ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮರೋಡಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಯುವ ನಾಯಕ ರತ್ನಾಕರ ಬುಣ್ಣನ್ , ಉಪಾಧ್ಯಕ್ಷರಾಗಿ ಶುಭರಾಜ್ ಹೆಗ್ಡೆ ಅವಿರೋಧವಾಗಿ ಆಯ್ಕೆ

ಮರೋಡಿ: ಮರೋಡಿ ಗ್ರಾಮ ಪಂಚಾಯತ್ ನ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಮೀಸಲಾಗಿದ್ದು,ಅಧ್ಯಕ್ಷರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಯುವ ನಾಯಕ ,ಉದ್ಯಮಿ ರತ್ನಾಕರ ಬುಣ್ಣನ್ ಪರಬೆಟ್ಟು ಮರೋಡಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಮೀಸಲಾಗಿದ್ದು ಯುವ ನಾಯಕ, ಸಮಾಜಸೇವಕ ಶುಭರಾಜ್ ಹೆಗ್ಡೆ ಪಾಣಲು ದರ್ಖಾಸು ಮರೋಡಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್ ಚುನಾವಣಾ ಪಕ್ರೀಯೆಯನ್ನು ನಡೆಸಿಕೊಟ್ಟರು., ಉಪ ಚುನಾವಣಾಧಿಕಾರಿಯಾಗಿ ಮರೋಡಿ ಗ್ರಾಮ ಪಂಚಾಯತ್ ಪಂ.ಅ.ಅಧಿಕಾರಿ ವಾಸುದೇವ ಕೆ.ಜಿ,ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಪದ್ಮಶ್ರೀ ಜೈನ್,ಉಪಾಧ್ಯಕ್ಷ ಯಶೋಧರ ,ಸದಸ್ಯರಾದ ರತ್ನಾಕರ, ಉಮೇಶ,ಅಶೋಕ,ಶುಭರಾಜ ಹೆಗ್ಡೆ,ಧನಲಕ್ಷ್ಮಿ,ಉಮಾವತಿ,ಸಮಿತ,ಸುನಂದ,ಯಶೋಧ ಉಪಸ್ಥಿತರಿದ್ದರು.

ಕಳೆದ ಎರಡೂವರೆ ವರ್ಷದಲ್ಲಿ ಅಧ್ಯಕ್ಷೆ ಪದ್ಮಶ್ರೀ ಜೈನ್,ಉಪಾಧ್ಯಕ್ಷ ಯಶೋಧರ ಆಚಾರ್ಯ ಹಾಗೂ ಸದಸ್ಯರ ನೇತೃತ್ವದಲ್ಲಿ ಗ್ರಾಮದಲ್ಲಿ ಉತ್ತಮ ಕೆಲಸ ಕಾರ್ಯಗಳು ನಡೆದಿದೆ.

Related posts

ಪಡಂಗಡಿ ಗ್ರಾ.ಪಂ. ಅಧ್ಯಕ್ಷರಾಗಿ ಪ್ರಶಾಂತ್ ಸುವರ್ಣ, ಉಪಾಧ್ಯಕ್ಷರಾಗಿ ಪಿ.ಎನ್ ವಸಂತಿ ಅವಿರೋಧ ಆಯ್ಕೆ

Suddi Udaya

ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ ಷಣ್ಮುಖ, ಪ್ರ.ಕಾರ್ಯದರ್ಶಿಯಾಗಿ ಶ್ರೇಯಸ್ ಆಯ್ಕೆ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಗೆ ಬೋರ್‌ವೆಲ್ ಸೌಲಭ್ಯವನ್ನು ಒದಗಿಸಿದ ಶಾಸಕ ಹರೀಶ್ ಪೂಂಜ

Suddi Udaya

ಅಂಡಿಂಜೆ : ಪರಮೇಶ್ವರ ಕೆ. ನಿಧನ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವೀಲ್ ಚಯರ್ ವಿತರಣೆ

Suddi Udaya

ಲಾಯಿಲ: ಶ್ರೀ ಗುರು ರಾಘವೇಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದಿಂದ ಶ್ರೀ ಶನೇಶ್ವರ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!