September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಕ್ಸೆಲ್ ನ ವಿದ್ಯಾರ್ಥಿಗಳು ಬನಾರಸ್ ಹಿಂದೂ ವಿ.ವಿ, ಎ ಐ ಐ ಎಂ ಎಸ್ ಭೋಪಾಲ್ ಸೇರಿ, ದೇಶದ ಅತ್ಯುನ್ನತ ಮೆಡಿಕಲ್ ಕಾಲೇಜುಗಳಲ್ಲಿ ಓದಿಗೆ ಆಯ್ಕೆ

ರಾಜ್ಯದ ಶೈಕ್ಷಣಿಕ ಭೂಪಟದಲ್ಲಿ ತನ್ನ ಅನನ್ಯ ದಾಖಲೆಗಳ ಮೂಲಕ ಮನೆಮಾತಾದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈಗ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸಿಕೊಳ್ಳುವ ಸಾಧನೆ ಮಾಡಿದ್ದಾರೆ.

ಅತ್ಯುತ್ತಮ ಪಿಯು ಫಲಿತಾಂಶ ಮತ್ತು ನೀಟ್ ನಲ್ಲಿ 692 ಅಂಕಗಳನ್ನು ಪಡೆದಿದ್ದ ಆದಿತ್ ಜೈನ್ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಆಯ್ಕೆಯಾಗಿದ್ದಾರೆ. ವರ್ಷ ವೊಂದಕ್ಕೆ ಎಂ.ಬಿ.ಬಿ.ಎಸ್ ಗೆ ಕೇವಲ ನೂರು ಸೀಟುಗಳಿರುವ ಈ ವಿಶ್ವ ವಿದ್ಯಾಲಯದಲ್ಲಿ ಆದಿತ್ ಆಯ್ಕೆಯಾಗಿರುವುದು ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಳ್ಳುವಂತಹ ಇನ್ನೋರ್ವ ಸಾಧಕಿ ಸಂಜನಾ ಈರನೈವರ್. ವರ್ಷವೊಂದಕ್ಕೆ ನೂರ ಇಪ್ಪತ್ತೈದು ಸೀಟುಗಳಿರುವ ಅತ್ಯಂತ ಪ್ರತಿಷ್ಠಿತ ಎ ಐ ಐ ಎಂ ಎಸ್ (AIIMS) ಭೋಪಾಲ್ ನಲ್ಲಿ ವ್ಯಾಸಂಗಕ್ಕೆ ಆಯ್ಕೆಯಾಗಿದ್ದಾರೆ.

ಎಕ್ಸೆಲ್ ನಲ್ಲಿ ಶಿಕ್ಷಣ ಪಡೆದ ಹಲವು ವಿದ್ಯಾರ್ಥಿಗಳು ಈ ಬಾರಿಯೂ ರಾಷ್ಟ್ರ – ಅಂತಾರಾಷ್ಟ್ರೀಯ ಮಟ್ಟದ ವಿವಿಧ ಮೆಡಿಕಲ್ ಕಾಲೇಜು ಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾಗಿರುವುದು ಉಲ್ಲೇಖನೀಯ.ಸಾಧಕರನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು, ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ಬೆಳಾಲು ಗ್ರಾಮದ ಮುಂಡ್ರೊಟ್ಟು ಪರಿಸರದಲ್ಲಿ ನೀರಿನ ಸಮಸ್ಯೆ: ತುರ್ತು ಕ್ರಮಕ್ಕೆ ಶಾಸಕರ ಸೂಚನೆ

Suddi Udaya

ಕಕ್ಯಪದವು ಲಾವಣ್ಯ ಹತ್ಯೆ ಆರೋಪಿಗೆ ನ್ಯಾಯಾಂಗ ಬಂಧನ

Suddi Udaya

ಪ್ರತಿಭಾ ಕಾರಂಜಿ: ಸ್ಟಾರ್‌ಲೈನ್ ಆಂ.ಮಾ. ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

Suddi Udaya

ಹುಟ್ಟುಹಬ್ಬದಂದು ವಿಶೇಷ ಸೇವಾ ಕಾರ್ಯ : ಉದ್ಯಮಿ ತಿಮ್ಮಪ್ಪ ಶೆಟ್ಟಿರವರಿಂದ ಜ್ಞಾನಯೋಗಿ ಫೌಂಡೇಶನ್ ಸಾಂಗ್ಲಿ ಅಭಿವೃದ್ಧಿ ಕಾರ್ಯಗಳಿಗೆ ರೂ. 41 ಲಕ್ಷ ದೇಣಿಗೆ

Suddi Udaya

ಧರ್ಮಸ್ಥಳ: ದೊಂಡೋಲೆ ಪರಶುರಾಮ ದೇವಸ್ಥಾನಕ್ಕೆ ಮುಖ್ಯಮಂತ್ರಿಯವರ ಕಾರ್ಯದರ್ಶಿ ಗೋಪಾಲ್ ಪಿ. ಎ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ:

Suddi Udaya
error: Content is protected !!