಾರೆ.

ಬುಧವಾರ ಬೆಳಗ್ಗೆಯಷ್ಟೇ ವಿಚಾರ ಬಹಿರಂಗವಾಗಿದ್ದು. ಚರ್ಚ್‌ನ ಮುಂಭಾಗದಲ್ಲಿದ್ದ ಕಾಣಿಕೆ ಡಬ್ಬಿಯ ಬೀಗ ಮುರಿಯಲಾಗಿದ್ದು ಅದರಲ್ಲಿದ್ದ ನಗದನ್ನು ಅಪಹರಿಸಲಾಗಿದೆ. ಕಾಣಿಕೆ ಡಬ್ಬಿಗೆ ಹಾನಿಯಾಗಿದೆ.
ಇಲ್ಲಿಂದ ಅಣತಿ ದೂರದ ಆಲಂಗಾಯಿ ತಿರುವು ರಸ್ತೆ‌ ಬಳಿ ಇರುವ ಸಂತ ಮರಿಯಮ್ಮರ ಗ್ರೋಟ್ಟೋ ಬಳಿಯ ಕಾಣಿಕೆ ಡಬ್ಬಿಯನ್ನೇ ಕಳ್ಳರು ಅಪಹರಿಸಿದ್ದಾರೆ.


ಚರ್ಚ್‌ನ ಧರ್ಮಗುರುಗಳು ಕಾರ್ಯನಿಮಿತ್ತ ರಾತ್ರಿ ಧರ್ಮಪ್ರಾಂತ್ಯಕ್ಕೆ ತೆರಳಿದ್ದರು‌. ಆ. 1 ರಂದು ಬೆಳಗ್ಗೆ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಚರ್ಚ್ ನ ಆಡಳಿತ ಮಂಡಳಿ ಕಡೆಯಿಂದ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ. ಅವರು ಸ್ಥಳಕ್ಕೆ ಬಂದು ಮಹಜರು ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ. ಗ್ರೋಟ್ರೋ ಬಳಿಯ ವಿನು ಪುದಿಯಡತ್ತ್ ಅವರ ಮನೆಯ ಸಿಸಿ ಕೆಮರಾ ಪುಟೇಜ್ ಸಂಗ್ರಹಿಸಿಕೊಂಡಿರುವ ಪೊಲೀಸರು ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

Related posts

ಧರ್ಮಾಸ್ಟಳ ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಕ್ಕೆ ಗೋವಾ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ಭೇಟಿ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಲ್ಯಾನ್ಸಿ ಫೆರ್ನಾಂಡಿಸ್ ಇಸ್ರೇಲ್ ನಲ್ಲಿ ನಿಧನ

Suddi Udaya

ಕೊಕ್ಕಡ: ಯುವಕ ಸಂಶಯಾಸ್ಪದ ಸಾವು: ಪೊಲೀಸರ ತನಿಖೆ

Suddi Udaya

ಉಜಿರೆ: ಪಾದಚಾರಿಗಳ ಮೇಲೆ ಹರಿದ ಲಾರಿ: ಇಬ್ಬರು ಸಾವು

Suddi Udaya

ಹಿರಿಯ ಸಾಹಿತಿ ಎನ್ ಜಿ ಪಟವರ್ಧನ್ ಅವರ ಕೃತಿ ‘ಆಟ’ ಲೋಕಾರ್ಪಣೆ

Suddi Udaya

ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾಧವ ಗೌಡ ಓಣಾಜೆ

Suddi Udaya
error: Content is protected !!