25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು: ಸ.ಪ್ರೌ. ಶಾಲೆಯಲ್ಲಿ ಶಾಲಾ ಪಾರ್ಲಿಮೆಂಟ್ ಉದ್ಘಾಟನೆ


ಕೊಯ್ಯೂರು : ಸರಕಾರಿ ಪ್ರೌಢಶಾಲೆ ಕೊಯ್ಯೂರು ಇಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಶಾಲಾ ಪಾರ್ಲಿಮೆಂಟ್  ಉದ್ಘಾಟನೆ  ಇತ್ತೀಚೆಗೆ ನಡೆಯಿತು. 

ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇದರ ಅಧ್ಯಕ್ಷ ಸುಮಂತ್ ಜೈನ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.ಬಳಿಕ  ನಡೆದ ಅಣಕು ಪಾರ್ಲಿಮೆಂಟ್ ನಲ್ಲಿ ರಾಷ್ಟ್ರಪತಿ ಭಾಷಣ ಮಾಡಿದರು. ನಂತರ ನಡೆದ ಕಲಾಪವನ್ನು ವೀಕ್ಷಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಕುರಿತು ಭಾಷಣ ಮಾಡುತ್ತಾ  ರಾಜಕೀಯ ಒಂದು ಉದ್ಯೋಗವಾಗಬಾರದು  ಅದೊಂದು ಜವಾಬ್ಧಾರಿಯಾಗಿದೆ. ನಾಯಕ ಯಾವತ್ತೂ ಸ್ಥಾನದಿಂದ ಆಗಬಾರದು ಬದಲಾಗಿ ಆತನ ನಡವಳಿಕೆಯಿಂದ ಆಗಬೇಕು.ಶಿಕ್ಷಣದ ಬೇರು ಕಹಿ ಆದರೂ ಅದರ ಫಲ  ಎಂದಿಗೂ ಸಿಹಿಯಾಗಿರುತ್ತದೆ. ಸಂವಿಧಾನದಲ್ಲಿ ಎಲ್ಲರಿಗೂ ಅವಕಾಸವಿದೆ ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆಯಬೇಕು ಎಂದರು.

ಶಾಲೆಯಲ್ಲಿ ನಡೆದ ವಿದ್ಯಾರ್ಥಿನಾಯಕ ಚುನಾವಣೆಯಲ್ಲಿ ಶಾಲಾನಾಯಕನಾಗಿ ಪೂರ್ಣೇಶ್  ಹತ್ತನೇ ತರಗತಿ  ಆಯ್ಕೆಯಾಗಿರುತ್ತಾರೆ. ಸಭಾಪತಿಯಾಗಿ  ಶಹದಿಯಾ ಹತ್ತನೇ ತರಗತಿ  ಕಲಾಪ ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ರಾಧಾಕೃಷ್ಣ ತಚ್ಚಮೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಕ್ಸೆಲ್ ಪ.ಪೂ. ಕಾಲೇಜು ಇಲ್ಲಿಯ ಆಡಳಿತಾಧಿಕಾರಿ ಪುರುಷೋತ್ತಮ, ಲೆಕ್ಕಾಧಿಕಾರಿ ಋತೇಶ್, ಪ್ರಾಚೀನ ವಸ್ತು ಸಂಗ್ಹಕಾರ  ಹೈದರಾಲಿ ಹಳ್ಳಿಮನೆ ಉಪಸ್ಥಿತರಿದ್ದರು .

ಶಿಕ್ಷಕರಾದ ಶ್ರೀಮತಿ ಬೇಬಿ ಶ್ರೀಮತಿ ದೀಪ್ತಿ ಹೆಗ್ಡೆ,ಶ್ರೀಮತಿ ಗೀತಾ ಉಡುಪಿ. ಸುಧಾಕರ ಶೆಟ್ಟಿ, ಪ್ರವೀಣ್ ಕುಮಾರ್, ಮೋಹನದಾಸ  ಸಹಕರಿಸಿದರು. ರಾಮಚಂದ್ರ ದೊಡಮನಿ ವಂದಿಸಿದರು.

Related posts

ಕುವೆಟ್ಟು, ಓಡಿಲ್ನಾಳ ಗ್ರಾಮದ ಕಾಂಗ್ರೆಸ್ ಬೂತ್ ಸಮಿತಿಯ ಸಭೆ

Suddi Udaya

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ, ಹೊಸ ಉತ್ಪನ್ನಗಳ ಪರಿಚಯದ ಸ್ಪರ್ಧಾ ಕಾರ್ಯಕ್ರಮ

Suddi Udaya

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ : ಮೊಹಮ್ಮದ್ ಅಫ್ಹಾನ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ

Suddi Udaya

ಉಜಿರೆ: ದಿ| ಯಶೋವರ್ಮ ಅವರ ಎಪ್ಪತ್ತರ ಜನ್ಮದಿನದ ಸ್ಮರಣೆಯ ಅಂಗವಾಗಿ ಸಂಸ್ಕೃತ ಭಾಷಾ ವಿದ್ಯಾರ್ಥಿಗಳು ರಚಿಸಿದ ಎಪ್ಪತ್ತು ಭಿತ್ತಿಪತ್ರಿಕೆಗಳ ಅನಾವರಣ

Suddi Udaya

ಶಿರ್ಲಾಲು ರಮಾನಂದ ಟೈಲರ್ ನಿಧನ

Suddi Udaya

ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವ

Suddi Udaya
error: Content is protected !!