25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ: ಸುದ್ದಿ ಉದಯ ವಾರಪತ್ರಿಕೆ ವರದಿಗೆ ಅಳದಂಗಡಿ ಗ್ರಾ.ಪಂನಿಂದ ಸ್ಪಂದನೆ: ಶೋಚನೀಯ ಸ್ಥಿಯಲ್ಲಿದ್ದ ಸೋರುತ್ತಿದ್ದ ಮನೆಯ ಮೇಲ್ಚಾವಣಿ ತೆರವು: ಮೇಲ್ಛಾವಣಿಗೆ ಶೀಟ್ ಅಳವಡಿಕೆಯ ಕೆಲಸ ಪ್ರಾರಂಭ,ಸಾರ್ವಜನಿಕರಿಂದ ಮೆಚ್ಚುಗೆ

ಅಳದಂಗಡಿ: ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳುಗುಡ್ಡೆ ಪರಿಸರದ ಶೋಚನೀಯ ಪರಿಸ್ಥಿತಿಯಲ್ಲಿ,ಸೋರುವ ಜೋಪಡಿಯಲ್ಲಿ ಬದುಕು ಸಾಗುಸುತ್ತಿದ್ದ ಪ್ರೇಮರವರ ಮನೆಯ ಬಗ್ಗೆ ಸುದ್ದಿ ಉದಯ ವಾರಪತ್ರಿಕೆ ವರದಿ ಮಾಡಿದ್ದು ಇಂದು ಅಳದಂಗಡಿ ಗ್ರಾ.ಪಂ ವತಿಯಿಂದ ಶೀಟ್ ಅಳವಡಿಸುವ ಕೆಲಸ ಕಾರ್ಯ ಪ್ರಾರಂಭಗೊಂಡಿದೆ.

ಅಳದಂಗಡಿ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್ ಭೇಟಿ ನೀಡಿ ಶೀಟ್ ಅಳವಡಿಸುವ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ಇಂದು ಶೀಟ್ ಅಳವಡಿಸುವ ಕೆಲಸ ಪ್ರಾರಂಭಗೊಂಡಿದೆ.

ಇಗಾಗಲೇ ಮೇಲ್ಛಾವಣಿ ತೆರವುಗೊಳಿಸಲಾಗಿದೆ. ಮನೆಯ ಮುಖ್ಯಬಾಗಿಲಿನ‌ ಕೆಲಸವಾಗುತ್ತಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

Related posts

ಬೆಳ್ತಂಗಡಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಹಾರಕ್ಕೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ

Suddi Udaya

ಮಾಚಾರು: ಕೋರ್ಯಾರು ನಿವಾಸಿ ಜಯಗೌಡ ನಿಧನ

Suddi Udaya

ಪುಂಜಾಲಕಟ್ಟೆ – ಚಾಮಾ೯ಡಿ‌ ಹೆದ್ದಾರಿ ಕಾಮಗಾರಿ ಗುತ್ತಿಗೆಯಲ್ಲಿ ಬದಲಾವಣೆ: ಮೊಗ್ರೋಡಿ ಕನ್ ಸ್ಟ್ರಕ್ಷನ್ ಗೆ ನೀಡುವ ಕುರಿತು ನಿಧಾ೯ರ

Suddi Udaya

ಬೆಳ್ತಂಗಡಿಯಲ್ಲಿ ಅಕ್ರಮವಾಗಿ ಗೋ ಸಾಗಾಟ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ಸಮಿತಿ ವಿನೂತನ ಮಾದರಿಯಲ್ಲಿ ತನ್ನ ತಾಲೂಕು ಅಧಿವೇಶನದ ಆಹ್ವಾನ ಪತ್ರಿಕೆ ಅನಾವರಣ

Suddi Udaya

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಪ್ರಶಾಂತ್ ಅಡ್ಡರ್ ಎ.ಎಸ್.ಐ ಆಗಿ ಪದೋನ್ನತಿ

Suddi Udaya
error: Content is protected !!