ಮರೋಡಿ: ಮರೋಡಿ ಗ್ರಾಮ ಪಂಚಾಯತ್ ನ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಮೀಸಲಾಗಿದ್ದು,ಅಧ್ಯಕ್ಷರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಯುವ ನಾಯಕ ,ಉದ್ಯಮಿ ರತ್ನಾಕರ ಬುಣ್ಣನ್ ಪರಬೆಟ್ಟು ಮರೋಡಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಮೀಸಲಾಗಿದ್ದು ಯುವ ನಾಯಕ, ಸಮಾಜಸೇವಕ ಶುಭರಾಜ್ ಹೆಗ್ಡೆ ಪಾಣಲು ದರ್ಖಾಸು ಮರೋಡಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್ ಚುನಾವಣಾ ಪಕ್ರೀಯೆಯನ್ನು ನಡೆಸಿಕೊಟ್ಟರು., ಉಪ ಚುನಾವಣಾಧಿಕಾರಿಯಾಗಿ ಮರೋಡಿ ಗ್ರಾಮ ಪಂಚಾಯತ್ ಪಂ.ಅ.ಅಧಿಕಾರಿ ವಾಸುದೇವ ಕೆ.ಜಿ,ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಪದ್ಮಶ್ರೀ ಜೈನ್,ಉಪಾಧ್ಯಕ್ಷ ಯಶೋಧರ ,ಸದಸ್ಯರಾದ ರತ್ನಾಕರ, ಉಮೇಶ,ಅಶೋಕ,ಶುಭರಾಜ ಹೆಗ್ಡೆ,ಧನಲಕ್ಷ್ಮಿ,ಉಮಾವತಿ,ಸಮಿತ,ಸುನಂದ,ಯಶೋಧ ಉಪಸ್ಥಿತರಿದ್ದರು.
ಕಳೆದ ಎರಡೂವರೆ ವರ್ಷದಲ್ಲಿ ಅಧ್ಯಕ್ಷೆ ಪದ್ಮಶ್ರೀ ಜೈನ್,ಉಪಾಧ್ಯಕ್ಷ ಯಶೋಧರ ಆಚಾರ್ಯ ಹಾಗೂ ಸದಸ್ಯರ ನೇತೃತ್ವದಲ್ಲಿ ಗ್ರಾಮದಲ್ಲಿ ಉತ್ತಮ ಕೆಲಸ ಕಾರ್ಯಗಳು ನಡೆದಿದೆ.