ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 46 ಗ್ರಾಮ ಪಂಚಾಯತುಗಳ ಮುಂದಿನ 30 ತಿಂಗಳ ಅವಧಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಈಗಾಗಲೇ ನೇಮಕಗೊಂಡ ಚುನಾವಣಾಧಿಕಾರಿಗಳು ಚುನಾವಣೆಗೆ ದಿನ ನಿಗದಿಗೊಳಿಸಿದ್ದು, ಗ್ರಾಮೀಣ ರಾಜಕೀಯ ಕಣ ಚುರುಕುಗೊಂಡಿದೆ. ಪ್ರತಿ ಪಂಚಾಯತುಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಭ್ಯರ್ಥಿಯ ಆಯ್ಕೆ ಚಟುವಟಿಕೆ ಬಿರುಸುಗೊಂಡಿದೆ.
ಆಗಸ್ಟ್ 3 ರಂದು ಸುಲ್ಕೇರಿ, ಕಾಶಿಪಟ್ಣ, ಮರೋಡಿ ಗ್ರಾಮ ಪಂಚಾಯತುಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಆಗಸ್ಟ್ 4ರಂದು ಮಚ್ಚಿನ, ಆಗಸ್ಟ್ 5ರಂದು ಕಳಿಯ, ಆಗಸ್ಟ್ 7ರಂದು ಶಿರ್ಲಾಲು, ನಾವೂರು, ಮುಂಡಾಜೆ, ಇಳಂತಿಲ, ತಣ್ಣೀರುಪಂತ, ಪಟ್ರಮೆ, ಕಣಿಯೂರು ಗ್ರಾಮ ಪಂಚಾಯತುಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಆಗಸ್ಟ್ 8ರಂದು ಕೊಯ್ಯೂರು, ನೆರಿಯ, ಬಾರ್ಯ, ತೆಕ್ಕಾರು, ಕಳಂಜ, ಬಂದಾರು, ಬೆಳಾಲು, ಮಡಂತ್ಯಾರು, ಆಗಸ್ಟ್ 9ರಂದು ಚಾರ್ಮಾಡಿ, ಪುದುವೆಟ್ಟು, ಮಾಲಾಡಿ, ಶಿಬಾಜೆ, ಶಿಶಿಲ, ಆಗಸ್ಟ್ 10ರಂದು ಅಳದಂಗಡಿ, ನಾರಾವಿ, ಹೊಸಂಗಡಿ, ಉಜಿರೆ, ಕಲ್ಮಂಜ, ನಿಡ್ಲೆ, ಅರಸಿನಮಕ್ಕಿ, ಕೊಕ್ಕಡ, ಲಾಯಿಲ, ಆಗಸ್ಟ್ 11ರಂದು ಬಳಂಜ, ಅಂಡಿಂಜೆ, ನಡ, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ.
ಚುನಾವಣಾಧಿಕಾರಿಗಳು:
ನಾರಾವಿ, ಮರೋಡಿ, ಹೊಸಂಗಡಿ, ಕಾಶಿಪಟ್ಣ-ರಂಜನ್ ಕುಮಾರ್ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ, ಅಂಡಿಂಜೆ, ಕುಕ್ಕೇಡಿ-ಮಹಿಮ್‌ಜನ್ನು ವಲಯ ಅರಣ್ಯಾಧಿಕಾರಿ ವೇಣೂರು, ಅಳದಂಗಡಿ, ಸುಲ್ಕೇರಿ, ಶಿರ್ಲಾಲು, ಬಳಂಜ- ಹೇಮಚಂದ್ರ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬೆಳ್ತಂಗಡಿ. ಪಡಂಗಡಿ, ಕುವೆಟ್ಟು, ಮೇಲಂತಬೆಟ್ಟು, ಲಾಲ- ವಿರೂಪಾಕ್ಷ ಹೆಚ್.ಎಸ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳ್ತಂಗಡಿ. ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಇಂದಬೆಟ್ಟು- ಡಾ| ಮಂಜನಾಯ್ಕ ಮುಖ್ಯ ಪಶು ವೈಧ್ಯಾಧಿಕಾರಿ ಪಶುಸಂಗೋಪನಾ ಇಲಾಖೆ. ನಡ, ನಾವೂರು, ಉಜಿರೆ, ಕೊಯ್ಯೂರು-ಲಿಖಿತ್‌ರಾಜ್ ಸಹಾಯಕ ತೋಟಗಾರಿಕಾ ನಿದೇರ್ಶಕರು ರಾಜ್ಯವಲಯ ಮದ್ದಡ್ಕ. ಮುಂಡಾಜೆ, ಕಲ್ಮಂಜ, ಚಾರ್ಮಾಡಿ, ನೆರಿಯ-ಗುರುಪ್ರಸಾದ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿಡ್ಲ್ಯೂಡಿ ಬೆಳ್ತಂಗಡಿ. ಬೆಳಾಲು, ಬಂದಾರು, ಕಣಿಯೂರು, ಧರ್ಮಸ್ಥಳ-ವಿದ್ಯಾ ಪಿ.ಡಿ ವಲಯ ಅರಣ್ಯಾಧಿಕಾರಿ ಸಾಮಾಜಿಕ ಅರಣ್ಯ ಇಲಾಖೆ ಬೆಳ್ತಂಗಡಿ. ಪುದುವೆಟ್ಟು, ನಿಡ್ಲೆ, ಕಳಂಜ ಪಟ್ರಮೆ-ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಮೆಸ್ಕಾಂ ಉಜಿರೆ. ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಕೊಕ್ಕಡ- ರವೀಂದ್ರ ಕಾರ್ಯದರ್ಶಿ ಎಪಿಎಂಸಿ ಬೆಳ್ತಂಗಡಿ. ತಣ್ಣೀರುಪಂತ, ಬಾರ್ಯ, ತೆಕ್ಕಾರು, ಇಳಂತಿಲ- ಶಿವಶಂಕರ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಮೆಸ್ಕಾಂ ಬೆಳ್ತಂಗಡಿ. ಮಡಂತ್ಯಾರು, ಮಾಲಾಡಿ, ಕಳಿಯ, ಮಚ್ಚಿನ ಕೆ.ಎಸ್ ಚಂದ್ರಶೇಖರ್ ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ ಬೆಳ್ತಂಗಡಿ.